ವಿದೇಶಗಳ ನಾಯಕರು ನೀಡಿದ ದುಬಾರಿ ಉಡುಗೊರೆಗಳನ್ನು ಮಾರುತ್ತಿದ್ದಾರೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ !; ನಾಚಿಕೆಗೇಡು ಎಂದ ಪ್ರತಿಪಕ್ಷಗಳು

| Updated By: Lakshmi Hegde

Updated on: Oct 21, 2021 | 3:34 PM

ಯಾವುದೇ ದೇಶಗಳ ನಾಯಕರು, ಸಾಂವಿಧಾನಿಕ ಹುದ್ದೆಯಲ್ಲಿರುವ ಉನ್ನತಾಧಿಕಾರಿಗಳು ಭೇಟಿಯಾದಾಗ ಉಡುಗೊರೆ ವಿನಿಮಯ ಆಗುವುದು ಸಾಮಾನ್ಯವಾಗಿದೆ. ಅವುಗಳನ್ನು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡದೆ ಇದ್ದರೆ ಅವೂ ಕೂಡ ಆಸ್ತಿಯ ರೂಪದಲ್ಲೇ ಉಳಿಯುತ್ತವೆ.

ವಿದೇಶಗಳ ನಾಯಕರು ನೀಡಿದ ದುಬಾರಿ ಉಡುಗೊರೆಗಳನ್ನು ಮಾರುತ್ತಿದ್ದಾರೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ !; ನಾಚಿಕೆಗೇಡು ಎಂದ ಪ್ರತಿಪಕ್ಷಗಳು
ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​
Follow us on

ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್​ ಖಾನ್ (Pakistan PM Imran Khan)​​ ಮೇಲೆ ಅಲ್ಲಿನ ಪ್ರತಿಪಕ್ಷಗಳು ಒಂದು ಆರೋಪ ಮಾಡಿವೆ. ಇಮ್ರಾನ್​​ ಖಾನ್​ರಿಗೆ ಬೇರೆ ದೇಶಗಳ ನಾಯಕರು ನೀಡಿದ ಉಡುಗೊರೆಗಳನ್ನು ಅವರು ಮಾರಾಟ ಮಾಡುತ್ತಿದ್ದಾರೆ ಎಂಬುದು ಈ ಆರೋಪ. ಅವರಿಗೆ ನೀಡಲಾಗಿದ್ದ 1 ಮಿಲಿಯನ್​ ಡಾಲರ್​​ ಮೌಲ್ಯದ ವಾಚ್​​ನ್ನು ಕೂಡ ಇಮ್ರಾನ್​ ಮಾರಾಟ ಮಾಡಿದ್ದಾರೆ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ. 

ಯಾವುದೇ ದೇಶಗಳ ನಾಯಕರು, ಸಾಂವಿಧಾನಿಕ ಹುದ್ದೆಯಲ್ಲಿರುವ ಉನ್ನತಾಧಿಕಾರಿಗಳು ಭೇಟಿಯಾದಾಗ ಉಡುಗೊರೆ ವಿನಿಮಯ ಆಗುವುದು ಸಾಮಾನ್ಯವಾಗಿದೆ. ಅವುಗಳನ್ನು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡದೆ ಇದ್ದರೆ ಅವೂ ಕೂಡ ಆಸ್ತಿಯ ರೂಪದಲ್ಲೇ ಉಳಿಯುತ್ತವೆ ಎಂದು ಪಾಕಿಸ್ತಾನದ ಉಡುಗೊರೆ ಠೇವಣಿ (ತೋಶಖಾನ) ನಿಯಮ ಹೇಳುತ್ತದೆ. ಅದನ್ನು ಬಹಿರಂಗ ಹರಾಜುಹಾಕುವ ಬದಲು ಇಮ್ರಾನ್​ ಖಾನ್​ ಹೀಗೆ ಮಾರಾಟ ಮಾಡುತ್ತಿರುವುದು ಸರ್ಕಾರಿ ಖಜಾನೆಯನ್ನು ಲೂಟಿಮಾಡಿದಂತಾಗುತ್ತದೆ. ಇದು ನಾಚಿಕೆಗೇಡು ಎಂದು ಪ್ರತಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪಾಕಿಸ್ತಾನದ ಪಿಎಂಎಲ್​​-ಎನ್​​ ಪಕ್ಷದ ಉಪಾಧ್ಯಕ್ಷೆ ಮರ್ಯಾಮ್​ ನವಾಜ್​, ಪಾಕಿಸ್ತಾನದ ಉಡುಗೊರೆ ಠೇವಣಿ ನಿಯಮಗಳ ವಿರುದ್ಧವಾಗಿ ಹೀಗೆ ನಿಮಗೆ ಬಂದ ಉಡುಗೊರೆಗಳನ್ನು ಮಾರಾಟ ಮಾಡುತ್ತೀದ್ದೀರಿ. ಬಾಯಲ್ಲಿ ಮದೀನಾ ರಾಜ್ಯ ಸ್ಥಾಪನೆ ಮಾತುಗಳನ್ನಾಡುತ್ತೀದ್ದೀರಿ. ಒಬ್ಬ ವ್ಯಕ್ತಿ, ಅದರಲ್ಲೂ ಪ್ರಧಾನಿ ಹುದ್ದೆಯಲ್ಲಿರುವಂಥ ವ್ಯಕ್ತಿ ಇಷ್ಟು ಸೂಕ್ಷ್ಮವಲ್ಲದ, ಕಿವುಡ, ಕುರುಡನಂತೆ ವರ್ತನೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.  ಹೀಗೆ ಇತರ ರಾಷ್ಟ್ರಗಳ ನಾಯಕರು ನೀಡುವ ಉಡುಗೊರೆಗಳನ್ನು ಮಾರಾಟ ಮಾಡುವ ಮೂಲಕ ಪಾಕಿಸ್ತಾನದ ಮಾನಹರಾಜು ಹಾಕುತ್ತಿದ್ದಾರೆಂದು ಇದೇ ಪಕ್ಷದ ಪಂಜಾಬ್​ ಪ್ರಾಂತ್ಯದ ಅಧ್ಯಕ್ಷ ರಾಣಾ ಸನಾವುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಡೆಮಾಕ್ರಟಿಕ್​ ಮೂವ್​ಮೆಂಟ್​ (PDM) ಅಧ್ಯಕ್ಷ ಮೌಲಾನಾ ಫಜಲೂರ್​ ರೆಹಮಾನ್​ ಕೂಡ ಇದೇ ವಿಚಾರವನ್ನು ಎತ್ತಾಡಿದ್ದಾರೆ. ಗಲ್ಫ್​ ದೇಶಗಳ ರಾಜಕುಮಾರನೊಬ್ಬ ನೀಡಿದ ಸುಮಾರು 1 ಮಿಲಿಯನ್​ ಯುಎಸ್​ ಡಾಲರ್​ ಮೌಲ್ಯದ ವಾಚ್​​ನ್ನು ಕೂಡ ಇಮ್ರಾನ್ ಖಾನ್​ ಮಾರಾಟ ಮಾಡಿದ್ದಾರೆ. ಅದನ್ನು ದುಬೈನಲ್ಲಿ, ತಮ್ಮ ಆಪ್ತನೊಬ್ಬನ ಸಹಾಯದಿಂದ ಮಾರಾಟ ಮಾಡಿದ್ದು ಗೊತ್ತಾಗಿದೆ. ಇದು ನಿಜಕ್ಕೂ ನಾಚಿಕಗೇಡಿನ ವಿಷಯ ಎಂದು ಹೇಳಿದ್ದಾರೆ.  ಪಾಕಿಸ್ತಾನಿ ಸರ್ಕಾರ ವಿದೇಶಗಳಿಂದ ಸ್ವೀಕರಿಸಿದ ಉಡುಗೊರೆಗಳ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ ಬೆನ್ನಲ್ಲೇ ಇಂಥದ್ದೊಂದು ಗಂಭೀರ ಆರೋಪ ಇಮ್ರಾನ್​ ಖಾನ್​ ವಿರುದ್ಧ ಎದ್ದಿದೆ.

ಇದನ್ನೂ ಓದಿ: ‘ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ; ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ’: ಸಚಿವ ಆರ್.ಅಶೋಕ್

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹುಡುಗಿಯರಿಗೆ ಸ್ಕೂಟರ್​​, ಸ್ಮಾರ್ಟ್​ಫೋನ್​: ಪ್ರಿಯಾಂಕಾ ಗಾಂಧಿ ಭರವಸೆ