ಸೂರ್ಯ -ಚಂದ್ರರ ಮೊದಲ ಚಿತ್ರವನ್ನು ಸೆರೆಹಿಡಿದ ಪಾಕಿಸ್ತಾನದ ಚೊಚ್ಚಲ ಮೂನ್ ಆರ್ಬಿಟರ್ ಮಿಷನ್
ಚೀನಾದ ಸಂಯೋಗದಲ್ಲಿ ಉಡಾವಣೆಗೊಂಡ Chang'e-6 ಮಿಷನ್ ಜತೆಗೆ ಪಾಕಿಸ್ತಾನದ ಮೂನ್ ಆರ್ಬಿಟರ್ ಮಿಷನ್ನ್ನು ಕಳುಹಿಸಲಾಗಿದೆ. ಇದೀಗ ಈ ಮೂನ್ ಆರ್ಬಿಟರ್ ಸೂರ್ಯ-ಚಂದ್ರರ ಮೊದಲ ಚಿತ್ರವನ್ನು ಸೆರೆಹಿಡಿದೆ ಎಂದು ಹೇಳಲಾಗಿದೆ. ಇದೀಗ ಈ ಯಶಸ್ಸುನ್ನು ಪಾಕಿಸ್ತಾನ ಹಂಚಿಕೊಂಡಿದೆ.
ಪಾಕಿಸ್ತಾನದ ಚೊಚ್ಚಲ ಮೂನ್ ಆರ್ಬಿಟರ್ ಮಿಷನ್ ಸೂರ್ಯ ಮತ್ತು ಚಂದ್ರನ ಮೊದಲ ಚಿತ್ರಗಳನ್ನು ಕಳುಹಿಸಿದೆ. ಚೀನಾ ಚಂದ್ರ ಮಿಷನ್‌ನ ಜತೆಗೆ ಕಳುಹಿಸಲಾದ ಮೂನ್ ಆರ್ಬಿಟರ್ ಈ ಚಿತ್ರವನ್ನು ಕಳುಹಿಸಿದೆ. ಪಾಕಿಸ್ತಾನದ ಮಿನಿ ಉಪಗ್ರಹ iCube-Qamar’ನ್ನು ಚೀನಾದ Chang’e-6 ಚಂದ್ರನ ಕಾರ್ಯಾಚರಣೆಯ ಭಾಗವಾಗಿ ಮೇ 3 ರಂದು ಹೈನಾನ್ ಪ್ರಾಂತ್ಯದಿಂದ ಉಡಾವಣೆ ಮಾಡಲಾಯಿತು. ಯಶಸ್ವಿ ಕಾರ್ಯಾಚರಣೆಯನ್ನು ಗುರುತಿಸಲು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (CNSA) ಆಯೋಜಿಸಿದ ಸಮಾರಂಭದಲ್ಲಿ ಈ ಚಿತ್ರಗಳನ್ನು ಅನಾವರಣಗೊಳಿಸಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಸುಪರ್ಕೊದ ವಕ್ತಾರ ಮಾರಿಯಾ ತಾರಿಕ್ ಹೇಳಿದ್ದಾರೆ.
ಬೀಜಿಂಗ್‌ನಲ್ಲಿ ನಡೆದ ಡೇಟಾ ಹಸ್ತಾಂತರ ಸಮಾರಂಭದಲ್ಲಿ ಚೀನಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಖಲೀಲ್ ಹಶ್ಮಿ ಅವರಿಗೆ ಅಧಿಕೃತವಾಗಿ ಈ ಚಿತ್ರಗಳನ್ನು ಹಸ್ತಾಂತರಿಸಲಾಗಿದೆ. ಮೇ 8ರಂದು 16:14 ಕ್ಕೆ (ಪಾಕಿಸ್ತಾನ ಸಮಯ 1:14 ಗಂಟೆಗೆ) ಪಾಕಿಸ್ತಾನಿ ಕ್ಯೂಬ್‌ಸ್ಯಾಟ್, ಚಾಂಗ್’ಇ-6 ಮಿಷನ್ ಹೊತ್ತೊಯ್ಯುವ ಪೇಲೋಡ್‌ಗಳಲ್ಲಿ ಒಂದಾಗಿದ್ದು, ಇದು 12-ಗಂಟೆಗಳ ಕಾಲ ಸಾಗಿ, ಚಂದ್ರನ ಬಿಂದುವಿನ ಬಳಿ ಕಕ್ಷೆಯಿಂದ ಬೇರ್ಪಟ್ಟಿತು. ಚಂದ್ರನ ಸುತ್ತ ದೀರ್ಘವೃತ್ತದ ಕಕ್ಷೆಯನ್ನು ಸುತ್ತಿ, ಚಂದ್ರ ಮೊದಲ ಚಿತ್ರವನ್ನು ಸೆರೆ ಹಿಡಿದಿದೆ.
ಪಾಕಿಸ್ತಾನದ ಕ್ಯೂಬ್‌ಸ್ಯಾಟ್ ಟೆಲಿಮೆಟ್ರಿಯಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಹಾಗೂ ತನ್ನ ಗುರಿಯನ್ನು ಸಾಧಿಸಿದೆ ಎಂದು ಸಿಎನ್‌ಎಸ್‌ಎ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. CNSA ಹಂಚಿಕೊಂಡ ಚಿತ್ರದ ಪ್ರಕಾರ ಮೊದಲ ಚಿತ್ರವು ಸೂರ್ಯನ ಪ್ರಕಾಶಮಾನವಾದ ಸ್ಪಾಟ್ಲೈಟ್ ಎಂದು ಹೇಳಲಾಗಿದೆ. ಎರಡನೇ ಚಿತ್ರದಲ್ಲಿ ಚಂದ್ರನನ್ನು ಹಾಗೂ ಮೂರನೇ ಚಿತ್ರದಲ್ಲಿ ಸೂರ್ಯ ತೋರಿಸಿದೆ.
ಇದನ್ನೂ ಓದಿ: ಇದ್ಯಾವುದೋ ಕೊರೋನಾ ಮತ್ತೆ ವಕ್ಕರಿಸಿಕೊಂಡಿದೆ, ಸೌದಿ ಒಂಟೆಗಳಿಂದ ಸೋಂಕು ಹರಡುತ್ತಿದೆ, ಏನಿದರ ಲಕ್ಷಣಗಳು?
ಚೀನಾದ ಶಾಂಘೈ ವಿಶ್ವವಿದ್ಯಾಲಯ (SJTU) ಮತ್ತು ಸುಪರ್ಕೊ ಸಹಯೋಗದೊಂದಿಗೆ ಇಸ್ಲಾಮಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಟೆಕ್ನಾಲಜಿ (IST) ಈ ಮಾಡ್ಯೂಲ್ ವಿನ್ಯಾಸಗೊಳಿಸಿದೆ. ಇದು ಚಂದ್ರನ ಮೇಲ್ಮೈಯನ್ನು ಸೆರೆಹಿಡಿಯಲು ಎರಡು ಆಪ್ಟಿಕಲ್ ಕ್ಯಾಮೆರಾಗಳನ್ನು ಹೊಂದಿದೆ. ಕ್ಯೂಬ್ ಉಪಗ್ರಹ ಅಥವಾ ಕ್ಯೂಬ್‌ಸ್ಯಾಟ್ ಒಂದು ಚಿಕ್ಕ ಉಪಗ್ರಹವಾಗಿದ್ದು, ಇದು ಡೇಟಾಗಳನ್ನು ಸಂಗ್ರಹ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಪಾಕಿಸ್ತಾನಕ್ಕೆ ಚಾಂಗ್’ಇ-6 ಮಿಷನ್‌ನ ಭಾಗವಾಗಲು ಏಷ್ಯಾ ಪೆಸಿಫಿಕ್ ಬಾಹ್ಯಾಕಾಶ ಸಹಕಾರ ಸಂಸ್ಥೆ (ಎಪಿಎಸ್‌ಸಿಒ) ಮೂಲಕ ಚಂದ್ರನ ಕಕ್ಷೆಗೆ ಉಡಾವಣೆ ಮಾಡುವ ಅವಕಾಶ ಸಿಕ್ಕಿತು. ಈ ಯಶಸ್ಸುನ್ನು ಪಾಕಿಸ್ತಾನ ಹೆಮ್ಮೆಯಿಂದ ಹೇಳಿಕೊಂಡಿದೆ. ಇದನ್ನು ಆರ್ಥಿಕ ಹಾಗೂ ಭದ್ರತಾ ಸವಾಲುಗಳು ಎಂದು ಹೇಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಪೋಸ್ಟ್ಗಳನ್ನು ಹಂಚಿಕೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ