ಮಂಗಳನ ಮೇಲೆ ಚೀನಾ ದೇವತೆಯ ಹೆಸರಲ್ಲಿ ನಗರ ನಿರ್ಮಾಣ; ಭೂಮಿ ಮೇಲಿನ ಸಿಟಿಯಂತೆ ಇರಲಿದೆ ಅಲ್ಲಿನ ಪಟ್ಟಣ, ಎಬಿಬೂ ಸಂಸ್ಥೆಯಿಂದ ವಿನ್ಯಾಸ ಬಿಡುಗಡೆ

ಸುಮಾರು 2,50,000 ಜನರು ವಾಸಿಸಲು ಯೋಗ್ಯವಾಗುವಂತೆ ನುವಾ ನಗರವನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಪ್ರಧಾನ ಸಿಟಿಯಾಗಲಿದ್ದು, ಇದರೊಳಗೆ ಮತ್ತೆ 5 ಸಣ್ಣಸಣ್ಣ ನಗರಗಳ ನಿರ್ಮಾಣ ಮಾಡುವಂತೆ ಯೋಜನೆ ರೂಪಿಸಲಾಗಿದೆ.

ಮಂಗಳನ ಮೇಲೆ ಚೀನಾ ದೇವತೆಯ ಹೆಸರಲ್ಲಿ ನಗರ ನಿರ್ಮಾಣ; ಭೂಮಿ ಮೇಲಿನ ಸಿಟಿಯಂತೆ ಇರಲಿದೆ ಅಲ್ಲಿನ ಪಟ್ಟಣ, ಎಬಿಬೂ ಸಂಸ್ಥೆಯಿಂದ ವಿನ್ಯಾಸ ಬಿಡುಗಡೆ
ಮಂಗಳ ಗ್ರಹದ ನೋಟ
Follow us
|

Updated on: Mar 22, 2021 | 12:17 PM

ಮಂಗಳ ಗ್ರಹದ ಮೇಲೆ ಮನುಷ್ಯರ ಸಂಶೋಧನೆ ನಿರಂತರವಾಗಿ ನಡೆದುಕೊಂಡೇ ಬಂದಿದೆ. 2013ರ ನವೆಂಬರ್​ನಲ್ಲಿ ಇಸ್ರೋ ಕೂಡ ಮಂಗಳ ಗ್ರಹದ ಅನ್ವೇಷಣೆಗಾಗಿ ಮಾರ್ಸ್ ಆರ್ಬಿಟರ್ ಮಿಷನ್ ಹೆಸರಿನಲ್ಲಿ ಮಂಗಳಯಾನವನ್ನು ನಡೆಸಿದೆ. ಇನ್ನು ಮಂಗಳನ ಮೇಲೆ ನೀರು, ಮಣ್ಣುಗಳು ಇವೆ ಎಂಬುದನ್ನು 2015ರಲ್ಲೇ ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ಘೋಷಣೆ ಮಾಡಿದೆ. ಆ ಗ್ರಹದಲ್ಲಿ ಜೀವಿಗಳು ಯೋಸಿಸಲು ಯೋಗ್ಯವಾಗ ವಾತಾವರಣ ಇದೆ ಎಂಬ ಒಂದು ಚಿಂತನೆ 2018ರಿಂದಲೇ ಶುರುವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆಯುತ್ತಲೂ ಇವೆ.

ಇದೀಗ ಜಾಗತಿಕ ಮಟ್ಟದ, ಖ್ಯಾತ ವಾಸ್ತುವಿನ್ಯಾಸ ಸಂಸ್ಥೆಯಾದ ABIBOO ಸ್ಟುಡಿಯೋ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಂಪು ಗ್ರಹ (ಮಂಗಳ)ದ ಮೇಲೆ ಒಂದು ಸುಸ್ಥಿರ ನಗರ ನಿರ್ಮಾಣ ಮಾಡುವ ಯೋಜನೆಯನ್ನು ಈಗಾಗಲೇ ರೂಪಿಸುತ್ತಿದೆ. ABIBOO ಸ್ಟುಡಿಯೋ ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿದ್ದು, ಅಮೆರಿಕದಲ್ಲೇ ಎರಡು ಕಚೇರಿಗಳು ಇವೆ. ಈ ಸ್ಟುಡಿಯೋವೀಗ ಮಂಗಳನ ಮೇಲಿರುವ Tempe Mensaದಲ್ಲಿ ನಿರ್ಮಾಣ ಮಾಡಲಿರುವ ನುವಾ ಎಂಬ ಹೆಸರಿನ ನಗರದ ವಿನ್ಯಾಸದ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಸುಮಾರು 2,50,000 ಜನರು ವಾಸಿಸಲು ಯೋಗ್ಯವಾಗುವಂತೆ ನುವಾ ನಗರವನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಪ್ರಧಾನ ಸಿಟಿಯಾಗಲಿದ್ದು, ಇದರೊಳಗೆ ಮತ್ತೆ 5 ಸಣ್ಣಸಣ್ಣ ನಗರಗಳ ನಿರ್ಮಾಣ ಮಾಡುವಂತೆ ಯೋಜನೆ ರೂಪಿಸಲಾಗಿದೆ. ಇನ್ನು ಮಂಗಳದಲ್ಲಿ ನುವಾ ನಗರ ನಿರ್ಮಿಸಲ್ಪಟ್ಟರೆ ಅದು ಕೆಂಪು ಗ್ರಹದ ಮೊದಲ ಸಿಟಿಯಾಗಲಿದೆ. ವಿಶೇಷವೆಂದರೆ ಇದನ್ನು Tempe Mensaದ ಬಂಡೆಗಳ ಪ್ರದೇಶದಲ್ಲಿ ಸಮಾನಾಂತರ ವಿನ್ಯಾಸದ ಬದಲು, ಲಂಬವಾಗಿ ಕಟ್ಟಲಾಗುತ್ತಿದೆ. ಸಿಟಿಯನ್ನು ಲಂಬ ವಿನ್ಯಾಸದಲ್ಲಿ ಕಟ್ಟಲು ಮುಖ್ಯವಾದ ಕಾರಣ ಇದೆ. ಹೀಗೆ ಮಾಡುವುದರಿಂದ ವಾತಾವರಣದ ಒತ್ತಡ ಮತ್ತು ವಿಕಿರಣದ ಅಪಾಯವಿರುವುದಿಲ್ಲ. ಸಮಾನಾಂತರ ವಿನ್ಯಾಸದಲ್ಲಿ ಕಟ್ಟಿದರೆ ಅಲ್ಲಿ ಯಾವುದೇ ನೆರಳೂ ಇರುವುದಿಲ್ಲ. ಹೀಗಾದರೆ ಅಲ್ಲಿ ವಾಸ ಮಾಡುವ ಜನರು ವಿಕಿರಣದಿಂದ ಸಾಯಲೂ ಬಹುದು. ಈ ಅಪಾಯ ನಿವಾರಿಸಲು ಲಂಬವಾಗಿ ನಿರ್ಮಾಣವಾಗುತ್ತಿದೆ.

Mars

ಹೇಗಿರಲಿದೆ ನಗರ? ಮಂಗಳನ ಮೇಲೆ ನಿರ್ಮಾಣವಾಗಲಿರುವ ನಗರ ಭೂಮಿಯ ಮೇಲಿನ ಪಟ್ಟಣಗಳಂತೆ ಇರಲಿದೆ ಎಂದು ವಿನ್ಯಾಸ ಸಂಸ್ಥೆ ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಭೂಮಿಯ ಮೇಲಿನ ನಗರಗಳಂತೆ ಹಸಿರು ಉದ್ಯಾನಗಳು, ಮನೆಗಳು, ಕಚೇರಿಗಳು ಇರಲಿವೆ. ಮನುಷ್ಯ ವಾಸಕ್ಕೆ ಯೋಗ್ಯವಾಗಿಯೇ ಇರಲಿದೆ. ಮಂಗಳನ ಮೇಲೆ ನಗರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನಾವು ಅನೇಕ ಗಣಕೀಕೃತ ವಿಶ್ಲೇಷಣೆ ಮಾಡಿದ್ದೇವೆ. ಹಾಗೇ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ ಯಾವ ರೀತಿಯ ಸಂದರ್ಭ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ಹಲವು ವಿಜ್ಞಾನಿಗಳೊಂದಿಗೆ ಚರ್ಚಿಸಿದ್ದೇವೆ ಎಂದು ABIBOO ಸಂಸ್ಥಾಪಕ ಆಲ್ಫ್ರೆಡೋ ಮುನೊಜ್ ಯುರೋನ್ಯೂಸ್​ಗೆ ತಿಳಿಸಿದ್ದಾರೆ.

ಸದ್ಯಕ್ಕೇನೂ ನಿರ್ಮಾಣ ಶುರುವಾಗೋದಿಲ್ಲ ಮಂಗಳನ ಮೇಲೆ ನಗರ ನಿರ್ಮಾಣವಾದರೆ ನಾವೂ ಅಲ್ಲಿಗೆ ಹೋಗಿ ನೆಲೆಸಬಹುದು ಎಂದು ಕನಸು ಕಾಣುತ್ತಿದ್ದರೆ, ಸದ್ಯಕ್ಕೆ ಅಷ್ಟೊಂದೇನೂ ಆಸೆ ಬೇಡ. ಯಾಕೆಂದರೆ ಈ ನುವಾ ನಗರ ನಿರ್ಮಾಣವಾಲು ಪ್ರಾರಂಭವಾಗುವುದೇ 2054ನೇ ಇಸ್ವಿಯ ನಂತರ. 2100ನೇ ಇಸ್ವಿಯ ಒಳಗೆ ಪಟ್ಟಣ ನಿರ್ಮಾಣ ಸಾಧ್ಯವಿಲ್ಲ. ಅದರ ನಂತರವಷ್ಟೇ ಅಲ್ಲಿ ಹೋಗಿ ನೆಲೆಸಬಹುದಾಗಿದೆ.

ನಗರ ವಿನ್ಯಾಸದ ಫೋಟೋಗಳು

Mars

ವಿನ್ಯಾಸದ ಫೋಟೋ

ಚೀನಾ ದೇವತೆಯ ಹೆಸರು ನುವಾ ಎಂಬುದು ಚೀನಾದ ದೇವತೆಯ ಹೆಸರು. ಅಲ್ಲಿನ ಪುರಾಣ ಪ್ರಕಾರ ಈ ದೇವತೆ ಸಕಲರನ್ನೂ ರಕ್ಷಣೆ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಮಂಗಳನ ಮೇಲೆ ನಿರ್ಮಾಣ ಮಾಡುತ್ತಿರುವ ನಗರಕ್ಕೂ ABIBOO ಇದೇ ಹೆಸರನ್ನು ಇಡಲು ನಿರ್ಧಾರ ಮಾಡಿದೆ.

Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ