ನೀನು ಬಂದ್ರೆ ಇಲ್ಲಿನ ವಾತಾವರಣ ಹಾಳಾಗುತ್ತೆ, ಅತ್ಯಾಚಾರ ಸಂತ್ರಸ್ತೆಗೆ ಪರೀಕ್ಷೆ ಬರೆಯಲು ಬಿಡದ ಶಿಕ್ಷಕರು

ಅತ್ಯಾಚಾರ ಸಂತ್ರಸ್ತೆಗೆ ಧೈರ್ಯ ತುಂಬಿ ಏನೂ ಆಗಿಲ್ಲ, ನೀನು ಪರೀಕ್ಷೆ ಬರೆದು ನಿನ್ನ ಕಾಲ ಮೇಲೆ ನಿಂತು ಎಲ್ಲವನ್ನೂ ಎದುರಿಸಬೇಕು ನಿನ್ನ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬ ಬೇಕಾದ ಶಿಕ್ಷಕರೇ ಆಕೆಯನ್ನು ದೂರ ಇಟ್ಟರೆ ಆ ವಿದ್ಯಾರ್ಥಿನಿಯ ಮನಸ್ಸಿಗೆ ಎಷ್ಟು ಆಘಾತವಾಗಿರಬೇಡ.

ನೀನು ಬಂದ್ರೆ ಇಲ್ಲಿನ ವಾತಾವರಣ ಹಾಳಾಗುತ್ತೆ, ಅತ್ಯಾಚಾರ ಸಂತ್ರಸ್ತೆಗೆ ಪರೀಕ್ಷೆ ಬರೆಯಲು ಬಿಡದ ಶಿಕ್ಷಕರು
ವಿದ್ಯಾರ್ಥಿನಿ-ಸಾಂದರ್ಭಿಕ ಚಿತ್ರImage Credit source: Odisha TV
Follow us
ನಯನಾ ರಾಜೀವ್
|

Updated on: Apr 05, 2024 | 11:21 AM

ಅತ್ಯಾಚಾರ ಸಂತ್ರಸ್ತೆಗೆ ಧೈರ್ಯ ತುಂಬಿ ಏನೂ ಆಗಿಲ್ಲ, ನೀನು ಪರೀಕ್ಷೆ ಬರೆದು ನಿನ್ನ ಕಾಲ ಮೇಲೆ ನಿಂತು ಎಲ್ಲವನ್ನೂ ಎದುರಿಸಬೇಕು ನಿನ್ನ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬ ಬೇಕಾದ ಶಿಕ್ಷಕರೇ ಆಕೆಯನ್ನು ದೂರ ಇಟ್ಟರೆ ಆ ವಿದ್ಯಾರ್ಥಿನಿಯ ಮನಸ್ಸಿಗೆ ಎಷ್ಟು ಆಘಾತವಾಗಿರಬೇಡ.

ರಾಜಸ್ಥಾನದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಳೆದ ವರ್ಷ ಸಾಮೂಹಿಕ ಅತ್ಯಾಚಾರವಾಗಿತ್ತು, ಈ ಕಾರಣವಿಟ್ಟುಕೊಂಡು ಅಧಿಕಾರಿಗಳು ಆಕೆಗೆ ಬೋರ್ಡ್​ ಪರೀಕ್ಷೆಗೆ ಹಾಜರಾಗಲು ಬಿಡದೆ ಅಮಾನವೀಯವಾಗಿ ನಡೆದುಕೊಂಡ ಘಟನೆ ವರದಿಯಾಗಿದೆ.

ನೀನು ಪರೀಕ್ಷೆಗೆ ಹಾಜರಾದರೆ ಇಲ್ಲಿನ ವಾತಾವರಣ ಹಾಳಾಗುವುದು ಎಂದು ಶಾಲಾ ಅಧಿಕಾರಿಗಳು ಹೇಳಿ ಆಕೆಯನ್ನು ಅಲ್ಲಿಂದ ಕಳುಹಿಸಿದ್ದರು ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ.

ಅಜ್ಮೀರ್‌ನ ಖಾಸಗಿ ಶಾಲೆಯು ವಿದ್ಯಾರ್ಥಿನಿ 4 ತಿಂಗಳಿನಿಂದ ತರಗತಿಗಳಿಗೆ ಹಾಜರಾಗದ ಕಾರಣ ಅವರು ಪ್ರವೇಶ ಪತ್ರವನ್ನು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿನಿ ಬೇರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ, ಅವರು ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಸಲಹೆ ನೀಡಿದರು. ಅಜ್ಮೀರ್‌ನ ಮಕ್ಕಳ ಕಲ್ಯಾಣ ಆಯೋಗ (ಸಿಡಬ್ಲ್ಯೂಸಿ) ಪ್ರಕರಣ ದಾಖಲಿಸಿದ್ದು, ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಿದೆ.

ಇಡೀ ಘಟನೆಯ ಬಗ್ಗೆ ವಿದ್ಯಾರ್ಥಿಯೊಂದಿಗೆ ಮಾತನಾಡಿದ್ದೇನೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಅಂಜಲಿ ಶರ್ಮಾ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪ ಮತ್ತು ಇತರ ಇಬ್ಬರು ಪುರುಷರು ಅತ್ಯಾಚಾರ ಮಾಡಿದ್ದರು. ಅವಳು ಶಾಲೆಗೆ ಬರುವುದರಿಂದ ವಾತಾವರಣ ಹಾಳಾಗಬಹುದು ಎಂದು ಶಾಲೆಯವರು ಮನೆಯಿಂದಲೇ ಓದುವಂತೆ ಸೂಚಿಸಿದ್ದರು. ಆಕೆ ಒಪ್ಪಿಕೊಂಡು ಮನೆಯಿಂದಲೇ ಬೋರ್ಡ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.

ಆಕೆಯ ಪ್ರವೇಶ ಪತ್ರವನ್ನು ತೆಗೆದುಕೊಳ್ಳಲು ಹೋದಾಗ, ಅವಳು ಇನ್ನು ಮುಂದೆ ಶಾಲೆಯ ವಿದ್ಯಾರ್ಥಿಯಲ್ಲ ಎಂದು ಹೇಳಲಾಗಿತ್ತು. ಆಕೆಯ ಅತ್ಯಾಚಾರದ ನಂತರ ಇತರ ವಿದ್ಯಾರ್ಥಿಗಳ ಪೋಷಕರು ಆಕೆಯ ಉಪಸ್ಥಿತಿಯನ್ನು ವಿರೋಧಿಸಿದ್ದರಿಂದ ಶಾಲೆಯು ತನ್ನನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂಬುದನ್ನು ಅರಿತಳು.

ಆಕೆ ತನ್ನ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಆಕೆ 79% ಗಳಿಸಿದ್ದಾಳೆ, ಈಗ ಸ್ವಲ್ಪ ಖಿನ್ನತೆಗೆ ಒಳಗಾಗಿದ್ದಾಳೆ. ಶಾಲೆಯ ನಿರ್ಲಕ್ಷ್ಯದಿಂದಾಗಿ ಆಕೆಯ ಒಂದು ವರ್ಷ ನಷ್ಟವಾಯಿತು ಎಂದು ಅಂಜಲಿ ಶರ್ಮಾ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ