ಪಾಕಿಸ್ತಾನಿಗಳು ಭಾರತೀಯ ಸೈನಿಕರಿಗೆ ಎಷ್ಟು ಚಹಾ ಬೇಕಾದರೂ ಕುಡಿಸಬಲ್ಲರು: ಭಾರತದ ಬಗ್ಗೆ ಕಿಡಿಕಾರಿದ ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ

|

Updated on: May 24, 2023 | 3:22 PM

ಭಾರತವು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದ ಬಿಲಾವಲ್ ಇದು ಕಾಶ್ಮೀರದ ನಿವಾಸಿಗಳ ಹಕ್ಕುಗಳನ್ನು ನಿರಾಕರಿಸುತ್ತಿದೆ. ಭದ್ರತಾ ಮಂಡಳಿಯ ನಿಯಮಗಳ ಅಡಿಯಲ್ಲಿ ಭಾರತವು ಏಳು ದಶಕಗಳ ಹಿಂದಿನ ಭರವಸೆಯನ್ನು ಮುರಿದು ಜನಾಭಿಪ್ರಾಯವನ್ನು ನಡೆಸಬೇಕಾಗುತ್ತದೆ.

ಪಾಕಿಸ್ತಾನಿಗಳು ಭಾರತೀಯ ಸೈನಿಕರಿಗೆ ಎಷ್ಟು ಚಹಾ ಬೇಕಾದರೂ ಕುಡಿಸಬಲ್ಲರು: ಭಾರತದ ಬಗ್ಗೆ ಕಿಡಿಕಾರಿದ ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ
ಬಿಲಾವಲ್ ಭುಟ್ಟೋ ಜರ್ದಾರಿ
Follow us on

ಭಾರತವು ಜಮ್ಮು ಮತ್ತು ಕಾಶ್ಮೀರ ರಾಜಧಾನಿಯಲ್ಲಿ ಜಿ20 (G20 )ಸಭೆ ನಡೆಸುತ್ತಿರುವುದನ್ನು ವಿರೋಧಿಸಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (POK) ಭೇಟಿ ನೀಡಿದ್ದರು. ಅಲ್ಲಿ ಅವರು ಪ್ರಾಂತೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಪ್ರಾಂತೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್, ಪಿಒಕೆಗೆ ಭೇಟಿ ನೀಡಿದ ಪಾಕಿಸ್ತಾನದ ಮೊದಲ ವಿದೇಶಾಂಗ ಸಚಿವರಾಗಿದ್ದಾರೆ ಎಂದು ಹೇಳಿದರು. ಪಿಒಕೆ ಪ್ರಾಂತ್ಯದ ಸಚಿವರು ಸಭೆಗೆ ಬಂದಿರುವ ಗಂಭೀರತೆಯೇ ಪಾಕಿಸ್ತಾನ ಈ ವಿಷಯದಲ್ಲಿ ಎಷ್ಟು ಗಂಭೀರವಾಗಿದೆ ಎಂಬುದನ್ನು ವಿವರಿಸುತ್ತದೆ ಎಂದಿದ್ದಾರೆ ಬಿಲಾವಲ್. ಜಮ್ಮು ಮತ್ತು ಕಾಶ್ಮೀರವನ್ನು ‘ವಿವಾದಾತ್ಮಕ ಅಜೆಂಡಾ’ಎಂದು ಹೇಳಿದ ಬಿಲಾವಲ್, ಇದು ವಿಭಜನೆಯ ಕಾಲದಿಂದಲೂ ಅಪೂರ್ಣವಾಗಿರುವ ಕಾರ್ಯಸೂಚಿಯಾಗಿದೆ. ನಾವು ಸಾಕಷ್ಟು ಹೋರಾಟದ ನಂತರ ಪಿಒಕೆಯನ್ನು ಪಡೆದಿದ್ದೇವೆ. ಇತಿಹಾಸವನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ.

ಇಂದು ಭಾರತವು ಜಮ್ಮು ಮತ್ತು ಕಾಶ್ಮೀರವು ಅವಿಭಾಜ್ಯ ಅಂಗವಾಗಿದೆ ಮತ್ತು ಅದರ ಮಿತಿಯೊಳಗೆ ಬರುತ್ತದೆ ಎಂದು ಜಗತ್ತಿಗೆ ಭರವಸೆ ನೀಡಲು ಪ್ರಯತ್ನಿಸುತ್ತಿದೆ. ಆದರೆ ಭಾರತವು ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್‌ಎಸ್‌ಸಿ) ಹೇಗೆ ಕರೆದೊಯ್ದಿತ್ತು ಎಂಬುದು ಇತಿಹಾಸ ಹೇಳುತ್ತದೆ. ಅಲ್ಲಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಗುರುತಿಸಲಾಯಿತು. ವಿಶ್ವಸಂಸ್ಥೆ ಇಲ್ಲಿ ಜನಾಭಿಪ್ರಾಯ ಸಂಗ್ರಹದ ಬಗ್ಗೆ ಮಾತನಾಡಿದೆ. ಆದರೆ ಭಾರತ ಇಂದಿಗೂ ತನ್ನ ಪ್ರಜೆಗಳಿಗೆ ಈ ಹಕ್ಕನ್ನು ನೀಡಿಲ್ಲ.

ಭಾರತವು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದ ಬಿಲಾವಲ್ ಇದು ಕಾಶ್ಮೀರದ ನಿವಾಸಿಗಳ ಹಕ್ಕುಗಳನ್ನು ನಿರಾಕರಿಸುತ್ತಿದೆ. ಭದ್ರತಾ ಮಂಡಳಿಯ ನಿಯಮಗಳ ಅಡಿಯಲ್ಲಿ ಭಾರತವು ಏಳು ದಶಕಗಳ ಹಿಂದಿನ ಭರವಸೆಯನ್ನು ಮುರಿದು ಜನಾಭಿಪ್ರಾಯವನ್ನು ನಡೆಸಬೇಕಾಗುತ್ತದೆ. ಜನಾಭಿಪ್ರಾಯ ಸಂಗ್ರಹಿಸದಿರುವುದು ಕಾನೂನುಬಾಹಿರ. ಇಂದು ಭಾರತವು ಕಾಶ್ಮೀರವನ್ನು ತೆರೆದ ಸೆರೆಮನೆಯಾಗಿ ಪರಿವರ್ತಿಸಿದೆ, ಅಲ್ಲಿ ಕಾಶ್ಮೀರಿಗಳು ಭಯದ ನೆರಳಿನಲ್ಲಿ ಉಸಿರಾಡುವಂತೆ ಒತ್ತಾಯಿಸಲಾಗಿದೆ. ಅಲ್ಲಿ ಸಾವಿರಾರು ಕಾಶ್ಮೀರಿಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು ಅನೇಕರು ಕಾಣೆಯಾಗಿದ್ದಾರೆ. ಭಾರತೀಯ ಪಡೆಗಳು ಕಾಶ್ಮೀರಿಗಳಿಗೆ ಚಿತ್ರಹಿಂಸೆ ನೀಡುತ್ತಿವೆ.
ಆಗಸ್ಟ್ 5, 2019 ರಂದು ಭಾರತವು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡಿತು ಮತ್ತು ಕಾಶ್ಮೀರಿಗಳ ಮೇಲೆ ದೌರ್ಜನ್ಯದ ಹೊಸ ಮಾರ್ಗವನ್ನು ಪ್ರಾರಂಭಿಸಿತು ಎಂದಿದ್ದಾರೆ ಬಿಲಾವಲ್.

ಕಾಶ್ಮೀರದ ಪರಿಸ್ಥಿತಿಯನ್ನು ಬದಲಾಯಿಸಲು ಭಾರತ ಪ್ರಯತ್ನಿಸುತ್ತಿದೆ. ಇಷ್ಟೆಲ್ಲಾ ಆದ ನಂತರವೂ ಅಂತರಾಷ್ಟ್ರೀಯ ಸಮುದಾಯ ಸುಮ್ಮನೆ ಕೂರುವುದು ಹೇಗೆ?. ಪಿಒಕೆಯಲ್ಲಿ ಕಾಶ್ಮೀರದ ಬಗ್ಗೆ ಚರ್ಚಿಸುತ್ತಿರುವಾಗ, ಭಾರತವು ಕಾಶ್ಮೀರದಲ್ಲಿ ಜಿ -20 ಆಯೋಜಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದರು.

ಇದನ್ನೂ ಓದಿ: ಭಾರತ G20 ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದ ಪಾಕ್ ಸಚಿವರ ವಿರುದ್ಧ ಜಮ್ಮು ಕಾಶ್ಮೀರ ಎಲ್​​ಜಿ ವಾಗ್ದಾಳಿ

ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ ಎಂದು ಪಾಕ್ ವಿದೇಶಾಂಗ ಸಚಿವರು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಕಾಶ್ಮೀರದ ಜನರು ಒಂದೇ ಸಂಸ್ಕೃತಿ, ನಾಗರಿಕತೆ ಮತ್ತು ಪದ್ಧತಿಗಳನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಪಿಒಕೆ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆಗಳು ಬಂದರೂ ಬಿಜೆಪಿ ಆಲೋಚನೆ ಏನೆಂದು ಹೇಳಲು ಅವು ಸಾಕು ಎಂದು ಬಿಲಾವಲ್ ಹೇಳಿದರು. ಪಾಕಿಸ್ತಾನದ ಸೇನೆಯು ಭಾರತೀಯ ಸೇನೆಯ ವಿರುದ್ಧ ಎಷ್ಟು ತಾಳ್ಮೆಯನ್ನು ಕಾಯ್ದುಕೊಳ್ಳುತ್ತಿದೆ ಎಂದ ಭುಟ್ಟೋ ಪಾಕಿಸ್ತಾನಿಗಳು ಭಾರತೀಯ ಸೈನಿಕರಿಗೆ ಎಷ್ಟು ಚಹಾ ಬೇಕಾದರೂ ಕುಡಿಸಬಲ್ಲರು ಎಂದು ತಮಾಷೆಯಾಗಿ ಹೇಳಿದ್ದಾರೆ.

2019 ಫೆಬ್ರವರಿ 27ರಂದು ನಡೆದ ವೈಮಾನಿಕ ದಾಳಿಯಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತಮ್ಮ ಮಿಗ್-21ರಿಂದ ಪಾಕಿಸ್ತಾನದ ಎಫ್-16 ಜೆಟ್ ಹೊಡೆದುರುಳಿಸಿದ್ದರು. ಪಾಕ್ ವಿಮಾನವನ್ನು ಬೆನ್ನಟ್ಟಿ ಹೋಗಿ ಪಾಕ್ ನೆಲದಲ್ಲಿ ಬಿದ್ದ ಅಭಿನಂದನ್ ನ್ನ ಸೆರೆಹಿಡಿದ ಪಾಕಿಸ್ತಾನ ಮಾರ್ಚ್ 1ರಂದು ಬಿಡುಗಡೆ ಮಾಡಿತ್ತು. ಅಭಿನಂದನ್ ಗೆ ಪಾಕಿಸ್ತಾನ ಅಲ್ಲಿ ಚಹಾ ನೀಡಿದ್ದು, ಹೇಗಿದೆ ಟೀ ಎಂದು ಕೇಳಿತ್ತು. ಆಗ ವರ್ಧಮಾನ್ The Tea is Fantastic ಎಂದಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ