AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Games: ಪಾಕಿಸ್ತಾನಕ್ಕೆ ಸೋಲುಣಿಸಿ ಚಿನ್ನ ಗೆದ್ದ ಭಾರತ ಸ್ಕ್ವಾಷ್ ತಂಡ

Asian Games 2023: ಪ್ರಸ್ತುತ ಏಷ್ಯನ್ ಗೇಮ್ಸ್​ ಪದಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಇದುವರೆಗೆ 10 ಚಿನ್ನದ ಪದಕಗಳನ್ನು ಹಾಗೂ 13 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

Asian Games: ಪಾಕಿಸ್ತಾನಕ್ಕೆ ಸೋಲುಣಿಸಿ ಚಿನ್ನ ಗೆದ್ದ ಭಾರತ ಸ್ಕ್ವಾಷ್ ತಂಡ
India Squash Team
TV9 Web
| Edited By: |

Updated on:Sep 30, 2023 | 5:04 PM

Share

ಚೀನಾದ ಹಾಂಗ್​ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಸ್ಕ್ವಾಷ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಈ ಭಾರತ ಪದಕ ಪಟ್ಟಿಯಲ್ಲಿ 10ನೇ ಸ್ವರ್ಣ ಪದಕ ಸೇರ್ಪಡೆಯಾಗಿದೆ. ಈ ಪಂದ್ಯದ ಆರಂಭದಲ್ಲಿ ಪಾಕಿಸ್ತಾನ್ ತಂಡ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಭಾರತೀಯರು ಕಠಿಣ ಪೈಪೋಟಿ ನೀಡಿ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು ವಿಶೇಷ.

ಮೊದಲ ಸುತ್ತಿನಲ್ಲಿ ಭಾರತೀಯ ಸ್ಕ್ವಾಷ್ ತಾರೆ ಮಹೇಶ್ ಮಂಗಾಂವ್ಕರ್ ಪಾಕ್ ಆಟಗಾರ ನಾಸಿರ್ ಇಕ್ಬಾಲ್ ವಿರುದ್ಧ ಸೋತಿದ್ದರು. ಇದರ ನಂತರ ಸೌರವ್ ಘೋಷಾಲ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಂಎ ಖಾನ್ ಅವರನ್ನು ಸೋಲಿಸಿದರು. ಈ ಮೂಲಕ ಸ್ಕೋರ್ ಅನ್ನು 1-1 ರಲ್ಲಿ ಸಮಗೊಳಿಸಿದರು.

ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್ ಸುತ್ತಿನಲ್ಲಿ ಭಾರತದ ಪರ ಅಭಯ್ ಸಿಂಗ್ ದಿಟ್ಟ ಪ್ರದರ್ಶನ ನೀಡಿದರೆ, ಅತ್ತ ಪಾಕ್ ಪರ ನೂರ್ ಜಮಾನ್ ಉತ್ತಮ ಪೈಪೋಟಿ ನೀಡಿದರು. ಹೀಗಾಗಿ ಯಾರು ಗೆಲ್ಲುತ್ತಾರೆಂಬ ಕುತೂಹಲ ಮೂಡಿತು. ಆದರೆ ಎಲ್ಲಾ ಒತ್ತಡಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಭಾರತದ ಅಭಯ್ ಸಿಂಗ್, ನೂರ್ ಜಮಾನ್​ಗೆ ವಿರುದ್ಧ ಪಂದ್ಯವನ್ನು 3-2 ಅಂತರದಿಂದ ಗೆದ್ದುಕೊಂಡರು. ಈ ಮೂಲಕ ಅಭಯ್ ಸಿಂಗ್ ಭಾರತದ ಗೆಲುವಿನ ಹೀರೋ ಎನಿಸಿಕೊಂಡರು.

ಸೇಡು ತೀರಿಸಿಕೊಂಡ ಭಾರತ:

ಈ ಚಿನ್ನದ ಪದಕದ ಗೆಲುವಿನೊಂದಿಗೆ ಭಾರತ ತಂಡ ಪಾಕಿಸ್ತಾನ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಏಕೆಂದರೆ ಲೀಗ್ ಹಂತದಲ್ಲಿ ಪಾಕಿಸ್ತಾನ್ ಭಾರತವನ್ನು ಸೋಲಿಸಿತ್ತು. ಇದೀಗ ಪ್ರಶಸ್ತಿ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭಾರತ ತಂಡ ಗೆದ್ದು ಬೀಗಿರುವುದು ವಿಶೇಷ.

ಇನ್ನು ಭಾರತ ತಂಡ 2014ರಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಪಾಕಿಸ್ತಾನ 2010ರಲ್ಲಿ ಚಿನ್ನ ಗೆದ್ದಿತ್ತು. ಇದಾಗ್ಯೂ ಈ ಬಾರಿ ಸ್ಕ್ವಾಷ್‌ನಲ್ಲಿ ಪಾಕಿಸ್ತಾನ್ ಅತ್ಯಂತ ಬಲಿಷ್ಠವೆಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಬಲಾಢ್ಯರನ್ನೇ ಬಗ್ಗು ಬಡಿಯುವ ಮೂಲಕ ಭಾರತೀಯ ತಾರೆಯರು ಹೊಸ ಇತಿಹಾಸ ನಿರ್ಮಿಸಿದ್ದಾರೆ.

4ನೇ ಸ್ಥಾನದಲ್ಲಿ ಭಾರತ:

ಪ್ರಸ್ತುತ ಏಷ್ಯನ್ ಗೇಮ್ಸ್​ ಪದಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಇದುವರೆಗೆ 10 ಚಿನ್ನದ ಪದಕಗಳನ್ನು ಹಾಗೂ 13 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಇನ್ನು 108 ಚಿನ್ನ, 66 ಬೆಳ್ಳಿ, 33 ಕಂಚಿನ ಪದಕಗಳೊಂದಿಗೆ ಒಟ್ಟು 207 ಪದಕಗಳನ್ನು ಗೆದ್ದಿರುವ ಆತಿಥೇಯ ಚೀನಾ ದೇಶವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Published On - 4:45 pm, Sat, 30 September 23