AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ 24-36 ಗಂಟೆಗಳಲ್ಲಿ ದಾಳಿ ನಡೆಸುತ್ತದೆ ಎಂದ ಪಾಕ್​​​ ಸಚಿವನ ಎಕ್ಸ್​​​ ಖಾತೆ ಬ್ಲಾಕ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ, ಶೀಘ್ರದಲ್ಲೇ ಭಾರತ ಪಾಕಿಸ್ತಾನದ ಮೇಲೆ ದಾಳಿಯನ್ನು ಮಾಡುತ್ತದೆ ಎಂದು ಅಲ್ಲಿನ ಸಚಿವ ಅತಾವುಲ್ಲಾ ತರಾರ್ ಹೇಳಿದರು. ಇದೀಗ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಅವರ ಎಕ್ಸ್​​ ಖಾತೆಯನ್ನು ಭಾರತ ತಡೆಹಿಡಿದಿದೆ.

ಭಾರತ 24-36 ಗಂಟೆಗಳಲ್ಲಿ ದಾಳಿ ನಡೆಸುತ್ತದೆ ಎಂದ ಪಾಕ್​​​ ಸಚಿವನ ಎಕ್ಸ್​​​ ಖಾತೆ ಬ್ಲಾಕ್
ನರೇಂದ್ರ ಮೋದಿ ಹಾಗೂ ಅತಾವುಲ್ಲಾ ತರಾರ್Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:May 03, 2025 | 10:45 AM

Share

ಭಾರತ -ಪಾಕ್ ಗಡಿಯಲ್ಲಿ (India-Pakistan border) ಉದ್ವಿಗ್ನತೆ ಸ್ಥಿತಿ ಹೆಚ್ಚಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam terrorist attack) ಪ್ರತೀಕಾರ ತೀರಿಸಲು ಭಾರತದ ಮಿಲಿಟರಿ ಪಡೆ ಸಿದ್ಧವಾಗಿ ನಿಂತಿದೆ. ಇದರ ನಡುವೆ ಪಾಕಿಸ್ತಾನಕ್ಕೆ ಭಾರತ ದಾಳಿ ಮಾಡುತ್ತದೆ ಎಂಬ ಭಯ ಕೂಡ ಇದೆ. ಈ ಕಾರಣಕ್ಕೆ ಅಲ್ಲಿನ ಸಚಿವರೊಬ್ಬರ ಭಾರತ ಶ್ರೀಘ್ರದಲ್ಲಿ ದಾಳಿಯನ್ನು ಮಾಡುತ್ತದೆ ಎಂಬ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದರು, ಇದೀಗ ಆ ಸಚಿವನ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾ ತರಾರ್ ಅವರ ಎಕ್ಸ್ ಖಾತೆಯನ್ನು ತಡೆಯಿಡಿಯಲಾಗಿದೆ.

ಬೆಳಗಿನ ಜಾವ 2 ಗಂಟೆಗೆ ಪತ್ರಿಕಾಗೋಷ್ಠಿ ಕರೆದು ಭಾರತ ಮುಂದಿನ 24-36 ಗಂಟೆಗಳಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಎಂಬ ಹೇಳಿದ್ದರು. ಏಪ್ರಿಲ್ 30 ರಂದು ನಡೆದ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಹೇಳಿದರು. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ, ಪಾಕಿಸ್ತಾನ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿಯನ್ನು ನಡೆಸಿದೆ. ಈ ಬಗ್ಗೆ ಭಾರತ ಕೂಡ ಪ್ರತಿಯಾಗಿ ದಾಳಿ ಮಾಡಿದೆ. ಈ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ ನಂತರ ಈ ಹೇಳಿಕೆಯನ್ನು ಸಚಿವ ಅತಾವುಲ್ಲಾ ತರಾರ್ ನೀಡಿದ್ದಾರೆ.

ಭಾರತದ ಒಂದು ವೇಳೆ ಪಾಕ್​ ಮೇಲೆ ದಾಳಿ ನಡೆಸಿದರೆ. ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪಾಕ್​​ ಎಲ್ಲದಕ್ಕೂ ಸಿದ್ಧತೆಯನ್ನು ನಡೆಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಭಾರತ ಪಾಕಿಸ್ತಾನದ ಮೇಲೆ ಯುದ್ಧ ಹೇರಲು ಪ್ರಯತ್ನಿಸಿದರೆ ಭಾರತ ವಿನಾಶ ಆಗುತ್ತದೆ ಎಂಬ ಡೈಲಾಗ್​​​ಗಳನ್ನು ಹೇಳಿದರು. ಇದರ ಜತೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಭಾರತದ ಜೊತೆ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಏನಾದರೂ ಆಗಬೇಕಾದರೆ, ಅದು ಎರಡು ಅಥವಾ ಮೂರು ದಿನಗಳಲ್ಲಿ ಸಂಭವಿಸುತ್ತದೆ ಎಂದು ಸ್ಥಳೀಯ ಮಾಧ್ಯಮಕ್ಕೆ ಹೇಳಿದರು.

ಇದನ್ನೂ ಓದಿ: ಭಾರತದಿಂದ ದಾಳಿಯ ಭಯ; ಆಹಾರ ಸಂಗ್ರಹಿಸಿಟ್ಟುಕೊಳ್ಳಲು ಗಡಿ ಭಾಗದ ಜನರಿಗೆ ಪಾಕಿಸ್ತಾನ ಸೂಚನೆ

26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ತೆಗೆದುಕೊಂಡ ಹಲವಾರು ಕ್ರಮಗಳು ಗಡಿಯುದ್ದಕ್ಕೂ ಉದ್ವಿಗ್ನತೆ ಹೆಚ್ಚಿಸಿದೆ. ಭಾರತವು ಪಾಕಿಸ್ತಾನದೊಂದಿಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿದೆ, ಭಾರತ ಪಾಕ್​​​ಗೆ ಒದೊಂದು ರಾಜತಾಂತ್ರಿಕ ಪೆಟ್ಟು ನೀಡಿದೆ. ಭಾರತದ ಪಾಕ್​​ ವಿರುದ್ಧ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಪ್ರಧಾನಿ ಮೋದಿ ಕೂಡ, ಭಾರತದ ನಾಗರಿಕರ ಸಾವಿನ ನ್ಯಾಯ ನೀಡುತ್ತೇವೆ ಎಂದು ಭರವಸೆ ಕೂಡ ನೀಡಿದ್ದಾರೆ.

ಇತ್ತೀಚೆಗೆ ಹನಿಯಾ ಅಮೀರ್, ಮಹಿರಾ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಯೂಟ್ಯೂಬ್ ಚಾನೆಲ್‌ಗಳು ಮತ್ತು ಡಾನ್ ನ್ಯೂಸ್, ಇರ್ಷಾದ್ ಭಟ್ಟಿ, SAMAA ಟಿವಿ, ARY ನ್ಯೂಸ್ ಮತ್ತು ಜಿಯೋ ನ್ಯೂಸ್ ಸೇರಿದಂತೆ ದೇಶದ ಸುದ್ದಿವಾಹಿನಿಗಳನ್ನು ಸಹ ನಿರ್ಬಂಧಿಸಲಾಗಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Sat, 3 May 25