AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದನ ವಿರಾಮಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಸಮ್ಮತಿ, ನ.6ರಂದು ಮುಂದಿನ ಮಾತುಕತೆ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಇಸ್ತಾನ್‌ಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆಯ ನಂತರ, ಎರಡೂ ದೇಶಗಳು ಕದನ ವಿರಾಮವನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿವೆ. ಟರ್ಕಿಯ ವಿದೇಶಾಂಗ ಸಚಿವಾಲಯ ಗುರುವಾರ ಒಪ್ಪಂದವನ್ನು ಘೋಷಿಸಿತು, ಕತಾರ್ ಮತ್ತು ಟರ್ಕಿ ಮಾತುಕತೆಗಳಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿವೆ ಎಂದು ಹೇಳಿದೆ.

ಕದನ ವಿರಾಮಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಸಮ್ಮತಿ, ನ.6ರಂದು ಮುಂದಿನ ಮಾತುಕತೆ
ಪಾಕಿಸ್ತಾನ, ಅಫ್ಘಾನಿಸ್ತಾನ ಮಾತುಕತೆ
ನಯನಾ ರಾಜೀವ್
|

Updated on: Oct 31, 2025 | 7:22 AM

Share

ಇಸ್ತಾನ್ಬುಲ್, ಅಕ್ಟೋಬರ್ 31: ಪಾಕಿಸ್ತಾನ(Pakistan) ಹಾಗೂ ಅಫ್ಘಾನಿಸ್ತಾನ(Afghanistan) ಅಂತೂ ಒಂದು ಒಪ್ಪಂದಕ್ಕೆ ಬಂದಿವೆ. ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಗೆ ನೀಡಿವೆ. ಕುರಿತು ಟರ್ಕಿ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಮುಂದಿನ ಸುತ್ತಿನ ಮಾತುಕತೆ ನವೆಂಬರ್ 6ರಂದು ನಡೆಯಲಿದೆ ಎಂದು ಹೇಳಿದೆ. ಇಸ್ತಾನ್‌ಬುಲ್‌ನಲ್ಲಿ ಎರಡೂ ದೇಶಗಳ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು.

ಇಸ್ತಾನ್‌ಬುಲ್‌ನಲ್ಲಿ ನಾಲ್ಕು ದಿನಗಳ ನಂತರದ ಚರ್ಚೆಗಳು ಮಂಗಳವಾರ ಯಾವುದೇ ನಿರ್ದಿಷ್ಟ ಒಪ್ಪಂದವಿಲ್ಲದೆ ಕೊನೆಗೊಂಡಿತ್ತು. ಆದರೆ ಟರ್ಕಿ ಮತ್ತು ಕತಾರ್‌ನ ರಾಜತಾಂತ್ರಿಕ ಪ್ರಯತ್ನಗಳ ನಂತರ, ಎರಡೂ ಕಡೆಯವರು ಗುರುವಾರ ಮಾತುಕತೆ ನಡೆದಿ ಒಂದು ಒಪ್ಪಂದಕ್ಕೆ ಬಂದಿವೆ.

ಅಕ್ಟೋಬರ್ 25 ರಿಂದ 30 ರವರೆಗೆ ಇಸ್ತಾನ್‌ಬುಲ್‌ನಲ್ಲಿ ನಡೆದ ಅಫ್ಘಾನಿಸ್ತಾನ, ಪಾಕಿಸ್ತಾನ, ಟರ್ಕಿ ಮತ್ತು ಕತಾರ್ ನಡುವಿನ ಸಭೆಗಳು ಅಕ್ಟೋಬರ್ 18-19 ರಂದು ದೋಹಾದಲ್ಲಿ ನಡೆದ ಕದನ ವಿರಾಮ ಒಪ್ಪಂದವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದವು.

ಮತ್ತಷ್ಟು ಓದಿ: ಒಂದೊಮ್ಮೆ ಅಫ್ಘಾನಿಸ್ತಾನದೊಂದಿಗಿನ ಶಾಂತಿ ಮಾತುಕತೆ ವಿಫಲವಾದರೆ, ಅವರ ಮೇಲೆ ಯುದ್ಧ ಮಾಡುತ್ತೇವೆ ಎಂದ ಪಾಕಿಸ್ತಾನ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಕೊನೆಯ ಸುತ್ತಿನ ಮಾತುಕತೆ ವಿಫಲವಾದ ಕಾರಣ ವಾಗ್ಯುದ್ಧ ನಡೆದರೂ ಗಡಿಯಲ್ಲಿ ಶಾಂತಿ ನೆಲೆಸಿತ್ತು.  ಈ ವಾರ ಎರಡೂ ದೇಶಗಳ ನಡುವಿನ ಗಡಿ ಪ್ರದೇಶಗಳಲ್ಲಿ ಯಾವುದೇ ಹೊಸ ಘರ್ಷಣೆಗಳು ವರದಿಯಾಗಿಲ್ಲ. ಆದಾಗ್ಯೂ, ಎರಡೂ ದೇಶಗಳು ಪ್ರಮುಖ ಕ್ರಾಸಿಂಗ್‌ಗಳನ್ನು ಮುಚ್ಚಿರುವುದರಿಂದ ಸರಕುಗಳನ್ನು ಮತ್ತು ನಿರಾಶ್ರಿತರನ್ನು ಸಾಗಿಸುವ ನೂರಾರು ಟ್ರಕ್‌ಗಳು ಎರಡೂ ಕಡೆಗಳಲ್ಲಿ ಸಿಲುಕಿಕೊಂಡಿವೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಜಿಯೋ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಕತಾರ್ ಮತ್ತು ಟರ್ಕಿಯ ಕೋರಿಕೆಯ ಮೇರೆಗೆ ಪಾಕಿಸ್ತಾನವು ಶಾಂತಿಗೆ ಮತ್ತೊಂದು ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಮಾತುಕತೆ ಸಮಯದಲ್ಲಿ ಇಸ್ತಾನ್ಬುಲ್ನಲ್ಲಿ ಉಳಿಯಲು ಪಾಕಿಸ್ತಾನಿ ನಿಯೋಗಗಳನ್ನು ಕೇಳಲಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿದ್ದು, ಇದಕ್ಕೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಈ ಗುಂಪು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದೆ ಎಂದು ಇಸ್ಲಾಮಾಬಾದ್ ಹೇಳುತ್ತದೆ. ತನ್ನ ಪ್ರದೇಶವನ್ನು ಪಾಕಿಸ್ತಾನದ ವಿರುದ್ಧ ಬಳಸಲಾಗುತ್ತಿದೆ ಎಂಬುದನ್ನು ತಾಲಿಬಾನ್ ನಿರಾಕರಿಸಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದೆ. ಎರಡೂ ದೇಶಗಳ ಸೇನೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಡಜನ್ಗಟ್ಟಲೆ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ, ಟರ್ಕಿ ಮತ್ತು ಕತಾರ್ ಎರಡೂ ಕಡೆಯವರನ್ನು ಮಾತುಕತೆಗಾಗಿ ಮತ್ತೆ ಸಭೆ ನಡೆಸಲು ಪ್ರಯತ್ನಿಸಿದ್ದವು.

ಕತಾರ್ ಮತ್ತು ಟರ್ಕಿಯ ಕೋರಿಕೆಯ ಮೇರೆಗೆ ಶಾಂತಿ ಪ್ರಕ್ರಿಯೆಗೆ ಮತ್ತೊಂದು ಅವಕಾಶ ನೀಡಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಹೇಳಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಘಾನಿಸ್ತಾನ ತನ್ನ ಪ್ರದೇಶವನ್ನು ಬಳಸಲು ಅನುಮತಿಸಬಾರದು ಎಂಬುದು ಪಾಕಿಸ್ತಾನದ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ