ಪೀಪಲ್ಸ್​​​ ರಿಪಬ್ಲಿಕ್​ ಆಫ್ ಚೀನಾದ ರಾಷ್ಟ್ರೀಯ ದಿನ; ತೈವಾನ್​ನತ್ತ 38 ಚೀನಾ ಮಿಲಿಟರಿ ವಿಮಾನಗಳ ದಾಂಗುಡಿ

| Updated By: Lakshmi Hegde

Updated on: Oct 02, 2021 | 2:30 PM

ತೈವಾನ್​ ತನ್ನದೇ ಪ್ರದೇಶ ಎಂದು ಚೀನಾ ಪ್ರತಿಪಾದಿಸುತ್ತಲೇ ಇದೆ. ಆದರೆ ತೈವಾನ್​ ಈ ಹಿಂದೆಯೇ ತಾನು ಪ್ರತ್ಯೇಕ ದ್ವೇಷ ಎಂದು ಹೇಳಿಕೊಂಡು ಸ್ವತಂತ್ರವಾಗಿ ಆಡಳಿತವನ್ನೂ ಶುರುಮಾಡಿಕೊಂಡಿದೆ.

ಪೀಪಲ್ಸ್​​​ ರಿಪಬ್ಲಿಕ್​ ಆಫ್ ಚೀನಾದ ರಾಷ್ಟ್ರೀಯ ದಿನ; ತೈವಾನ್​ನತ್ತ 38 ಚೀನಾ ಮಿಲಿಟರಿ ವಿಮಾನಗಳ ದಾಂಗುಡಿ
ಮಿಲಿಟರಿ ವಿಮಾನಗಳ ಫೋಟೋ ಬಿಡುಗಡೆ ಮಾಡಿದ ತೈವಾನ್​
Follow us on

ತೈಪೆ: ಪೀಪಲ್ಸ್​ ರಿಪಬ್ಲಿಕ್​ ಆಫ್​ ಚೀನಾ  ನಿನ್ನೆ (ಅಕ್ಟೋಬರ್​ 1) ರಾಷ್ಟ್ರೀಯ ದಿನವನ್ನು ಆಚರಿಸುತ್ತಿದೆ. 1949ರ ಅಕ್ಟೋಬರ್​ 2 ರಂದು ಪೀಪಲ್ಸ್​ ರಿಪಬ್ಲಿಕ್​ ಆಫ್​ ಚೀನಾ ಸ್ಥಾಪಿತಗೊಂಡ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಈ ದಿನ ರಾಷ್ಟ್ರೀಯ ಹಬ್ಬವನ್ನಾಗಿ ಅಲ್ಲಿ ಆಚರಣೆ ಮಾಡಲಾಗುತ್ತದೆ. ಇಂದು ಸಹ ಚೀನಾ ತನ್ನ ರಾಷ್ಟ್ರೀಯ ದಿನದ ಸಂಭ್ರಮದಲ್ಲಿದೆ.  ಈ ಮಧ್ಯೆ ಇಂದು ಚೀನಾ ಸುಮಾರು 38 ಚೈನೀಸ್​ ಮಿಲಿಟರಿ ವಿಮಾನಗಳನ್ನು ತೈವಾನ್​ನತ್ತ ಕಳಿಸಿದ್ದು, ಈ ಜೆಟ್​ಗಳು ತೈವಾನ್​ನ ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ತೈವಾನ್​ ರಾಜಧಾನಿ ತೈಪೆ ತಿಳಿಸಿದೆ. 

ಚೀನಾದ ಪೀಪಲ್ಸ್​ ಲಿಬರೇಶನ್​ ಆರ್ಮಿ ಶುಕ್ರವಾರ ಮೊದಲು 25 ಯುದ್ಧ ವಿಮಾನಗಳನ್ನು ತೈವಾನ್​​ನತ್ತ ಕಳಿಸಿತು. ಅದೇ ದಿನ ರಾತ್ರಿ ಹೆಚ್ಚುವರಿಯಾಗಿ 13 ಜೆಟ್​ಗಳನ್ನು ಹಾರಿಸಿತು. ಅದಕ್ಕೆ ಪ್ರತಿಯಾಗಿ ತೈವಾನ್​ ಕೂಡ ತನ್ನ ಭದ್ರತೆಯನ್ನು ಹೆಚ್ಚಿಸಿತು. ವಾಯುಗಸ್ತು ಪಡೆಯನ್ನು ಹೆಚ್ಚುವರಿಯಾಗಿ ನಿಯೋಜಿಸಿತು. ಹಾಗೇ, ವಾಯುಪಡೆಯ ಮೂಲಕವೇ ಚೀನಾದ ಯುದ್ಧವಿಮಾನಗಳ ಸಂಚಾರವನ್ನು ಟ್ರ್ಯಾಕ್​ ಮಾಡಲಾಯಿತು. ಹೀಗೆ ಕಳಿಸಲಾದ ಪ್ಲೇನ್​ಗಳಲ್ಲಿ ಎರಡು ಬಾಂಬರ್​ಗಳೂ ಇದ್ದವು ಎಂದು ತೈವಾನ್​ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ತೈವಾನ್​ ತನ್ನದೇ ಪ್ರದೇಶ ಎಂದು ಚೀನಾ ಪ್ರತಿಪಾದಿಸುತ್ತಲೇ ಇದೆ. ಆದರೆ ತೈವಾನ್​ ಈ ಹಿಂದೆಯೇ ತಾನು ಪ್ರತ್ಯೇಕ ದ್ವೇಷ ಎಂದು ಹೇಳಿಕೊಂಡು ಸ್ವತಂತ್ರವಾಗಿ ಆಡಳಿತವನ್ನೂ ಶುರುಮಾಡಿಕೊಂಡಿದೆ. ಅಷ್ಟೇ ಅಲ್ಲ ಚೀನಾ ಸರ್ಕಾರ ರಾಜತಾಂತ್ರಿಕ ವ್ಯವಹಾರ ನಡೆಸುತ್ತಿರುವ ದೇಶಗಳೊಂದಿಗೆ ತಾನು ಯಾವುದೇ ಸಂಬಂಧವನ್ನೂ ಇಟ್ಟುಕೊಂಡಿಲ್ಲ. ಹೀಗಾಗಿ ಚೀನಾ ಮತ್ತು ತೈವಾನ್​ ನಡುವೆ ದ್ವೇಷವೆಂಬುದು ಬಹಿರಂಗವಾಗಿಯೇ ಇದೆ. ನಿನ್ನೆ ಅಕ್ಟೋಬರ್​ 1ರಂದು ಚೀನಾದ ಫೈಟರ್​ ಜೆಟ್​ಗಳು ತಮ್ಮ ರಕ್ಷಣಾ ವಲಯ ಪ್ರವೇಶಿಸಿದ್ದಾಗಿ ತೈವಾನ್​ ಹೇಳಿಕೊಂಡಿದೆ. ಆದರೆ ಚೀನಾ ತನ್ನ ಬಲಪ್ರದರ್ಶನದ ಬಗ್ಗೆ ಇನ್ನೂ ಏನೂ ಮಾತನಾಡಿಲ್ಲ.  ಈ ಹಿಂದೆಯೂ ಚೀನಾ ಹೀಗೆ ಮಿಲಿಟರಿ ವಿಮಾನಗಳನ್ನು ತೈವಾನ್​ನತ್ತ ಕಳಿಸಿತ್ತು. ನಂತರ ಪ್ರತಿಕ್ರಿಯೆ ನೀಡಿ, ನಮ್ಮ ಚೀನಾದ ಸಾರ್ವಭೌಮತ್ವ ರಕ್ಷಣೆಯ ಉದ್ದೇಶದಿಂದ ಫೈಟರ್​ ಜೆಟ್​ಗಳ ಹಾರಾಟ ನಡೆಸಲಾಗುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ: S M Krishna invited: ದಸರಾ ಉದ್ಘಾಟನೆಗಾಗಿ ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್​ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?