Sign In

By signing in or creating an account, you agree with Associated Broadcasting Company's Terms & Conditions and Privacy Policy.

Imran Khan Arrest: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.

Imran Khan Arrest: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಇಮ್ರಾನ್ ಖಾನ್
Follow us
ನಯನಾ ರಾಜೀವ್
|

Updated on:May 09, 2023 | 3:50 PM

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​(Imran Khan) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್​ಖಾನ್​ನನ್ನು ಇಸ್ಲಾಮಾಬಾದ್​ನಲ್ಲಿ ಬಂಧಿಸಲಾಗಿದೆ, ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ರೇಂಜರ್ಸ್‌ ಇಮ್ರಾನ್‌ ಖಾನ್‌ರನ್ನು ವಶಕ್ಕೆ ಪಡೆದುಕೊಂಡಿದೆ. ಪಾಕಿಸ್ತಾನದ ಸೇನೆಯನ್ನು ಸಾರ್ವಜನಿಕವಾಗಿ ಟೀಕೆ ಮಾಡಿದ ಕೆಲವೇ ದಿನಗಳಲ್ಲಿ ಇಮ್ರಾನ್‌ ಖಾನ್‌ರನ್ನು ಬಂಧಿಸಲಾಗಿದೆ.

ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ನನ್ನು ಬಂಧಿಸಲಾಗಿದೆ, ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು ಎಂದು ಉದ್ಯಮಿ ಮಲ್ಲಿಕ್ ರಿವಾಜ್ ಹೇಳಿದ್ದರು.ಇ ಮ್ರಾನ್ ಮತ್ತು ಅವರ ಪತ್ನಿ ತಮ್ಮ ಹೆಸರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆದಿದ್ದಾರೆ. ನಂತರ ರಿಯಾಜ್ ಮತ್ತು ಅವರ ಮಗಳ ನಡುವಿನ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದೆ. ಇದರಲ್ಲಿ ಇಮ್ರಾನ್ ಪತ್ನಿ ಬುಶ್ರಾ ಬೀಬಿ ತನಗೆ ಐದು ಕ್ಯಾರೆಟ್ ವಜ್ರದ ಉಂಗುರ ಬೇಕೆಂದು ನಿರಂತರವಾಗಿ ಕೇಳುತ್ತಿದ್ದಳು ಎಂದು ರಿಯಾಜ್ ಪುತ್ರಿ ಹೇಳಿದ್ದಾಳೆ.

ರಾಜಧಾನಿಯ ನ್ಯಾಯಾಲಯಕ್ಕೆ ಸೇರಿದ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಸೆಷನ್ಸ್ ನ್ಯಾಯಾಲಯವು ಖಾನ್‌ಗೆ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿತ್ತು. ಇದಕ್ಕೂ ಹಿಂದಿನ ದಿನ ಸಿವಿಲ್ ನ್ಯಾಯಾಧೀಶ ರಾಣಾ ಮುಜಾಹಿದ್ ರಹೀಮ್ ಅವರು ಮೂರು ಪುಟಗಳ ಕಾಯ್ದಿರಿಸಿದ ತೀರ್ಪನ್ನು ಬಿಡುಗಡೆ ಮಾಡಿದ್ದರು. ಕೋರ್ಟ್‌ಗೆ ಇಮ್ರಾನ್‌ ಖಾನ್‌ ಪದೇಪದೇ ಹಾಜರಾಗದೆ ಇರುವ ಕಾರಣ ಜಾಮೀನುರಹಿತ ವಾರಂಟ್‌ ಅನ್ನು ಅವರು ಹೊರಡಿಸಿದ್ದರು.

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ವಿಚಾರಣೆಗೆ ಹಾಜರಾಗುವ ಬದಲು, ನ್ಯಾಯಾಧೀಶರ ಮುಂದೆ ಹಾಜರಾಗುವುದರಿಂದ ವಿನಾಯಿತಿಗಾಗಿ ಮನವಿ ಸಲ್ಲಿಸಿದ್ದರು. ವಿಡಿಯೋ ಕಾನ್ಪರೆನ್ಸ್‌ ಮೂಲಕ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅನುಮತಿ ಕೋರಿದ್ದರು ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು.

ಆಗಸ್ಟ್ 20 ರಂದು ಎಫ್ -9 ಪಾರ್ಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಝೀಬಾ ಚೌಧರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Tue, 9 May 23