ಇಮ್ರಾನ್ ಖಾನ್ ಬಂಧನ ಖಂಡಿಸಿ ಬೆಂಬಲಿಗರಿಂದ ಪ್ರತಿಭಟನೆ; ರಾವಲ್ಪಿಂಡಿಯಲ್ಲಿ ಪಾಕ್ ಸೇನಾ ಕಚೇರಿ ಮೇಲೆ ದಾಳಿ, ಉದ್ವಿಗ್ನ ವಾತಾವರಣ
Imran Khan Arrest:ಪಿಟಿಐ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಪಾಕ್ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿದ್ದು ಸರ್ಗೋಧಾದಲ್ಲಿ ವಾಯುಪಡೆಯ ಸ್ಮಾರಕವನ್ನು ಧ್ವಂಸಗೊಳಿಸಿದ್ದಾರೆ
ಪಾಕಿಸ್ತಾನದ (Pakistan) ಭ್ರಷ್ಟಾಚಾರ ವಿರೋಧಿ ಸಂಸ್ಥೆ (Anti-corruption agency)ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ಅವರನ್ನು ಬಂಧಿಸಿದ್ದು, ಖಾನ್ ಅವರ ಪಕ್ಷ ಪಿಟಿಐ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಇಸ್ಲಾಮಾಬಾದ್‌ನ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಆವರಣದಲ್ಲಿ ಖಾನ್‌ರನ್ನು ಬಂಧಿಸಿರುವುದನ್ನು ವಿವರಿಸಲು ಅಧಿಕಾರಿಗಳಿಗೆ ಸಮನ್ಸ್ ನೀಡಿದೆ. ಬಂಧನದ ನಂತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆದಿದೆ. ನೂರಾರು ಬೆಂಬಲಿಗರು ಖಾನ್ ಅವರ ತವರು ಪಟ್ಟಣವಾದ ಲಾಹೋರ್‌ನಲ್ಲಿ ಬೀದಿಗಳನ್ನು ತಡೆದರು. ಅಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ರಾಯಿಟರ್ಸ್ ವರದಿ ಪ್ರಕಾರ, ಬಂದರು ನಗರವಾದ ಕರಾಚಿಯಲ್ಲಿ ಪ್ರತಿಭಟನಾಕಾರರು ಪ್ರಮುಖ ರಸ್ತೆಯನ್ನು ತಡೆದಿದ್ದಾರೆ. ಪಿಟಿಐ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಪಾಕ್ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿದ್ದು ಸರ್ಗೋಧಾದಲ್ಲಿ ವಾಯುಪಡೆಯ ಸ್ಮಾರಕವನ್ನು ಧ್ವಂಸಗೊಳಿಸಿದ್ದಾರೆ
ಪಾಕಿಸ್ತಾನದಲ್ಲಿ ಬಂದ್ಗೆ ಕರೆ
ಖಾನ್ ಅವರನ್ನು ಬುಧವಾರ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಜಿಯೋ ಟಿವಿ ತಿಳಿಸಿದೆ. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಪಾಕಿಸ್ತಾನದಲ್ಲಿ ಬಂದ್ ಆಚರಣೆಗೆ ಕರೆ ನೀಡಿದೆ.ಪಾಕಿಸ್ತಾನದ ಜನರೇ, ನಿಮ್ಮ ಸಮಯ. ಖಾನ್ ಯಾವಾಗಲೂ ನಿಮ್ಮ ಪರವಾಗಿ ನಿಂತಿದ್ದಾರೆ, ಈಗ ಅವರ ಪರವಾಗಿ ನಿಲ್ಲುವ ಸಮಯ ಎಂದು ಪಿಟಿಐ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
Pakistan, its your time now. It’s now or never opportunity. #ReleaseImranKhan pic.twitter.com/OIm4aUFiT5
— PTI (@PTIofficial) May 9, 2023
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸಾಮಾಜಿಕ ಮಾಧ್ಯಮ ಸದಸ್ಯರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನವನ್ನು ವಿರೋಧಿಸಿ ಕಾರ್ಪ್ಸ್ ಕಮಾಂಡರ್ ಲಾಹೋರ್ ಹೌಸ್‌ಗೆ ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
عوام کی بڑی تعداد مسلسل کور کمانڈر لاہور ہاؤس کی جانب گامزن۔ pic.twitter.com/BFGgWTTrBe
— Musa Virk (@MusaNV18) May 9, 2023
ಶಾಂತಿಯುತ ಪ್ರತಿಭಟನೆಗೆ ಕರೆ
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ ಅವರು ಇಮ್ರಾನ್ ಖಾನ್ ಬಂಧನದ ವಿರುದ್ಧ ಶಾಂತಿಯುತ ಪ್ರತಿಭಟನೆಗಾಗಿ ಪಿಟಿಐ ಕರೆಯನ್ನು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: Imran Khan: ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್ ಬಂಧನ; ಯಾವುದಿದು ಅಲ್ ಖಾದೀರ್ ಟ್ರಸ್ಟ್ ಪ್ರಕರಣ?
ಅದೇ ವೇಳೆ ಮಾಜಿ ಪ್ರಧಾನಿ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಇಸ್ಲಾಮಾಬಾದ್‌ನ ಪಾಲಿ ಕ್ಲಿನಿಕ್‌ನಲ್ಲಿ ಏಳು ಸದಸ್ಯರ ವೈದ್ಯಕೀಯ ಮಂಡಳಿಗೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನದ ARY ನ್ಯೂಸ್ ವರದಿ ಮಾಡಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ