Sardar Tanveer Ilyas: ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಪ್ರಧಾನಮಂತ್ರಿ ಸ್ಥಾನದಿಂದ ಅನರ್ಹ
ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಪ್ರಧಾನಿ ಸ್ಥಾನದಿಂದ ಮುಜಫರಾಬಾದ್ ಹೈಕೋರ್ಟ್ ಅನರ್ಹಗೊಳಿಸಲಾಗಿದೆ.

ಮುಜಫರಾಬಾದ್: ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ (Sardar Tanveer Ilyas) ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಪ್ರಧಾನಿ ಸ್ಥಾನದಿಂದ ಮುಜಫರಾಬಾದ್ ಹೈಕೋರ್ಟ್ ಅನರ್ಹಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ANI ವರದಿ ಮಾಡಿದೆ. ಪಾಕ್ ಆಕ್ರಮಿತ ಕಾಶ್ಮೀರದ (ಎಜೆಕೆ) ಹೈಕೋರ್ಟ್ ಮಂಗಳವಾರ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಅವರು ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದು ಅವರ ಪ್ರಧಾನಿ ಸ್ಥಾನದಿಂದ ಅಹರ್ನಗೊಳಿಸಿದೆ. ಇದು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಗೆ ತೀವ್ರ ಹೊಡೆತ ನೀಡಿದೆ.
Pakistan occupied Kashmir’s PM Sardar Tanveer Ilyas disqualified for contempt of court, reports local media.
— ANI (@ANI) April 11, 2023
ಇಲ್ಯಾಸ್ ಅವರ ಒಂದು ಹೇಳಿಕೆಯಲ್ಲಿ ನಾಯ್ಯಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮತ್ತು AJK ಹೈಕೋರ್ಟ್‌ಗೆ ವಿಚಾರಣೆಗೆ ಬರುವಂತೆ ತಿಳಿಸಿತ್ತು. ನಂತರ ನಾಯ್ಯಂಗ ನಿಂದನೆ ಆರೋಪದ ಮೇಲೆ ಅವರನ್ನು ಆಡಳಿತದಿಂದ ಅನರ್ಹಗೊಳಿಸುವಂತೆ ಆದೇಶ ನೀಡಿತ್ತು.
ಇದನ್ನೂ ಓದಿ: ಧಿಕ್ಕಾರ ಧಿಕ್ಕಾರ.. ಚೀನಾ ವಿರುದ್ಧ PoK ನಿವಾಸಿಗಳಿಂದ ಮುರ್ದಾಬಾದ್ ಘೋಷಣೆ!
ನ್ಯಾಯಾಧೀಶ ಸದಾಕತ್ ಹುಸೇನ್ ರಾಜಾ ಅವರ ನಿರ್ದೇಶನದ ಪೂರ್ಣ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪ್ರಧಾನಿ ಸಂಬಂಧಿತ ವಿಡಿಯೋಗಳನ್ನು ಪ್ರಸಾರ ಮಾಡಲಾಗಿತ್ತು. ನನ್ನ ಯಾವುದೇ ಹೇಳಿಕೆಗಳು ನ್ಯಾಯಾಧೀಶರನ್ನು ಗಾಯಗೊಳಿಸಿದ್ದರೆ ನಾನು ಪೂರ್ಣ ಹೃದಯದಿಂದ ವಿಷಾದಿಸುತ್ತೇನೆ” ಎಂದು ಇಲ್ಯಾಸ್ ನ್ಯಾಯಾಲಯಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
Published On - 3:29 pm, Tue, 11 April 23




