AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ವೇದಿಕೆಗೆ ಶಾಂತಿ ನಿಯೋಗ ಕಳುಹಿಸಲಿದೆಯಂತೆ ಪಾಕಿಸ್ತಾನ, ಮತ್ತೊಮ್ಮೆ ಭಾರತವನ್ನು ಕಾಪಿ ಮಾಡಿದ ಪಾಕ್

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯ ನಂತರ ಉದ್ವಿಗ್ನತೆ ಕಡಿಮೆಯಾಗಿದೆ. ಆದರೆ ಈಗ ಪಾಕಿಸ್ತಾನವು ವಿಶ್ವದಲ್ಲಿ ತನ್ನ ಇಮೇಜ್ ಅನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಅವರು ರಾಜತಾಂತ್ರಿಕವಾಗಿಯೂ ಭಾರತವನ್ನು ನಕಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ, ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿಯನ್ನು ತಿಳಿಸಲು ಭಾರತ ಸರ್ಕಾರವು 7 ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲು ಸಿದ್ಧವಾಗಿದೆ.

ಜಾಗತಿಕ ವೇದಿಕೆಗೆ ಶಾಂತಿ ನಿಯೋಗ ಕಳುಹಿಸಲಿದೆಯಂತೆ ಪಾಕಿಸ್ತಾನ, ಮತ್ತೊಮ್ಮೆ ಭಾರತವನ್ನು ಕಾಪಿ ಮಾಡಿದ ಪಾಕ್
ಶೆಹಬಾಜ್Image Credit source: NDTV
ನಯನಾ ರಾಜೀವ್
|

Updated on: May 18, 2025 | 9:41 AM

Share

ಇಸ್ಲಾಮಾಬಾದ್, ಮೇ 18: ಭಾರತ ಮತ್ತು ಪಾಕಿಸ್ತಾನ(Pakistan) ನಡುವೆ ಕದನ ವಿರಾಮ ಘೋಷಣೆಯ ನಂತರ ಉದ್ವಿಗ್ನತೆ ಕಡಿಮೆಯಾಗಿದೆ. ಆದರೆ ಈಗ ಪಾಕಿಸ್ತಾನವು ವಿಶ್ವದಲ್ಲಿ ತನ್ನ ಇಮೇಜ್ ಅನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಅವರು ರಾಜತಾಂತ್ರಿಕವಾಗಿಯೂ ಭಾರತವನ್ನು ನಕಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ, ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿಯನ್ನು ತಿಳಿಸಲು ಭಾರತ ಸರ್ಕಾರವು 7 ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲು ಸಿದ್ಧವಾಗಿದೆ.

ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಿಗೆ ಕಳುಹಿಸಲು ನಿರ್ಧರಿಸಿದೆ. ಭಾರತದ ಈ ಹೆಜ್ಜೆಯನ್ನು ನೋಡಿ, ಪಾಕಿಸ್ತಾನವು ಶಾಂತಿಯ ಸಂದೇಶವನ್ನು ನೀಡಲು ತನ್ನ ನಿಯೋಗವನ್ನು ಜಾಗತಿಕ ವೇದಿಕೆಗೆ ಕಳುಹಿಸಲು ನಿರ್ಧರಿಸಿದೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ತನ್ನ ವಾದವನ್ನು ಮಂಡಿಸಲು ನಿಯೋಗವನ್ನು ಹುಡುಕಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಬಿಲಾವಲ್ ಭುಟ್ಟೋ ಜರ್ದಾರಿ ಶನಿವಾರ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಉಭಯ ದೇಶಗಳ ನಡುವಿನ ಇತ್ತೀಚಿನ ಉದ್ವಿಗ್ನತೆಯ ಕುರಿತು ಪಾಕಿಸ್ತಾನದ ವಾದವನ್ನು ಮಂಡಿಸಲು ನಿಯೋಗದ ನೇತೃತ್ವ ವಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು ಆಗ ಈ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ
Image
ಆಪರೇಷನ್ ಸಿಂಧೂರ್ ಕುರಿತು ಭಾರತೀಯ ಸೇನೆಯಿಂದ ಸುದ್ದಿಗೋಷ್ಠಿ
Image
ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರಿಗೆ ತಕ್ಕ ಶಾಸ್ತಿಯಾಗಿದೆ ಎಂದ ಸೇನೆ
Image
ಪಾಕ್​ನಲ್ಲಿ ಭಾರತದ ದಾಳಿ ಆರಂಭದಿಂದ ಇಲ್ಲಿಯವರೆಗೆ ಏನೇನಾಯ್ತು?
Image
ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ, ಮನೆ ಬಿಟ್ಟು ಓಡಿದ ಜನರು

ಇಂದು ಬೆಳಗ್ಗೆ ಪ್ರಧಾನಿ ಶೆಹಬಾಜ್ ಷರೀಫ್ ನನ್ನನ್ನು ಸಂಪರ್ಕಿಸಿದರು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ಪಾಕಿಸ್ತಾನದ ವಾದವನ್ನು ಮಂಡಿಸಲು ನಿಯೋಗದ ನೇತೃತ್ವ ವಹಿಸುವಂತೆ ಅವರು ನನ್ನನ್ನು ವಿನಂತಿಸಿದರು ಎಂದು ಅವರು ಹೇಳಿದ್ದಾರೆ.

ಈ ಜವಾಬ್ದಾರಿಯನ್ನು ಸ್ವೀಕರಿಸಲು ನನಗೆ ಸಂತೋಷವಾಗುತ್ತಿದೆ. ಈ ಸವಾಲಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಸೇವೆ ಸಲ್ಲಿಸಲು ಬದ್ಧನಾಗಿದ್ದೇನೆ ಎಂದು ಜರ್ದಾರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಯೋತ್ಪಾದನೆ ಕುರಿತು ಅಂತಾರಾಷ್ಟ್ರೀಯ ಟೀಕೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಕಳಂಕಿತ ಇಮೇಜ್ ಅನ್ನು ಸುಧಾರಿಸುವ ಹತಾಶ ಪ್ರಯತ್ನವನ್ನು ಈ ಘೋಷಣೆ ಪ್ರತಿಬಿಂಬಿಸುತ್ತದೆ.

ಪಾಕಿಸ್ತಾನ ಭಯೋತ್ಪಾದನೆಯನ್ನು ತಡೆಯುವಲ್ಲಿ ವಿಫಲವಾಗಿರುವುದರಿಂದ ಮತ್ತು ಇತ್ತೀಚೆಗೆ ಭಾರತ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿರುವುದರಿಂದ ಭುಟ್ಟೋ ಜರ್ದಾರಿ ನಿಯೋಗವು ಕಠಿಣ ಹೋರಾಟವನ್ನು ಎದುರಿಸಬೇಕಾಗುತ್ತದೆ.

ಮತ್ತಷ್ಟು ಓದಿ: Operation Sindoor: ಜಗತ್ತಿನ ಮುಂದೆ ಪಾಕ್​ ಬಣ್ಣ ಬಯಲು ಮಾಡಲಿದ್ದಾರೆ ಭಾರತದ ಸಂಸದರು

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು, ಇದರ ಪರಿಣಾಮವಾಗಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಗುಂಪುಗಳಿಗೆ ಸೇರಿದ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ