ನಾನು ರಾಜೀನಾಮೆ ನೀಡುತ್ತೇನೆ, ಒಂದು ನಿಮಿಷವೂ ಪ್ರಧಾನಿಯಾಗಿರುವುದಿಲ್ಲ, ಆದರೆ..: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

| Updated By: ನಯನಾ ರಾಜೀವ್

Updated on: Nov 06, 2022 | 11:16 AM

‘‘ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ನಡೆದ ಹಲ್ಲೆಯ ಹಿಂದೆ ನನ್ನ ಕೈವಾಡವಿದೆ ಎಂದು ಸಾಬೀತಾದರೆ ನಾನು ಕೂಡಲೇ ರಾಜೀನಾಮೆ ನೀಡುತ್ತೇನೆ, ಒಂದು ಕ್ಷಣವೂ ಪ್ರಧಾನಿಯಾಗಿರುವುದಿಲ್ಲ’’ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ.

ನಾನು ರಾಜೀನಾಮೆ ನೀಡುತ್ತೇನೆ, ಒಂದು ನಿಮಿಷವೂ ಪ್ರಧಾನಿಯಾಗಿರುವುದಿಲ್ಲ, ಆದರೆ..: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Shehbaz Sharif
Follow us on

‘‘ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ನಡೆದ ಹಲ್ಲೆಯ ಹಿಂದೆ ನನ್ನ ಕೈವಾಡವಿದೆ ಎಂದು ಸಾಬೀತಾದರೆ ನಾನು ಕೂಡಲೇ ರಾಜೀನಾಮೆ ನೀಡುತ್ತೇನೆ, ಒಂದು ಕ್ಷಣವೂ ಪ್ರಧಾನಿಯಾಗಿರುವುದಿಲ್ಲ’’ ಎಂದು ಪಾಕಿಸ್ತಾನದ ಪ್ರಧಾನಿ ಶೇಹಬಾಜ್ ಷರೀಫ್ ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಪಾಕ್ ಪಾಜಿ ಪ್ರಧಾನಿ ಇಮ್ರಾನ್ ಖಾನ್​ ಮೇಲೆ ಗುಂಡಿನ ದಾಳಿಯಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದರು, ಹಲ್ಲೆಯ ಹಿಂದೆ ಈಗಿನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.

ಈ ಕುರಿತು ಇದೀಗ ಪ್ರಧಾನಿ ಶೆಹಬಾಜ್ ಮೌನ ಮುರಿದಿದ್ದಾರೆ, ‘‘ಒಂದೊಮ್ಮೆ ಹಲ್ಲೆಯ ಹಿಂದೆ ನನ್ನ ಕೈವಾಡವಿದೆ ಎಂಬುದು ಸಾಬೀತಾದರೆ ಕೂಡಲೇ ರಾಜೀನಾಮೆ ನೀಡುತ್ತೇನೆ’’ ಎಂದು ಹೇಳಿದ್ದಾರೆ.

ಖಾನ್ ಮೇಲಿನ ದಾಳಿಗೆ ಸಂಬಂಧಿಸಿದ ಯಾವುದೇ ಸಂಚಿನಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಾನು ಒಂದು ನಿಮಿಷವೂ ಪ್ರಧಾನಿಯಾಗಿ ಉಳಿಯುವುದಿಲ್ಲ ಎಂದು ಶಹಬಾಜ್ ಹೇಳಿದ್ದಾರೆ. 70ರ ಹರೆಯದ ಇಮ್ರಾನ್ ಖಾನ್ ಅವರು ಗುರುವಾರ ಪಂಜಾಬ್ ಪ್ರಾಂತ್ಯದ ವಜೀರಾಬಾದ್ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದ ಕಂಟೈನರ್ ಮೌಂಟೆಡ್ ಟ್ರಕ್ ಮೇಲೆ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಅವರ ಬಲಗಾಲಿಗೆ ಗುಂಡು ತಗುಲಿತ್ತು.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರು ಗಾಯಗೊಂಡಿದ್ದಾರೆ.
ಈ ಸಂಚಿನಲ್ಲಿ ನಾನು ಅಥವಾ ಆಂತರಿಕ ಸಚಿವರು ಅಥವಾ ಸೇನಾಧಿಕಾರಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಖಾನ್ ಪುರಾವೆ ನೀಡಿದರೆ, ನಾನು ಒಂದು ನಿಮಿಷವೂ ಪ್ರಧಾನಿಯಾಗುವುದಿಲ್ಲ, ನಾನು ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದರು.

ಖಾನ್​ ತಲೆಯಿಂದ ಪಾದದವರೆಗೂ ಸುಳ್ಳನ್ನೇ ಹೊದ್ದುಕೊಂಡಿದ್ದಾರೆ, ಪಾಕಿಸ್ತಾನವನ್ನು ನಾಶಮಾಡಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶೆಹಬಾಜ್ ಹೇಳಿದರು.

ನೀವು ಸುಳ್ಳಿನ ಮೂಲಕ ರಾಷ್ಟ್ರವನ್ನು ವಿನಾಶದತ್ತ ತಳ್ಳುತ್ತಿದ್ದೀರಿ. ಈ ವಿನಾಶದಿಂದ ರಾಷ್ಟ್ರವನ್ನು ರಕ್ಷಿಸುವ ಜವಾಬ್ದಾರಿ ನನ್ನದ ಎಂದು ಶೆಹಬಾಜ್ ಹೇಳಿದರು.

ದಾಳಿಯ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾದ ಬಗ್ಗೆ, ಶೆಹಬಾಜ್ ಪಂಜಾಬ್ ಪ್ರಾಂತ್ಯದಲ್ಲಿ ಖಾನ್ ಪಕ್ಷದ ಪಿಟಿಐ ಅಧಿಕಾರದಲ್ಲಿದೆ ಮತ್ತು ಹತ್ಯೆಯ ಯತ್ನದ ಪ್ರಥಮ ಮಾಹಿತಿ ವರದಿಯನ್ನು ಇಲ್ಲಿಯವರೆಗೆ ಏಕೆ ದಾಖಲಿಸಿಲ್ಲ ಎಂಬುದನ್ನು ಪ್ರಾಂತೀಯ ಸರ್ಕಾರ ತಿಳಿಸಬೇಕು ಎಂದು ಹೇಳಿದರು.

ಸಂಸ್ಥೆ ಮತ್ತು ವಿಶೇಷವಾಗಿ ಹಿರಿಯ ಸೇನಾಧಿಕಾರಿಯ ವಿರುದ್ಧ ಖಾನ್ ಅವರು ಆಧಾರರಹಿತ ಮತ್ತು ಬೇಜವಾಬ್ದಾರಿ ಆರೋಪಗಳು ಸ್ವೀಕಾರಾರ್ಹವಲ್ಲ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ