Imran Khan: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆ ಮೇಲೆ ಇಮ್ರಾನ್ ಖಾನ್ ಬೆಂಬಲಿಗರಿಂದ ದಾಳಿ

|

Updated on: May 11, 2023 | 8:41 AM

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಬಂಧನದ ಬಳಿಕ, ಬೆಂಬಲಿಗರು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆ ಮೇಲೆ ಇಮ್ರಾನ್ ಖಾನ್ ಬೆಂಬಲಿಗರು ದಾಳಿ ನಡೆಸಿದ್ದಾರೆ.

Imran Khan: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆ ಮೇಲೆ ಇಮ್ರಾನ್ ಖಾನ್ ಬೆಂಬಲಿಗರಿಂದ ದಾಳಿ
ಪಾಕಿಸ್ತಾನದಲ್ಲಿ ಪ್ರತಿಭಟನೆ
Follow us on

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಬಂಧನದ ಬಳಿಕ, ಬೆಂಬಲಿಗರು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆ ಮೇಲೆ ಇಮ್ರಾನ್ ಖಾನ್ ಬೆಂಬಲಿಗರು ದಾಳಿ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ 500 ಕ್ಕೂ ಹೆಚ್ಚು ಕಾರ್ಯಕರ್ತರು ಮಾಡೆಲ್ ಟೌನ್ ಲಾಹೋರ್‌ನಲ್ಲಿರುವ ಪ್ರಧಾನಿ ನಿವಾಸವನ್ನು ತಲುಪಿ ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರಧಾನಿ ಮನೆಯ ಮೇಲೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ದುಷ್ಕರ್ಮಿಗಳು ದಾಳಿ ನಡೆಸಿದಾಗ ಪ್ರಧಾನಿ ನಿವಾಸದಲ್ಲಿ ವಾಚ್‌ಮನ್ ಮಾತ್ರ ಇದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲಿದ್ದ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿದೆ.

ಪ್ರಧಾನಿ ನಿವಾಸವನ್ನು ತಲುಪುವ ಮೊದಲು, ಖಾನ್ ಬೆಂಬಲಿಗರ ಗುಂಪೊಂದು ಮಾಡೆಲ್ ಟೌನ್‌ನಲ್ಲಿರುವ ಆಡಳಿತಾರೂಢ ಪಿಎಂಎಲ್-ಎನ್ ಸೆಕ್ರೆಟರಿಯೇಟ್ ಮೇಲೆ ದಾಳಿ ಮಾಡಿ, ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿತು. ಅಲ್ಲಿದ್ದ ಬ್ಲಾಕರ್ ಗಳಿಗೂ ಬೆಂಕಿ ಹಚ್ಚಿದ್ದರು.

ಪಾಕಿಸ್ತಾನದ (Pakistan) ಭ್ರಷ್ಟಾಚಾರ ವಿರೋಧಿ ಸಂಸ್ಥೆ (Anti-corruption agency)ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ಅವರನ್ನು ಬಂಧಿಸಿದ್ದು, ಖಾನ್ ಅವರ ಪಕ್ಷ ಪಿಟಿಐ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ಮತ್ತಷ್ಟು ಓದಿ: ಇಮ್ರಾನ್ ಖಾನ್ ಬಂಧನ ಖಂಡಿಸಿ ಬೆಂಬಲಿಗರಿಂದ ಪ್ರತಿಭಟನೆ; ರಾವಲ್ಪಿಂಡಿಯಲ್ಲಿ ಪಾಕ್ ಸೇನಾ ಕಚೇರಿ ಮೇಲೆ ದಾಳಿ, ಉದ್ವಿಗ್ನ ವಾತಾವರಣ

ಇಸ್ಲಾಮಾಬಾದ್‌ನ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಆವರಣದಲ್ಲಿ ಖಾನ್‌ರನ್ನು ಬಂಧಿಸಿರುವುದನ್ನು ವಿವರಿಸಲು ಅಧಿಕಾರಿಗಳಿಗೆ ಸಮನ್ಸ್ ನೀಡಿದೆ. ಬಂಧನದ ನಂತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆದಿದೆ. ನೂರಾರು ಬೆಂಬಲಿಗರು ಖಾನ್ ಅವರ ತವರು ಪಟ್ಟಣವಾದ ಲಾಹೋರ್‌ನಲ್ಲಿ ಬೀದಿಗಳನ್ನು ತಡೆದರು. ಅಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಖಾನ್ ಅವರನ್ನು ಬುಧವಾರ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಜಿಯೋ ಟಿವಿ ತಿಳಿಸಿದೆ. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಪಾಕಿಸ್ತಾನದಲ್ಲಿ ಬಂದ್ ಆಚರಣೆಗೆ ಕರೆ ನೀಡಿದೆ.ಪಾಕಿಸ್ತಾನದ ಜನರೇ, ನಿಮ್ಮ ಸಮಯ. ಖಾನ್ ಯಾವಾಗಲೂ ನಿಮ್ಮ ಪರವಾಗಿ ನಿಂತಿದ್ದಾರೆ, ಈಗ ಅವರ ಪರವಾಗಿ ನಿಲ್ಲುವ ಸಮಯ ಎಂದು ಪಿಟಿಐ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:41 am, Thu, 11 May 23