Premature Babies: ಅವಧಿಪೂರ್ವ ಶಿಶುಗಳ ಜನನ: ಟಾಪ್ 5 ದೇಶಗಳಲ್ಲಿ ಭಾರತವೂ ಇದೆ
ಪ್ರತಿ ಸೆಕೆಂಡಿಗೆ ಒಂದು ಮಗು ಜನಿಸುತ್ತಿದೆ, ಪ್ರತಿ 40 ಸೆಕೆಂಡಿಗೆ ಒಂದು ಮಗು ಸಾವನ್ನಪ್ಪುತ್ತಿದೆ, ವಿಶ್ವಸಂಸ್ಥೆಯು ನೀಡಿರುವ ಹೊಸ ವರದಿಯ ಪ್ರಕಾರ, 2020ರಲ್ಲಿ ಅವಧಿಪೂರ್ವ ಶಿಶುಗಳ ಜನನ ಹೆಚ್ಚಾಗಿತ್ತು, ಗರ್ಭಧಾರಣೆಯ 37ನೇ ವಾರಕ್ಕೂ ಮೊದಲೇ ಈ ಮಕ್ಕಳು ಜನಿಸಿದ್ದವು,
ಪ್ರತಿ ಸೆಕೆಂಡಿಗೆ ಒಂದು ಮಗು(Baby) ಜನಿಸುತ್ತಿದೆ, ಪ್ರತಿ 40 ಸೆಕೆಂಡಿಗೆ ಒಂದು ಮಗು ಸಾವನ್ನಪ್ಪುತ್ತಿದೆ, ವಿಶ್ವಸಂಸ್ಥೆಯು ನೀಡಿರುವ ಹೊಸ ವರದಿಯ ಪ್ರಕಾರ, 2020ರಲ್ಲಿ ಅವಧಿಪೂರ್ವ ಶಿಶುಗಳ ಜನನ ಹೆಚ್ಚಾಗಿತ್ತು, ಗರ್ಭಧಾರಣೆ(Pregnancy)ಯ 37ನೇ ವಾರಕ್ಕೂ ಮೊದಲೇ ಈ ಮಕ್ಕಳು ಜನಿಸಿದ್ದವು, ಅವಧಿಪೂರ್ವ ಶಿಶುಗಳ ಜನನ ಇರುವ ಟಾಪ್ ಐದು ದೇಶಗಳಲ್ಲಿ ಭಾರತ ಕೂಡ ಒಂದು. ಭಾರತ, ಪಾಕಿಸ್ತಾನ, ನೈಜೀರಿಯಾ, ಚೀನಾ, ಹಾಗೂ ಇಥಿಯೋಫಿಯಾದಲ್ಲಿ ಅವಧಿಪೂರ್ವ ಶಿಶುಗಳ ಜನನ ಹೆಚ್ಚಿದೆ.
ಶೇ.45ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಿಶುಗಳು ಅವಧಿಗೂ ಮುನ್ನವೂ ಜನಿಸಿವೆ. ಮರಣದ ಅಪಾಯವೂ ಕೂಡ ಹೆಚ್ಚಿದೆ. 2020ರಲ್ಲಿ ಅಂದಾಜು 13.4 ಮಿಲಿಯನ್ ಶಿಶುಗಳು ಅವಧಿಗೆ ಮುಂಚೆಯೇ ಜನಿಸಿವೆ. 2020ರಲ್ಲಿ ಬಾಂಗ್ಲಾದೇಶವು ಅತಿ ಹೆಚ್ಚು ಅವಧಿಪೂರ್ವ ಶಿಶುಗಳ ಜನನ ದರವನ್ನು ಹೊಂದಿತ್ತು.
ಐದು ವರ್ಷದ ಒಳಗಿನ ಮಕ್ಕಳ ಸಾವಿಗೆ ಇತ್ತೀಚಿನ ದಿನಗಳಲ್ಲಿ ಅವಧಿಗೆ ಮುನ್ನ ಮಗು ಜನನವೂ ಕಾರಣವಾಗಿದೆ. ಸಾಮಾನ್ಯವಾಗಿ ನ್ಯೂಮೋನಿಯಾ, ಅತಿಸಾರ, ಮಲೇರಿಯಾ, ಮಿದುಳುಜ್ವರ ಇವುಗಳಿಂದ ಐದು ವರ್ಷದ ಒಳಗಿನ ಮಕ್ಕಳು ಸಾವನಪ್ಪುತ್ತಿದ್ದರು. ಇದರ ಜೊತೆಗೆ ಈಗ ಅವಧಿ ಪೂರ್ವ ಮಕ್ಕಳು ಸೇರಿದ್ದಾರೆ.
ಮತ್ತಷ್ಟು ಓದಿ: Malnutrition in Yadgir: ಹಿಂದುಳಿದ ಜಿಲ್ಲೆ ಯಾದಗಿರಿಯಲ್ಲಿ ಅಪೌಷ್ಟಿಕತೆಯ ತಾಂಡವ
ಇಡೀ ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ ಅವಧಿ ಪೂರ್ವ ಜನಿಸುವ ಮಕ್ಕಳ ಸಾವಿನಲ್ಲಿ ಅಗ್ರಸ್ಥಾನ. ಇದಕ್ಕೆ ಕಾರಣ ಅವಧಿ ಪೂರ್ವ ಜನಿಸುವ ಮಗುವಿಗೆ ಉತ್ತಮ ವೈದ್ಯಕೀಯ ಸೌಕರ್ಯಗಳ ಕೊರತೆ. 2013ರಲ್ಲಿ ನಡೆದ ಸಂಶೋಧನೆಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು 3.3 ಮಿಲಿಯನ್ ನವಜಾತ ಶಿಶುಗಳು ಅಕಾಲಿಕ ಜನನ ಸಮಸ್ಯೆಯಿಂದ ಸಾವನಪ್ಪಿದ್ದಾರೆ.
ಸಾಮಾನ್ಯವಾಗಿ 40 ವಾರಗಳ ಗರ್ಭಧಾರಣೆ ಆರೋಗ್ಯವಂತದ್ದು, 37 ವಾರಗಳಿಗೆ ಮುಂಚಿತವಾಗಿ ಜನಿಸಿದ ಮಕ್ಕಳನ್ನು ಅಕಾಲಿಕ ಜನನ ಅಥವಾ ಅವಧಿಪೂರ್ವ ಎಂದು ಪರಿಗಣಿಸಲಾಗುತ್ತದೆ. ಈ ಮಕ್ಕಳು ಸಾವನ್ನಪ್ಪುವ ಅಪಾಯದಲ್ಲಿರುತ್ತಾರೆ. ಕಾರಣ ಈ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಸೋಂಕುಗಳಿಗೆ ಬೇಗನೆ ತುತ್ತಾಗುತ್ತಾರೆ ಮತ್ತು ಹುಟ್ಟುವ ಸಂದರ್ಭದಲ್ಲಿ ಅವರ ದೇಹದ ಅಂಗಾಗಗಳು ಸಂಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ.
ಇದು ಎಲ್ಲ ಅಕಾಲಿಕ ಮಕ್ಕಳಲ್ಲೂ ಇರುವುದಿಲ್ಲ. ಅವಧಿ ಪೂರ್ವ ಹುಟ್ಟುವ ಮಕ್ಕಳಿಗೆ ಕಾಡುವ ಸಮಸ್ಯೆಗಳೆಂದರೆ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವದ ಅಪಾಯ. ವೇಗವಾಗಿ ದೇಹದ ಉಷ್ಣತೆ ಕಡಿಮೆಯಾಗುವುದು, ಜಠರ, ಕರುಳಿನ ಸಮಸ್ಯೆ, ದೀರ್ಘಾವಧಿಯಲ್ಲಿ ಸೆರೆಬ್ರಲ್ ಪಾಲ್ಸಿ, ಅರಿವಿನ ಕೌಶಲ್ಯ ಕುಗ್ಗುವಿಕೆ, ದೃಷ್ಟಿ ಮತ್ತು ಶ್ರವಣ ಸಂಬಂಧಿ ಸಮಸ್ಯೆಗಳು ಇತ್ಯಾದಿ. ಕೆಲ ಮಕ್ಕಳು ಮಾನಸಿಕ ಸಮಸ್ಯೆಗಳಿಂದಲೂ ಬಳಲುವ ಅಪಾಯವಿರುತ್ತದೆ.
ನಂತರ ಮಲಾವಿ, ಪಾಕಿಸ್ತಾನ, ಭಾರತ, ದಕ್ಷಿಣ ಆಫ್ರಿಕಾ ದೇಶಗಳಿವೆ. ಭಾರತವು 30.16 ಲಕ್ಷ ಶಿಶಿಗಳ ಜನನಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಪಾಕಿಸ್ತಾನವು 9.14 ಲಕ್ಷ, ನೈಜೀರಿಯಾ 7.74 ಲಕ್ಷ ಮತ್ತು ಚೀನಾ 7.52 ಲಕ್ಷ ಜನನಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಐದು ದೇಶಗಳಿಗೆ ಒಟ್ಟು ಅವಧಿಪೂರ್ವ ಜನನ ಸಂಖ್ಯೆಗಳು ನಿಜಕ್ಕೂ ಆತಂಕಕಾರಿಯಾಗಿದೆ.
ಭಾರತ ಸರ್ಕಾರವು ನವಜಾತ ಕ್ರಿಯಾ ಯೋಜನೆ ಮತ್ತು ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮದಂತಹ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ದೇಶಾದ್ಯಂತ ಅನೇಕ ವಿಶೇಷ ನವಜಾತ ಆರೈಕೆ ಘಟಕಗಳನ್ನು (SNCU) ಸ್ಥಾಪಿಸಿದೆ. ಜಾಗತಿಕ ಅವಧಿ ಪೂರ್ವ ಜನನ ಪ್ರಮಾಣವು 2010 ರಲ್ಲಿ 9.8 ಪ್ರತಿಶತಕ್ಕೆ ಹೋಲಿಸಿದರೆ 2020 ರಲ್ಲಿ ಶೇಕಡಾ 9.9 ರಷ್ಟಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 am, Wed, 10 May 23