ಪಾಕಿಸ್ತಾನ: ಅವರ ಜೀವಕ್ಕೆ ಅಪಾಯವಿದೆ, ಸುಪ್ರೀಂ ಮೊರೆ ಹೋದ ಇಮ್ರಾನ್ ಖಾನ್ ಪತ್ನಿ

|

Updated on: Aug 26, 2023 | 11:10 AM

ತೋಶಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಸರಿ ಇಲ್ಲ, ಅವರಿಗೆ ಅಪಾಯ ಇದೆ ಎಂದು ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನ: ಅವರ ಜೀವಕ್ಕೆ ಅಪಾಯವಿದೆ, ಸುಪ್ರೀಂ ಮೊರೆ ಹೋದ ಇಮ್ರಾನ್ ಖಾನ್ ಪತ್ನಿ
ಸಾಂದರ್ಭಿಕ ಚಿತ್ರ
Follow us on

ಇಸ್ಲಾಮಾಬಾದ್, ಆ.26: ತೋಶಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಆರೋಗ್ಯ ಸ್ಥಿತಿ ಸರಿ ಇಲ್ಲ, ಅವರಿಗೆ ಅಪಾಯ ಇದೆ ಎಂದು ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತೋಶಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಿದೆ. ಇದೀಗ ಅವರು ಪಂಜಾಬ್​​ ಪ್ರಾಂತ್ಯದ ಅಟಾಕ್ ಜಿಲ್ಲಾ ಜೈಲಿನಲ್ಲಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಪತಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್​​ಗೆ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಅವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಬುಶ್ರಾ ಬೀಬಿ ಅವರು ತಮ್ಮ ವಕೀಲ ರಿಫಾಕತ್ ಹುಸೇನ್ ಶಾ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ, ಇಮ್ರಾನ್ ಖಾನ್ ಅವರ ಆರೋಗ್ಯದ ದೃಷ್ಟಿಯಿಂದ ಕೋರ್ಟ್​ ಮಧ್ಯಪ್ರವೇಶಿಸುವಂತೆ ಕೋರಿದರು.

ಅಫಿಡವಿಟ್​​ನಲ್ಲಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಸರಿ ಇಲ್ಲ ಮತ್ತು ಅವರ ಬಂಧನದಿಂದ ದೇಹ ತೂಕ ಕೂಡ ಗಣಿನೀಯವಾಗಿ ಕಡಿಮೆಯಾಗಿದೆ. ಇನ್ನು ತೋಳುಗಳ ಸುತ್ತಲಿನ ಸ್ನಾಯುಗಳ ನಷ್ಟ ಆಗಿದೆ ಎಂದು ಹೇಳಿದ್ದಾರೆ. 70 ವರ್ಷ ವಯಸ್ಸಿನಲ್ಲಿ ಇಂತಹ ಆರೋಗ್ಯದ ಸ್ಥಿತಿ ಅವರ ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತದೆ. ಇನ್ನು ಜೈಲಿನಲ್ಲೂ ಅವರಿಗೆ ಜೀವ ಬೇದರಿಕೆ ಇದೆ. ಈ ಬಗ್ಗೆ ಅರ್ಜಿದಾರರಿಗೆ ಆತಂಕ ಇರುವ ಕಾರಣ ಗೌರವಾನ್ವಿತ ನ್ಯಾಯಾಲಯವು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಮಧ್ಯಸ್ಥಿತಿಕೆ ವಹಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ 

ಬುಶ್ರಾ ಬೀಬಿ ಅವರು ತನ್ನ ಪತಿಯ ಆರೋಗ್ಯದ ಬಗ್ಗೆ ವಿಚಾರಿಸಲು ಆಗಸ್ಟ್​​ 22ರಂದು ಪಂಜಾಬ್​​ ಪ್ರಾಂತ್ಯದ ಅಟಾಕ್ ಜಿಲ್ಲಾ ಜೈಲಿಗೆ ಭೇಟಿ ನೀಡಿದ್ದರು ಎಂಬುದನ್ನು ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಮೊದಲು ಪಂಜಾಬ್​​ ಸರ್ಕಾರಕ್ಕೂ ತನ್ನ ಗಂಡ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸಿದ್ದರು. ಜೈಲಿನಲ್ಲಿ ತನ್ನ ಗಂಡನಿಗೆ ಅಪಾಯ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Sat, 26 August 23