ಜೂನ್ 16ನ್ನು ಶ್ರೀ ಶ್ರೀ ರವಿಶಂಕರ್ ಶಾಂತಿ, ಸ್ವಾಸ್ಥ್ಯ ದಿನವನ್ನಾಗಿ ಘೋಷಿಸಿದ ಫ್ಲೋರಿಡಾದ ಜಾಕ್ಸನ್‌ವಿಲ್ಲೆ
ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿಯ ಜೀವಮಾನದ ಸೇವೆ, ಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಜೂನ್ 16ನ್ನು ಅಧಿಕೃತವಾಗಿ ಶ್ರೀ ಶ್ರೀ ರವಿಶಂಕರ್ ಶಾಂತಿ, ಸ್ವಾಸ್ಥ್ಯ ದಿನವನ್ನಾಗಿ ಆಚರಿಸುವುದಾಗಿ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಘೋಷಣೆ ಮಾಡಿದೆ. ಆಧ್ಯಾತ್ಮಿಕ ಗುರು ಶ್ರೀಶ್ರೀ ರವಿಶಂಕರ್ ಅವರ ಅಪ್ರತಿಮ ಕೊಡುಗೆಯನ್ನು ಗುರುತಿಸಿ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರ ಫ್ಲೋರಿಡಾದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಜಾಕ್ಸನ್ವಿಲ್ಲೆಯ ಮೇಯರ್ ಈ ಔಪಚಾರಿಕ ಘೋಷಣೆ ಮಾಡಿದರು

ಜಾಕ್ಸನ್‌ವಿಲ್ಲೆ, ಜೂನ್ 18: ಆರ್ಟ್ ಆಫ್ ಲಿವಿಂಗ್ನ ಗುರುದೇವ ಶ್ರೀ ರವಿಶಂಕರ್ ( Sri Ravishankar Guruji) ಅವರ ಜೀವಮಾನದ ಸೇವೆ, ಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಜೂನ್ 16ನ್ನು ಅಧಿಕೃತವಾಗಿ ‘ಶ್ರೀ ಶ್ರೀ ರವಿಶಂಕರ್ ಶಾಂತಿ, ಸ್ವಾಸ್ಥ್ಯ ದಿನ’ವನ್ನಾಗಿ ಆಚರಿಸುವುದಾಗಿ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಘೋಷಣೆ ಮಾಡಿದೆ.
ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಅವರ ಅಪ್ರತಿಮ ಕೊಡುಗೆಯನ್ನು ಗುರುತಿಸಿ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರ ಫ್ಲೋರಿಡಾದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಜಾಕ್ಸನ್ವಿಲ್ಲೆಯ ಮೇಯರ್ ಈ ಔಪಚಾರಿಕ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ರವಿಶಂಕರ್ ಅವರ ‘ಆರ್ಟ್ ಆಫ್ ಲಿವಿಂಗ್’ (AOL) ಸಂಸ್ಥೆಯ ಕಾರ್ಯವನ್ನು ವಿಶೇಷವಾಗಿ ಪ್ರಶಂಸಿಸಲಾಯಿತು. ಈ ಸಂಸ್ಥೆಯು ಪ್ರಪಂಚದಾದ್ಯಂತ ಒತ್ತಡ-ಮುಕ್ತ ಸಮಾಜವನ್ನು ಸೃಷ್ಟಿಸಲು ಯೋಗ, ಧ್ಯಾನ ಮತ್ತು ಸಮುದಾಯ ಸೇವೆಯ ಮೂಲಕ ಜಾಗೃತಿ ಮೂಡಿಸುತ್ತಿದೆ.

ಶ್ರೀ ಶ್ರೀ ರವಿಶಂಕರ್ ದಿನ ಎಂದು ಘೋಷಿಸಿದ ವಿಶ್ವದ 32ನೇ ನಗರ ಜಾಕ್ಸನ್‌ವಿಲ್ಲೆ. ಈ ನಿರ್ಧಾರವು ಮತ್ತೊಮ್ಮೆ ರವಿಶಂಕರ್ ಗುರೂಜಿ ಹಾಗೂ ಆರ್ಟ್ ಆಫ್ ಲಿವಿಂಗ್ನ ಜಾಗತಿಕ ಖ್ಯಾತಿಯನ್ನು ಎತ್ತಿ ತೋರಿಸುತ್ತದೆ.

ಈ ದಿನವನ್ನು ಇನ್ನು ಮುಂದೆ ಜಾಕ್ಸನ್‌ವಿಲ್ಲೆಯಲ್ಲಿ ಶಾಂತಿ, ಆರೋಗ್ಯ ಮತ್ತು ಸಮುದಾಯದ ಉನ್ನತಿಗೆ ಮೀಸಲಾದ ದಿನವಾಗಿ ಆಚರಿಸಲಾಗುತ್ತದೆ. ಇದು ಸ್ಥಳೀಯ ನಾಗರಿಕರು ಸಕಾರಾತ್ಮಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Wed, 18 June 25




