ಪಾಕಿಸ್ತಾನ: ವಿದ್ಯುತ್ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ; ಮುಜಾಫರಾ​​ಬಾದ್​​ನಲ್ಲಿ ಪ್ರತಿಭಟನೆ

ಶನಿವಾರ ಮುಜಾಫರಾ​​ಬಾದ್​​​ನಲ್ಲಿ ನೂರಾರು ಜನರು ವಿದ್ಯುತ್ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಜನರು ಒಪ್ಪದಿದ್ದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಏರುತ್ತಿರುವ ವಿದ್ಯುತ್ ದರವನ್ನು ವಿರೋಧಿಸಿ ಮುಜಾಫರಾ​​ಬಾದ್​​​ನಲ್ಲಿ ನಗರದ ನಾಗರಿಕ ಸಮಾಜದ ಸದಸ್ಯರು ಶುಕ್ರವಾರ ವಿದ್ಯುತ್ ಬಿಲ್‌ಗಳನ್ನು ನದಿಗೆ ಎಸೆದರು.

ಪಾಕಿಸ್ತಾನ: ವಿದ್ಯುತ್ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ; ಮುಜಾಫರಾ​​ಬಾದ್​​ನಲ್ಲಿ ಪ್ರತಿಭಟನೆ
ಮುಜಾಫರಾ​​ಬಾದ್​​ನಲ್ಲಿ ಪ್ರತಿಭಟನೆ
ರಶ್ಮಿ ಕಲ್ಲಕಟ್ಟ

Updated on: Sep 30, 2023 | 6:07 PM

ದೆಹಲಿ ಸೆಪ್ಟೆಂಬರ್ 30: ಪಾಕಿಸ್ತಾನದಲ್ಲಿ (Pakistan) ವಿದ್ಯುತ್ ಬೆಲೆ ಏರಿಕೆ  (electricity bills)ವಿರುದ್ಧ ಜನ ಆಕ್ರೋಶ ತೀವ್ರವಾಗಿದ್ದು ಶನಿವಾರ ಪಿಒಕೆಯಲ್ಲಿ (PoK) ಜನರು ಪ್ರತಿಭಟನೆ ನಡೆಸಿದ್ದಾರೆ. ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಲು ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದಾರೆ. ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದ್ದು ಜನರು ಬಿದ್ದು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಜನರು ಈಗಾಗವೇ ಹಣದುಬ್ಬರದಿಂದ ತೊಂದರೆಗೀಡಾಗಿದ್ದಾರೆ. ಪೆಟ್ರೋಲ್ ದರ 350 ರೂ. ದಾಟಿದೆ. ಪ್ರತಿ ಯೂನಿಟ್ ಗೆ 56 ರೂ.ಗೆ ಸಾರ್ವಜನಿಕರು ವಿದ್ಯುತ್ ಪಡೆಯುತ್ತಿದ್ದಾರೆ.

ಶನಿವಾರ ಮುಜಾಫರಾ​​ಬಾದ್​​​ನಲ್ಲಿ ನೂರಾರು ಜನರು ವಿದ್ಯುತ್ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಜನರು ಒಪ್ಪದಿದ್ದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಏರುತ್ತಿರುವ ವಿದ್ಯುತ್ ದರವನ್ನು ವಿರೋಧಿಸಿ ಮುಜಾಫರಾ​​ಬಾದ್​​​ನಲ್ಲಿ ನಗರದ ನಾಗರಿಕ ಸಮಾಜದ ಸದಸ್ಯರು ಶುಕ್ರವಾರ ವಿದ್ಯುತ್ ಬಿಲ್‌ಗಳನ್ನು ನದಿಗೆ ಎಸೆದರು.

ಸೆ.20ರಿಂದ ನಡೆಯುತ್ತಿದೆ ಮುಷ್ಕರ

ಮುಜಾಫರಾಬಾದ್‌ನಲ್ಲಿ ಸೆಪ್ಟಂಬರ್ 20 ರಿಂದ ಜನ ಕ್ರಿಯಾ ಸಮಿತಿ ಮುಷ್ಕರ ನಡೆಸುತ್ತಿದೆ. ಆರಂಭದಲ್ಲಿ ಪ್ರೆಸ್ ಕ್ಲಬ್ ಮುಂಭಾಗದ ಅಡ್ಡರಸ್ತೆಯಲ್ಲಿ ಮತ್ತು ನಂತರ ಮುಖ್ಯರಸ್ತೆಯ ಮುಂಭಾಗದ ಕ್ಲಬ್ ಆವರಣದಲ್ಲಿ ಪ್ರತಿಭಟನೆ ನಡೆದಿದ್ದು, ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವರ್ತಕರು, ವಕೀಲರು, ವಿದ್ಯಾರ್ಥಿಗಳು, ಮಾರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಎಲ್ಲರೂ ಧರಣಿಯಲ್ಲಿ ಭಾಗವಹಿಸುತ್ತಾರೆ. ಈ ವೇಳೆ ನಗರದ ವಿವಿಧ ಪ್ರದೇಶಗಳಿಂದ ಬರುವ ಗ್ರಾಹಕರಿಂದ ವಿದ್ಯುತ್ ಬಿಲ್ ಸಂಗ್ರಹಿಸುತ್ತಾರೆ.

ಇದನ್ನೂ ಓದಿ: ಆರ್ಥಿಕ ಅನಿಶ್ಚಿತತೆ ಮಧ್ಯೆಯೂ ಪಾಕಿಸ್ತಾನ ಯಾಕೆ ಪರಮಾಣು ಶಸ್ತ್ರಾಸ್ತ್ರ ಹೆಚ್ಚಿಸಲು ಯತ್ನಿಸುತ್ತಿದೆ?

ಪ್ರತಿಭಟನಕಾರರ ವಿರುದ್ಧ ಕ್ರಮ

ಮುಜಫರಾಬಾದ್ ಡೆಪ್ಯುಟಿ ಕಮಿಷನರ್ ಅವರು ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳು, ಸಹಾಯಕ ಕಮಿಷನರ್ (ಗ್ರಾಮೀಣ) ಮುನೀರ್ ಅಹ್ಮದ್ ಖುರೇಷಿ ಮತ್ತು ತಹಸೀಲ್ದಾರ್ ಸೈಯದ್ ಜಮೀರ್ ಶಾ ಅವರು ಪ್ರತಿಭಟನಾಕಾರರನ್ನು ತಡೆಯಲು ಎಲ್ಲಾ ಕ್ರಮಗಳನ್ನು (ಲಾಠಿ ಚಾರ್ಜ್ ಸೇರಿದಂತೆ) ತೆಗೆದುಕೊಳ್ಳುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us