ಇಸ್ಲಮಾಬಾದ್: ಪಾಕಿಸ್ತಾನದ ಆಡಳಿತವು ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಪಾಕ್ ಸೈನಿಕರ ದೇಹಗಳನ್ನು ವಾಹನಗಳ ಬದಲಿಗೆ ಕತ್ತೆಗಳ ಮೇಲೆ ಸಾಗಿಸಿದೆ. ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವಿಡಿಯೋ ಹೊರಬಿದ್ದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಪರ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಅಲ್ಲಿನ ಸರ್ಕಾರ ತೋರುತ್ತಿರುವ ಅಗೌರವದ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಅಂಕಿ-ಅಂಶಗಳನ್ನು ಮರೆಮಾಚಲು ಪಾಕಿಸ್ತಾನಿ ಸೇನೆ ಯತ್ನಿಸಿತು. ಆದರೆ, ಈ ಬಾರಿ ಅದು ತನ್ನ ಪ್ರಯತ್ನದಲ್ಲಿ ವಿಫಲವಾಯಿತು. ಕಳೆದ ಮೂರು ದಿನಗಳಲ್ಲಿ ಭಯೋತ್ಪಾದಕರು ಪಾಕಿಸ್ತಾನದ ಸೇನೆಯ ಎರಡು ಡಜನ್‌ಗಿಂತಲೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಲಾಯಿತು. ಉಗ್ರರು ಪೊಲೀಸ್ ಠಾಣೆಗೆ ಪ್ರವೇಶಿಸಿ ಅದರ 7 ಪೊಲೀಸರನ್ನು ಅಪಹರಿಸಿದರು. ಠಾಣೆಯಲ್ಲಿದ್ದ ಇತರೆ ಪೊಲೀಸರು ಠಾಣೆ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.
Pak Army carries its dead soldiers on donkeys in Tirah valley of Paktunkhwa
Pak military mafia, owning $200 billion business empire, has funds to ferry Generals & their families to play golf elsewhere but couldn’t afford to send a helicopter to transport its fallen soldiers.. pic.twitter.com/OG9LKxGPsz
— Nighat Abbas (@Nighat_Abbass) November 20, 2024
ಇದನ್ನೂ ಓದಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 12 ಸೈನಿಕರ ಸಾವು
ಕಳೆದ ಎರಡು ದಿನಗಳಲ್ಲಿ ಖೈಬರ್ ಪಖ್ತುಂಖ್ವಾದ ತಿರಾಹ್ ಕಣಿವೆಯಲ್ಲಿ 17 ಯೋಧರು ಹುತಾತ್ಮರಾಗಿದ್ದರು. ಕೊಲ್ಲಲ್ಪಟ್ಟ ಸೈನಿಕರ ಸಂಖ್ಯೆಯನ್ನು ಮರೆಮಾಡಲು ಪಾಕಿಸ್ತಾನದ ಆಡಳಿತವು ಅತ್ಯುತ್ತಮವಾಗಿ ಪ್ರಯತ್ನಿಸಿತು. ಈ ಪ್ರಯತ್ನದ ಭಾಗವಾಗಿ ಅವರು ಆದಷ್ಟು ಬೇಗ ಮೃತ ಸೈನಿಕರ ಶವಗಳನ್ನು ಸ್ಥಳದಿಂದ ಹೊರತೆಗೆಯಲು ಪ್ರಯತ್ನಿಸಿದರು. ಈ ವೇಳೆ ಸೈನಿಕರ ಮೃತದೇಹಗಳನ್ನು ಕತ್ತೆಗಳ ಮೇಲೆ ಕೊಂಡೊಯ್ಯಲಾಯಿತು.
ಇದನ್ನೂ ಓದಿ: ಲಡಾಖ್ ಗಡಿಯಲ್ಲಿ ಭಾರತ- ಚೀನಾ ಸೈನಿಕರಿಂದ ಸ್ವೀಟ್ ವಿನಿಮಯ
ಇದನ್ನು ನೋಡಿದ ಜನರು ಪಾಕ್ ಸೇನಾ ಮುಖ್ಯಸ್ಥರು, ಸರ್ಕಾರದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚೆಕ್ ಪೋಸ್ಟ್‌ಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ 12 ಸೈನಿಕರು ಸಾವನ್ನಪ್ಪಿದ್ದರು. ಆತ್ಮಹತ್ಯಾ ಬಾಂಬ್ ಸ್ಫೋಟವು ಸುತ್ತಲಿನ ಗೋಡೆಯ ಒಂದು ಭಾಗದ ಕುಸಿತಕ್ಕೆ ಕಾರಣವಾಯಿತು. ಇದು ಸುತ್ತಮುತ್ತಲಿನ ಸ್ಥಳಗಳನ್ನು ಹಾನಿಗೊಳಿಸಿತು. ಇದರ ಪರಿಣಾಮವಾಗಿ ಭದ್ರತಾ ಪಡೆಗಳ 12 ಸೈನಿಕರು ಸಾವನ್ನಪ್ಪಿದರು ಎಂದು ಪಾಕ್ ಸೇನೆ ಹೇಳಿದೆ. ನಂತರದ ಶೂಟೌಟ್ನಲ್ಲಿ 6 ಉಗ್ರರು ಕೂಡ ಸಾವನ್ನಪ್ಪಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ