ಇಮ್ರಾನ್​​ ಖಾನ್​​ ಒಬ್ಬರೇ ಅಲ್ಲ, ಬಂಧನಕ್ಕೊಳಗಾಗಿ ಜೈಲು ಸೇರಿದ ಪಾಕಿಸ್ತಾನದ ಮಾಜಿ ಪ್ರಧಾನಿಗಳಿವರು

ಪಾಕಿಸ್ತಾನವು ಪ್ರಧಾನ ಮಂತ್ರಿಗಳನ್ನು ಜೈಲಿಗೆ ತಳ್ಳಿದ ಇತಿಹಾಸವನ್ನು ಹೊಂದಿದೆ. ಹೀಗೆ ಅಧಿಕಾರದಲ್ಲಿರುವಾಗ ಬಂಧಿತರಾದ ಮತ್ತು ಅಧಿಕಾರದಿಂದ ಕೆಳಗಿಳಿದ ನಂತರ ಬಂಧನಕ್ಕೊಳಗಾದ ಪಾಕಿಸ್ತಾನದ ‘ಮಾಜಿ’ ಪ್ರಧಾನಿಗಳ ಪಟ್ಟಿ ಇಲ್ಲಿದೆ

ಇಮ್ರಾನ್​​ ಖಾನ್​​ ಒಬ್ಬರೇ ಅಲ್ಲ, ಬಂಧನಕ್ಕೊಳಗಾಗಿ ಜೈಲು ಸೇರಿದ ಪಾಕಿಸ್ತಾನದ ಮಾಜಿ ಪ್ರಧಾನಿಗಳಿವರು
ಪಾಕಿಸ್ತನದ ಮಾಜಿ ಪ್ರಧಾನಿಗಳು
Follow us
|

Updated on: May 09, 2023 | 6:59 PM

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪ್ರಸ್ತುತ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ (Imran Khan )ಅವರನ್ನು ಮಂಗಳವಾರ ಇಸ್ಲಾಮಾಬಾದ್​​ನಲ್ಲಿ (Islamabad) ಬಂಧಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಇಮ್ರಾನ್ ಖಾನ್​​ನ್ನು ಅಲ್-ಖಾದಿರ್ (Al-qadir trust Case), ಟ್ರಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಂದಹಾಗೆ ಪಾಕಿಸ್ತಾನವು ಪ್ರಧಾನ ಮಂತ್ರಿಗಳನ್ನು ಜೈಲಿಗೆ ತಳ್ಳಿದ ಇತಿಹಾಸವನ್ನು ಹೊಂದಿದೆ. ಹೀಗೆ ಅಧಿಕಾರದಲ್ಲಿರುವಾಗ ಬಂಧಿತರಾದ ಮತ್ತು ಅಧಿಕಾರದಿಂದ ಕೆಳಗಿಳಿದ ನಂತರ ಬಂಧನಕ್ಕೊಳಗಾದ ಪಾಕಿಸ್ತಾನದ ‘ಮಾಜಿ’ ಪ್ರಧಾನಿಗಳ ಪಟ್ಟಿ ಇಲ್ಲಿದೆ

ಹುಸೇನ್ ಶಹೀದ್ ಸುಹ್ರವರ್ದಿ

ಸೆಪ್ಟೆಂಬರ್ 1956 ರಿಂದ ಅಕ್ಟೋಬರ್ 1957 ರವರೆಗೆ ಪಾಕಿಸ್ತಾನದ ಐದನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹುಸೇನ್ ಶಹೀದ್ ಸುಹ್ರವರ್ದಿ, ಜನರಲ್ ಅಯೂಬ್ ಖಾನ್ ಅವರ ಮಿಲಿಟರಿ ದಂಗೆಯನ್ನು ಬೆಂಬಲಿಸಲು ನಿರಾಕರಿಸಿದರು. ಇದರ ಪರಿಣಾಮವಾಗಿ, ಅವರನ್ನು ಚುನಾಯಿತ ಸಂಸ್ಥೆಗಳ ಅನರ್ಹತೆ ಆದೇಶದ (Ebdo) ಮೂಲಕ ರಾಜಕೀಯದಿಂದ ನಿಷೇಧಿಸಿದ್ದು ಮಾತ್ರವಲ್ಲದೆ. ಜುಲೈ 1960 ರಲ್ಲಿ ಅದನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಯಿತು. 1952 ರ ಪಾಕಿಸ್ತಾನದ ಭದ್ರತಾ ಕಾಯಿದೆಯ ಅಡಿಯಲ್ಲಿ ರಾಜ್ಯ ವಿರೋಧಿ ಚಟುವಟಿಕೆಗ ಸುಳ್ಳು ಆರೋಪದ ಮೇಲೆ ಜನವರಿ 1962 ರಲ್ಲಿ ಅವರನ್ನು ಬಂಧಿಸಲಾಯಿತು. ವಿಚಾರಣೆಗೊಳಪಡಿಸದೆ ಅವರನ್ನು ಕರಾಚಿಯ ಸೆಂಟ್ರಲ್ ಜೈಲಿನಲ್ಲಿ ಏಕಾಂಗಿಯಾಗಿ ಇರಿಸಲಾಯಿತು.

ಜುಲ್ಫಿಕರ್ ಅಲಿ ಭುಟ್ಟೋ ಆಗಸ್ಟ್ 1973 ರಿಂದ ಜುಲೈ 1977 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು 1974 ರಲ್ಲಿ ರಾಜಕೀಯ ಎದುರಾಳಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಸೆಪ್ಟೆಂಬರ್ 1977 ರಲ್ಲಿ ಬಂಧಿಸಲಾಯಿತು.

ಬೆನಜೀರ್ ಭುಟ್ಟೊ ಬೆನಜೀರ್ ಭುಟ್ಟೊ ಡಿಸೆಂಬರ್ 1988 ರಿಂದ ಆಗಸ್ಟ್ 1990 ರವರೆಗೆ ಮತ್ತು ಅಕ್ಟೋಬರ್ 1993 ರಿಂದ ನವೆಂಬರ್ 1996 ರವರೆಗೆ ಎರಡು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಜಿಯಾ-ಉಲ್-ಹಕ್ ಅವರ ಸರ್ವಾಧಿಕಾರದ ಅವಧಿಯಲ್ಲಿ 1977 ರಿಂದ 1988 ರವರೆಗೆ ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು. ಆಗಸ್ಟ್ 1985 ರಲ್ಲಿ ಆಕೆಯ ಸಹೋದರನ ಮರಣದ ನಂತರ, ಅವರು ಪಾಕಿಸ್ತಾನಕ್ಕೆ ಮರಳಿದಾಗ ಅವರನ್ನು 90 ದಿನಗಳ ಅವಧಿಗೆ ಗೃಹಬಂಧನದಲ್ಲಿ ಇರಿಸಲಾಯಿತು. ಇದಲ್ಲದೆ, 1986 ರಲ್ಲಿ ಕರಾಚಿಯಲ್ಲಿ ಸ್ವಾತಂತ್ರ್ಯ ದಿನದಂದು ರ್ಯಾಲಿಯಲ್ಲಿ ಸರ್ಕಾರವನ್ನು ಖಂಡಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಆದಾದ ನಂತರ 1998, 1999 ಮತ್ತು ಮತ್ತೆ 2007 ರಲ್ಲಿಯೂ ಬಂಧನಕ್ಕೊಳಗಾಗಿದ್ದರು.

ನವಾಜ್ ಷರೀಫ್ 1999 ರಲ್ಲಿ ಜನರಲ್ ಪರ್ವೇಜ್ ಮುಷರಫ್​​ನ್ನು ಗಡಿಪಾರು ಮಾಡಿದ ನಂತರ, ನವಾಜ್ ಷರೀಫ್ ಪಾಕಿಸ್ತಾನಕ್ಕೆ ಮರಳಿದರು. ಆದಾಗ್ಯೂ, ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ನಂತರ, ಅವರನ್ನು ಬಂಧಿಸಲಾಯಿತು.ದೇಶಭ್ರಷ್ಟತೆಯ ಉಳಿದ ಮೂರು ವರ್ಷಗಳನ್ನು ಪೂರ್ಣಗೊಳಿಸಲು ಸೌದಿ ಅರೇಬಿಯಾದ ಜಿದ್ದಾಗೆ ಕಳುಹಿಸಲಾಯಿತು. ನಂತನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಭ್ರಷ್ಟಾಚಾರ ಆರೋಪದಲ್ಲಿ ನವಾಜ್ ಮತ್ತು ಅವರ ಮಗಳು ಮರ್ಯಮ್ ನವಾಜ್ ಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಎರಡು ತಿಂಗಳ ಜೈಲುವಾಸದ ನಂತರ, ಅವರ ಶಿಕ್ಷೆಯನ್ನು ನ್ಯಾಯಾಲಯವು ಅಮಾನತುಗೊಳಿಸಿತು. ಹೈಕೋರ್ಟ್‌ನ ಅಂತಿಮ ತೀರ್ಪು ಬಾಕಿ ಉಳಿದಿದೆ. 2018 ರಲ್ಲಿ ಸೌದಿ ಅರೇಬಿಯಾದಲ್ಲಿ ಸ್ಟೀಲ್ ಮಿಲ್‌ಗಳ ಮಾಲೀಕತ್ವಕ್ಕಾಗಿ ಷರೀಫ್‌ಗೆ ಏಳು ವರ್ಷಗಳ ಶಿಕ್ಷೆ ನೀಡಿ ಅವರನ್ನು ಮತ್ತೆ ಜೈಲಿಗೆ ಹಾಕಲಾಯಿತು. ನವೆಂಬರ್ 2019 ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದೇಶವನ್ನು ತೊರೆಯಲು ಅವರಿಗೆ ಅವಕಾಶ ನೀಡಲಾಯಿತು ಮತ್ತು ಅಂದಿನಿಂದ ಪಾಕಿಸ್ತಾನಕ್ಕೆ ಹಿಂತಿರುಗಿಲ್ಲ.

ಇದನ್ನೂ ಓದಿ: Imran Khan: ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್ ಬಂಧನ; ಯಾವುದಿದು ಅಲ್ ಖಾದೀರ್ ಟ್ರಸ್ಟ್ ಪ್ರಕರಣ?

ಶಾಹಿದ್ ಖಾಕನ್ ಅಬ್ಬಾಸಿ

ಜನವರಿ 2017 ರಿಂದ ಮೇ 2018 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು, ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವರಾಗಿದ್ದಾಗ 2013 ರಲ್ಲಿ ಎಲ್‌ಎನ್‌ಜಿಗೆ ಬಹುಕೋಟಿ ರೂಪಾಯಿಗಳ ಆಮದು ಒಪ್ಪಂದವನ್ನು ನೀಡಿದ ಭ್ರಷ್ಟಾಚಾರದ ಆರೋಪದ ಮೇಲೆ ಜುಲೈ 19 ರಂದು ಬಂಧಿಸಲಾಯಿತು.ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) 12 ಸದಸ್ಯರ ತಂಡ ಬಂಧಿಸಿತ್ತು. ಫೆಬ್ರವರಿ 27, 2020 ರಂದು ಅಡಿಯಾಲಾ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಯಿತು.

ಇಮ್ರಾನ್ ಖಾನ್

ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್‌ನ ಪ್ರಸ್ತುತ ಅಧ್ಯಕ್ಷ ಇಮ್ರಾನ್ ಖಾನ್, ನ್ಯಾಯಾಧೀಶರಿಗೆ ಬೆದರಿಕೆ ಮತ್ತು ತೋಷಖಾನಾ ಉಡುಗೊರೆಗಳನ್ನು ನೀಡಿದ ಆರೋಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿದೆ. ಅವರ ಬಂಧನವನ್ನು ತಡೆಯಲು ಅವರ ಬೆಂಬಲಿಗರು ಜಮಾನ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಹೊರಗೆ ಜಮಾಯಿಸಿದ್ದರು, ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸುವುದರೊಂದಿಗೆ ಹಿಂಸಾತ್ಮಕ ಬಿಕ್ಕಟ್ಟಿಗೆ ಕಾರಣವಾಯಿತು. ಆದಾಗ್ಯೂ, ಮೇ 9, 2023 ರಂದು, ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನಿಂದ ಅರೆಸೈನಿಕ ರೇಂಜರ್‌ಗಳು ಬಂಧಿಸಿದರು, ಅಲ್ಲಿ ಅವರು ಅಲ್ ಖಾದಿರ್ ವಿಶ್ವವಿದ್ಯಾಲಯ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: Imran Khan arrested: ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಪಾಕಿಸ್ತಾನದ ರೇಂಜರ್ಸ್ ಕೊರಳಪಟ್ಟಿ ಹಿಡಿದು ದರದರ ಎಳೆದೊಯ್ದರು!

ಶೆಹಬಾಜ್ ಷರೀಫ್

ಪಾಕಿಸ್ತಾನದ ಪ್ರಸ್ತುತ ಪ್ರಧಾನಿಯಾಗಿರುವ ಶೆಹಬಾಜ್ ಷರೀಫ್ ಅವರನ್ನು ಲಾಹೋರ್ ಹೈಕೋರ್ಟ್‌ನಿಂದ ಜಾಮೀನು ತಿರಸ್ಕರಿಸಿದ ನಂತರ NAB ಮನಿ ಲಾಂಡರಿಂಗ್ ಪ್ರಕರಣ ಆರೋಪದಲ್ಲಿ ಸೆಪ್ಟೆಂಬರ್ 28, 2020 ರಂದು ಕಸ್ಟಡಿಗೆ ತೆಗೆದುಕೊಂಡಿತ್ತು. ಲಾಹೋರ್‌ನ ಕೋಟ್ ಲಖ್‌ಪತ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗುವವರೆಗೂ ಅವರು ಸುಮಾರು ಏಳು ತಿಂಗಳ ಕಾಲ ಬಂಧನದಲ್ಲಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ