ಬ್ರೇಕ್ಫಾಸ್ಟ್ ವಿಚಾರಕ್ಕೆ ಸಿಕ್ಕಾಪಟೆ ಟ್ರೋಲ್ ಆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಹಾಗೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತೀರಲ್ಲ, ಅವರ ಬಳಿ ಮಾತನಾಡುವುದು ಬಿಟ್ಟು, ತಿನ್ನಲು ಕೊಡಬಹುದಲ್ಲ ! ಶೇರಿಂಗ್ ಈಸ್ ಕೇರಿಂಗ್ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಉಪಾಹಾರ ಸೇವಿಸುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಭಿನ್ನ-ವಿಭಿನ್ನವಾಗಿ ಕಮೆಂಟ್ ಮಾಡುತ್ತ, ಪ್ರಧಾನಿ ಇಮ್ರಾನ್ ಖಾನ್ರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಮ್ರಾನ್ ಖಾನ್ ಯಾರೊಂದಿಗೋ ಮಾತನಾಡುತ್ತ, ಆಹಾರ ಸೇವಿಸುತ್ತಿರುವುದನ್ನು ನೀವು ಫೋಟೋದಲ್ಲಿ ನೋಡಬಹುದು. ಈಗ ಇದೇ ಫೋಟೋದೊಂದಿಗೆ, ಹಲವು ವರ್ಷಗಳ ಹಿಂದಿನ ಅವರ ಫೋಟೋವೊಂದನ್ನು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ಆ ಹಳೇ ಫೋಟೋದಲ್ಲೂ ಸಹ ಇಮ್ರಾನ್ ಖಾನ್ ಜರ್ನಲಿಸ್ಟ್ ಒಬ್ಬರೊಂದಿಗೆ ಮಾತನಾಡುತ್ತಲೇ ಬ್ರೇಕ್ಫಾಸ್ಟ್ ಮಾಡುತ್ತಿದ್ದಾರೆ.
ಆದರೆ ಇದೀಗ ವೈರಲ್ ಆದ ಫೋಟೋ ನೋಡಿದ ನೆಟ್ಟಿಗರು ಇಮ್ರಾನ್ ಖಾನ್ ಅವರದ್ದು ಬ್ಯಾಡ್ ಹ್ಯಾಬಿಟ್ ಎಂದಿದ್ದಾರೆ. ಇಮ್ರಾನ್ ಖಾನ್ ಆಹಾರ ಸೇವನೆ ಮಾಡುವ ಹೀಗೆ ಇನ್ನೊಬ್ಬರೊಂದಿಗೆ ಮಾತನಾಡುವುದು ಹಳೇ ಹಾಗೂ ಈಗಿನ ಫೋಟೋಗಳೆರಡರಲ್ಲೂ ಕಾಣುತ್ತಿದೆ. ಇದು ಒಳ್ಳೆಯ ಅಭ್ಯಾಸ ಅಲ್ಲ ಎಂದೇ ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಇಮ್ರಾನ್ ಖಾನ್ರನ್ನು ಟ್ರೋಲ್ ಮಾಡಿದ್ದು ಪಾಕಿಸ್ತಾನದ ಟ್ವಿಟರ್ ಬಳಕೆದಾರರೇ ಆಗಿದ್ದಾರೆ. ಇನ್ನು ವೈರಲ್ ಆದ ಎರಡೂ ಫೋಟೋಗಳಲ್ಲೂ ಇಮ್ರಾನ್ ಖಾನ್ ಮೊಟ್ಟೆ, ಮಾವಿನಹಣ್ಣು ಮತ್ತು ಮೊಸರಿನ ಪಾತ್ರೆಗಳನ್ನು ಮುಂದಿಟ್ಟುಕೊಂಡಿರುವುದು ಕಾಣುತ್ತದೆ. ಈ ವಿಚಾರದಲ್ಲೂ ನೆಟ್ಟಿಗರು ಟೀಕಿಸಿದ್ದಾರೆ. ಇದ್ಯಾವ ವಿಧದ ಬ್ರೇಕ್ಫಾಸ್ಟ್. ಮೊಟ್ಟೆ, ಮೊಸರು.. ಮಾವಿನಹಣ್ಣನ್ನು ಒಟ್ಟಿಗೆ ತಿನ್ನುವ ಹವ್ಯಾಸ ಇವರಿಗೆ ಹೇಗೆ ಬೆಳೆದುಬಂತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರಂತೂ ನಿಮ್ಮ ಡಯಟ್ ವಿಧಾನ ಯಾವುದು ಎಂದು ಕೇಳಿದ್ದಾರೆ. ಇನ್ನೊಂದಿಷ್ಟು ಮಂದಿ, ಹಾಗೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತೀರಲ್ಲ, ಅವರ ಬಳಿ ಮಾತನಾಡುವುದು ಬಿಟ್ಟು, ತಿನ್ನಲು ಕೊಡಬಹುದಲ್ಲ ! ಶೇರಿಂಗ್ ಈಸ್ ಕೇರಿಂಗ್ ಎಂದು ವ್ಯಂಗ್ಯವಾಡಿದ್ದಾರೆ.
Imran Khan has this inexplicable habit of eating a strange combination of mango slices, yogurt and eggs for breakfast while somebody else watches him eat. pic.twitter.com/0RWudQYbHM
— Irti Kazr (@IrtiKazr) March 18, 2021
Imran Khan has this inexplicable habit of eating a strange combination of mango slices, yogurt and eggs for breakfast while somebody else watches him eat. pic.twitter.com/0RWudQYbHM
— Irti Kazr (@IrtiKazr) March 18, 2021
teeno tasweeron main akela kha raha hai ?? https://t.co/MJqlQdzkUj
— Umair (@alpaseeno) March 18, 2021
I’ve seen over 100 Aik Din Geo Kay Saath shows but @ImranKhanPTI was the only host who didn’t serve food to @suhailswarraich and chose to eat alone. Is it frugality or a lack of hospitality? #AikDinGeoKaySaath pic.twitter.com/IKl01PHB35
— Hamza Azhar Salam (@HamzaAzhrSalam) March 17, 2021
Published On - 6:36 pm, Sun, 21 March 21