Pfizer Pill: ಫೈಜರ್ ಕಂಪೆನಿಯ ಮಾತ್ರೆ ಕೊರೊನಾ ವಿರುದ್ಧ ಪರಿಣಾಮಕಾರಿ ಎಂದ ಸಂಸ್ಥೆ
Pfizer Tablet: ಫೈಜರ್ ಮಾತ್ರೆ ನಿರೀಕ್ಷೆಗೂ ಮೀರಿ ಪರಿಣಾಮಕಾರಿಯಾಗಿದೆ. ತುರ್ತು ಬಳಕೆಗೆ ಅನುಮತಿ ಕೋರಿ ಡಾಟಾ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ. ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಗ್ಯುಲೇಟರ್‌ಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ದೆಹಲಿ: ಫೈಜರ್ ಕಂಪೆನಿಯ ಮಾತ್ರೆ ಕೊರೊನಾ ವಿರುದ್ಧ ಪರಿಣಾಮಕಾರಿ ಆಗಿದೆ. ಕೊರೊನಾ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಇದು ತಡೆಯುತ್ತದೆ. ಹೈ ರಿಸ್ಕ್ ರೋಗಿಗಳಲ್ಲಿ ಶೇ.89ರಷ್ಟು ಸಾವನ್ನು ಈ ಮಾತ್ರೆ ತಡೆಯುತ್ತದೆ. ಫೈಜರ್ ಮಾತ್ರೆಯಿಂದ ಕೊರೊನಾ ರೋಗಿಗಳ ಚಿಕಿತ್ಸೆ ಸುಲಭ. ಇನ್ಮುಂದೆ ಮಾತ್ರೆಗಳ ವೈದ್ಯಕೀಯ ಪರೀಕ್ಷೆ ನಡೆಸಲ್ಲ ಎಂದು ಫೈಜರ್ ಹೇಳಿಕೆ ನೀಡಿದೆ.
ಫೈಜರ್ ಮಾತ್ರೆ ನಿರೀಕ್ಷೆಗೂ ಮೀರಿ ಪರಿಣಾಮಕಾರಿಯಾಗಿದೆ. ತುರ್ತು ಬಳಕೆಗೆ ಅನುಮತಿ ಕೋರಿ ಡಾಟಾ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ. ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಗ್ಯುಲೇಟರ್‌ಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಫೈಜರ್ ಕಂಪನಿಯಿಂದ ಕೊರೊನಾ ವಿರುದ್ಧ ಮಾತ್ರೆ ಅಭಿವೃದ್ಧಿಪಡಿಸಲಾಗಿದೆ. ಮಾತ್ರೆ ಅಭಿವೃದ್ಧಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಫೈಜರ್ ಕಂಪನಿಯ ಷೇರುಗಳ ಬೆಲೆಯಲ್ಲಿ ಶೇಕಡಾ 11ರಷ್ಟು ಏರಿಕೆ ಕಂಡುಬಂದಿದೆ.
ರೋಗಲಕ್ಷಣ ಕಂಡುಬಂದ 3 ದಿನಗಳಲ್ಲಿ ಮಾತ್ರೆ ಸೇವಿಸಬೇಕು. ಐದು ದಿನಗಳಲ್ಲಿ 30 ಮಾತ್ರೆಗಳನ್ನು ನೀಡಬೇಕಾಗುತ್ತದೆ. HIVಯ ಹಳೆಯ ಔಷಧ ಜೊತೆ ಮಾತ್ರೆ ನೀಡಬೇಕು ಎಂದು ತಿಳಿಸಲಾಗಿದೆ. ವಿವಿಧ ವೈರಸ್ಗಳಿಗೆ ಒಂದೇ ರೀತಿಯಾಗಿದ್ದ ಆಂಟಿ ವೈರಲ್ ಡ್ರಗ್ ಬಳಸುತ್ತಾರೆ. ಫೈಜರ್ ಮಾತ್ರೆ ಹೆಚ್ಚು ದೇಹದಲ್ಲಿ ಸಕ್ರೀಯವಾಗಲು ಹೆಚ್ಐವಿ ಔಷಧಿ ಬಳಸಲಾಗುತ್ತೆ ಎಂದು ತಿಳಿಸಿದ್ದಾರೆ.
ಕೊವಿಡ್ ಸೋಂಕಿತರಿಗೆ ಮೆರ್ಕ್ ಮಾತ್ರೆ ನೀಡಲು ಬ್ರಿಟನ್ ಒಪ್ಪಿಗೆ ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ (MRK) ತಯಾರಿಸಿರುವ ಮಾತ್ರೆಗಳನ್ನು ಕೊರೊನಾ ಸೋಂಕಿತರಿಗೆ ನೀಡಲು ಬ್ರಿಟನ್ ಔಷಧ ನಿಯಂತ್ರಣಾ ಸಂಸ್ಥೆ ಗುರುವಾರ ಅನುಮೋದನೆ ನೀಡಿತ್ತು. ಬ್ರಿಟನ್ ಈ ಮಾತ್ರೆಯ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎನಿಸಿತ್ತು. ಮೊಲ್ನುಪಿರವಿರ್ ಹೆಸರಿನಲ್ಲಿ ಈ ಮಾತ್ರೆಯು ಬ್ರಿಟನ್ನಲ್ಲಿ ಜನರಿಗೆ ಲಭ್ಯವಾಗಲಿದೆ.
ಕೊವಿಡ್ ಸೋಂಕಿತರಿಗೆ ಈ ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ನೀಡಲಾಗುವುದು. ಸೋಂಕು ದೃಢಪಟ್ಟ ಮೊದಲ ಐದು ದಿನಗಳ ಒಳಗೆ ಮನೆಗಳಲ್ಲಿಯೇ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದಾಗಿದೆ. ಕ್ಲಿನಿಕಲ್ ಟ್ರಯಲ್ಗಳ ವೇಳೆ ಈ ಮಾತ್ರೆಯ ಪರಿಣಾಮ ಸಾಬೀತಾಗಿತ್ತು. ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆಯನ್ನು, ಸೋಂಕಿನ ಲಕ್ಷಣಗಳನ್ನು ಮತ್ತು ಸಾವು ಸಂಭವಿಸುವ ಸಾಧ್ಯತೆಗಳನ್ನು ಇದು ಕಡಿಮೆ ಮಾಡಿತ್ತು.
ಕ್ಲಿನಿಕಲ್ ಟ್ರಯಲ್ನಲ್ಲಿ ಪಾಲ್ಗೊಂಡಿದ್ದ 775 ರೋಗಿಗಳ ಪೈಕಿ ಮೊದಲ 29 ದಿನಗಳಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. ‘ಬ್ರಿಟನ್ನ ಇತಿಹಾಸದಲ್ಲಿ ಇದು ಮಹತ್ವದ ದಿನ. ಕೊವಿಡ್ ಚಿಕಿತ್ಸೆಗೆ ಮನೆಯಲ್ಲಿಯೇ ಔಷಧ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿರುವುದು ಮಹತ್ವದ ನಿರ್ಧಾರ’ ಎಂದು ಬ್ರಿಟನ್ನ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್ ಜಾವಿದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಕೊವಿಡ್ ಸೋಂಕಿತರಿಗೆ ಮೆರ್ಕ್ ಮಾತ್ರೆ ನೀಡಲು ಬ್ರಿಟನ್ ಒಪ್ಪಿಗೆ
ಇದನ್ನೂ ಓದಿ: Covaxin: ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ
Published On - 5:43 pm, Fri, 5 November 21