Video: ಥೂ ನಾಚಿಕೆಯಾಗ್ಬೇಕು ನಿಮ್ಗೆ, ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಮುನೀರ್​ಗೆ ಅಮೆರಿಕದಲ್ಲಿ ಅವಮರ್ಯಾದೆ

ವಾಷಿಂಗ್ಟನ್​​ನ ಹೋಟೆಲ್​ಗೆ ಆಗಮಿಸಿದಾಗ ಪ್ರತಿಭಟನಾಕಾರರು ಮುನೀರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಪಾಕಿಸ್ತಾನವನ್ನು ನಿಂದಿಸಿದ್ದಾರೆ. ಕೆಲವು ಪಾಕಿಸ್ತಾನಿ ಜನರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಮುನೀರ್ ಅವರ ಬೆಂಗಾವಲು ಪಡೆಯು ವಾಷಿಂಗ್ಟನ್‌ನ ಫೋರ್ ಸೀಸನ್ಸ್ ಹೋಟೆಲ್‌ಗೆ ಆಗಮಿಸುತ್ತಿರುವುದನ್ನು ತೋರಿಸುತ್ತದೆ.ಪ್ರತಿಭಟನಾಕಾರರ ಗುಂಪು ಅಸಿಮ್ ಮುನೀರ್ ಅವರನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದ್ದರು. ಮುನೀರ್ ಹೋಟೆಲ್ ಹೊರಗೆ ತಲುಪಿದ ತಕ್ಷಣ ಪ್ರತಿಭಟನಾಕಾರರು ಅವರನ್ನು ನೋಡಿ ನರಿ, ನರಿ ಎಂದು ಕೂಗಲು ಪ್ರಾರಂಭಿಸಿದರು.

ವಾಷಿಂಗ್ಟನ್, ಜೂನ್ 18: ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಪಾಕಿಸ್ತಾನ(Pakistan) ಸೇನಾ ಮುಖ್ಯಸ್ಥ ಆಸಿಮ್ ಮುನೀರ್(Asim Munir)​​ಗೆ ಅಮೆರಿಕದಲ್ಲಿ ಸರಿಯಾದ ಮರ್ಯಾದೆಯೇ ಆಗಿದೆ. ಅಮೆರಿಕದಲ್ಲಿ ಕೆಲವು ಪ್ರತಿಭಟನಾಕಾರರು ಆಸಿಮ್ ಮುನೀರ್​​ನನ್ನು ಸರಣಿ ಹಂತಕ, ನರಿ, ಸರ್ವಾಧಿಕಾರಿ ಎಂದು ನಿಂದಿಸಿದ್ದಾರೆ.

ವಾಷಿಂಗ್ಟನ್​​ನ ಹೋಟೆಲ್​ಗೆ ಆಗಮಿಸಿದಾಗ ಪ್ರತಿಭಟನಾಕಾರರು ಮುನೀರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಪಾಕಿಸ್ತಾನವನ್ನು ನಿಂದಿಸಿದ್ದಾರೆ. ಕೆಲವು ಪಾಕಿಸ್ತಾನಿ ಜನರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಮುನೀರ್ ಅವರ ಬೆಂಗಾವಲು ಪಡೆಯು ವಾಷಿಂಗ್ಟನ್‌ನ ಫೋರ್ ಸೀಸನ್ಸ್ ಹೋಟೆಲ್‌ಗೆ ಆಗಮಿಸುತ್ತಿರುವುದನ್ನು ತೋರಿಸುತ್ತದೆ.

ವೀಡಿಯೊದಲ್ಲಿ, ಪ್ರತಿಭಟನಾಕಾರರ ಗುಂಪು ಅಸಿಮ್ ಮುನೀರ್ ಅವರನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದ್ದರು. ಮುನೀರ್ ಹೋಟೆಲ್ ಹೊರಗೆ ತಲುಪಿದ ತಕ್ಷಣ ಪ್ರತಿಭಟನಾಕಾರರು ಅವರನ್ನು ನೋಡಿ ನರಿ, ನರಿ ಎಂದು ಕೂಗಲು ಪ್ರಾರಂಭಿಸಿದರು.

ಇದನ್ನೂ ಓದಿ
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ
ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ನಿರ್ಬಂಧದ ನಡುವೆ ಇಲ್ಲಿದೆ ಗುಡ್ ನ್ಯೂಸ್

ಮತ್ತಷ್ಟು ಓದಿ: ಅಮೆರಿಕ ಸೇನಾ ದಿನ: ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್​​ಗೆ ಆಹ್ವಾನ, ಭಾರತ, ಚೀನಾಗೆ ಆತಂಕ

ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಮಿಲಿಟರಿ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಐದು ದಿನಗಳ ಅಧಿಕೃತ ಭೇಟಿಗಾಗಿ ಮುನೀರ್ ಭಾನುವಾರ (ಜೂನ್ 15) ವಾಷಿಂಗ್ಟನ್‌ಗೆ ಆಗಮಿಸಿದ್ದರು.

ಜನರಲ್ ಮುನೀರ್ ಇತ್ತೀಚೆಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. 2022 ರಿಂದ ದೇಶದ 11 ನೇ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮುನೀರ್, ಪಾಕಿಸ್ತಾನದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷ ಅಯೂಬ್ ಖಾನ್ ನಂತರ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಹೊಂದಿರುವ ಎರಡನೇ ವ್ಯಕ್ತಿಯಾಗಿದ್ದಾರೆ.

ಭಾರತದ ಬಗ್ಗೆ ಆಸಿಮ್ ಏನು ಹೇಳಿದ್ದರು?
ಕಳೆದ ತಿಂಗಳು ಆಸಿಮ್ ಮುನೀರ್ ಇಸ್ಲಾಮಾಬಾದ್ ಎಂದೂ ನೀರಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಏಕೆಂದರೆ ಇದು 240 ಮಿಲಿಯನ್ ಜನರ ಮೂಲಭೂತ ಹಕ್ಕು. ಪಾಕಿಸ್ತಾನ ಎಂದಿಗೂ ಭಾರತೀಯ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಪಾಕಿಸ್ತಾನದಲ್ಲಿ ಆಸಿಮ್​ಗೆ ವಿರೋಧ
ಪಾಕಿಸ್ತಾನವು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಆಸಿಮ್ ಮುನೀರ್ ವಿರುದ್ಧ ಪ್ರತಿಭಟನೆ ನಡೆದಿದೆ. ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸೇನಾ ಮುಖ್ಯಸ್ಥರ ವಿರುದ್ಧದ ಟೀಕೆ ಪಾಕಿಸ್ತಾನದೊಳಗೆ ಅಸಮಾಧಾನ ಮೂಡುವಂತೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಚುನಾವಣಾ ವಿಜೇತ ನಾಯಕ ಎಂದು ಪರಿಗಣಿಸಲಾದ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕಿ ಅಧಿಕಾರ ವಹಿಸಿಕೊಂಡ ಕಾರಣ ಈ ಪ್ರತಿಭಟನೆ ನಡೆಯುತ್ತಿದೆ.

ಮಿಲಿಟರಿ ಪರೇಡ್​ಗೆ ಮುನೀರ್​​ನ ಕರೆದೇ ಇಲ್ಲ

ಇಸ್ರೇಲ್ ಬಗ್ಗೆ ಪಾಕಿಸ್ತಾನ ತನ್ನ ಧ್ವನಿಯನ್ನು ಮೃದುಗೊಳಿಸಲು ಅಮೆರಿಕ ಕಾರಣ, ಮುನೀರ್ ಇತ್ತೀಚೆಗೆ ಅಮೆರಿಕದೊಂದಿಗೆ ಸಂಬಂಧಗಳನ್ನು ಸುಧಾರಿಸಲು ಭೇಟಿ ನೀಡುತ್ತಿದ್ದಾರೆ. ಆದರೆ ಪಾಕಿಸ್ತಾನದ ರಹಸ್ಯ ಬಹಿರಂಗವಾಗಿದೆ. ಮಿಲಿಟರಿ ಪರೇಡ್​​ಗೆ ಮುನೀರ್ ಸೇರಿದಂತೆ ಯಾವುದೇ ನಾಯಕರನ್ನು ಆಹ್ವಾನಿಸಿಲ್ಲ ಎಂದು ಶ್ವೇತಭವನ ಹೇಳಿದೆ. ಪಾಕಿಸ್ತಾನದ ಜನರು ಮತ್ತು ಭಾರತ ವಿರೋಧಿಗಳು ಈ ಮೆರವಣಿಗೆಯಲ್ಲಿ ಫೀಲ್ಡ್ ಮಾರ್ಷಲ್ ಅವರನ್ನು ಹುಡುಕುತ್ತಲೇ ಇದ್ದರು.

ಆಸಿಮ್ ಮುನೀರ್ ಡೊನಾಲ್ಡ್ ಟ್ರಂಪ್ ಪಕ್ಕದಲ್ಲಿ ನಿಂತು ಅಮೆರಿಕದ ಮಿಲಿಟರಿ ಪರೇಡ್‌ಗೆ ಸೆಲ್ಯೂಟ್ ಹೊಡೆಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಜೂನ್ 14 ರಂದು, ಮುನೀರ್ ಪೆರೇಡ್‌ನಲ್ಲಿ ಎಲ್ಲಿಯೂ ಕಾಣಿಸಲಿಲ್ಲ. ಪೆರೇಡ್ ಬಗ್ಗೆ ಪಾಕಿಸ್ತಾನ ಹೇಳಿದ್ದ ಸುಳ್ಳುಗಳು ಸಹ ಬಹಿರಂಗಗೊಂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:52 am, Wed, 18 June 25