ರಿಯಾದ್ (ಸೌದಿ ಅರೇಬಿಯಾ): ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ನೇತೃತ್ವದ ನಿಯೋಗವು ಮದೀನಾದ (Madina) ಮಸ್ಜಿದ್-ಎ-ನಬವಿಯನ್ನು ಪ್ರವೇಶಿಸಿದಾಗ ಅಲ್ಲಿ ಯಾತ್ರಿಕರು ಹೇಗೆ ಪ್ರತಿಕ್ರಿಯಿಸಿದರು ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿಯೋಗವು ಮಸ್ಜಿದ್-ಎ-ನಬವಿಯತ್ತ (Masjid-e-Nabawi) ಸಾಗುತ್ತಿರುವುದನ್ನು ನೋಡಿದ ನೂರಾರು ಯಾತ್ರಾರ್ಥಿಗಳು “ಚೋರ್ ಚೋರ್” (ಕಳ್ಳರು,ಕಳ್ಳರು) ಎಂದು ಘೋಷಣೆ ಕೂಗುತ್ತಿರುವುದನ್ನು ತೋರಿಸುವ ವಿಡಿಯೊ ಸೋಷ್ಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯ ನಂತರ, ಪವಿತ್ರತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಿಡಿಯೊವೊಂದರಲ್ಲಿ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶಹಜೈನ್ ಬುಗ್ತಿ ಇತರರೊಂದಿಗೆ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನಿ ಪತ್ರಿಕೆಯ ಪ್ರಕಾರ, ಪ್ರತಿಭಟನೆಗೆ ಔರಂಗಜೇಬ್ ಪರೋಕ್ಷವಾಗಿ ಪದಚ್ಯುತ ಇಮ್ರಾನ್ ಖಾನ್ ಅವರನ್ನು ದೂಷಿಸಿದರು. “ನಾನು ಈ ಪುಣ್ಯಭೂಮಿಯಲ್ಲಿ ಈ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ಏಕೆಂದರೆ ನಾನು ಈ ಭೂಮಿಯನ್ನು ರಾಜಕೀಯಕ್ಕೆ ಬಳಸಲು ಬಯಸುವುದಿಲ್ಲ. ಆದರೆ ಅವರು ಪಾಕಿಸ್ತಾನಿ ಸಮಾಜವನ್ನು ನಾಶಪಡಿಸಿದ್ದಾರೆ ಎಂದು ಔರಂಗಜೇಬ್ ಹೇಳಿರುವುದನ್ನು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಉಲ್ಲೇಖಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೌದಿ ಅರೇಬಿಯಾಕ್ಕೆ ತಮ್ಮ ಮೊದಲ ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿರುವಾಗ ಇದು ಸಂಭವಿಸಿದೆ. ಹತ್ತಾರು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಪಾಕಿಸ್ತಾನದ ಪ್ರಧಾನಿ ಜತೆ ಇದ್ದರು.
The Pakistani delegation surrounded by people yelling “chor chor” when they made their way to Masjid-e-Nabwi in Madina.
PM Shehbaz Sharif is in Saudi Arabia for a three day tour. #ShehbazSharif #SaudiArabia pic.twitter.com/aRuVmOwWrH
— The Current (@TheCurrentPK) April 28, 2022
ಟ್ವಿಟರ್‌ನಲ್ಲಿ ವಿಡಿಯೊವನ್ನು ಶೇರ್ ಮಾಡಿದ ಟ್ವೀಟಿಗರು “ಹೆಮ್ಮೆಯ ಪಾಕಿಸ್ತಾನೀಯರೇ, ಸೌದಿ ಅರೇಬಿಯಾದಲ್ಲಿ ನಮ್ಮ ಪ್ರಧಾನಿ ಮತ್ತು ಅವರ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಕ್ರಿಮಿನಲ್‌ಗಳ ಗ್ಯಾಂಗ್‌ಗೆ ಎಂತಹ ಅದ್ಭುತ ಸ್ವಾಗತ ಸಿಕ್ಕಿದೆ ಎಂಬುದನ್ನು ನೋಡಿ ಹೃದಯ ತುಂಬಿಕೊಳ್ಳಿ” ಎಂದು ಬರೆದಿದ್ದಾರೆ.
ಅವರ ಹಿಂದಿನ ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ಮತದಲ್ಲಿ ಪದಚ್ಯುತಗೊಳಿಸಿದ ನಂತರ ಷರೀಫ್ ಅವರು ಏಪ್ರಿಲ್ 11 ರಂದು ಪಾಕಿಸ್ತಾನದ 23 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಭೇಟಿಯ ಸಮಯದಲ್ಲಿ ಷರೀಫ್ ಸೌದಿ ಅರೇಬಿಯಾದಿಂದ ಯುಎಸ್ ಡಿ 3.2 ಶತಕೋಟಿಯ ಹೆಚ್ಚುವರಿ ಪ್ಯಾಕೇಜ್ ಪಡೆಯಲು ಸಿದ್ಧರಾಗಿದ್ದಾರೆ. ಪಾಕಿಸ್ತಾನದ ವಿದೇಶಿ ಕರೆನ್ಸಿ ನಿಕ್ಷೇಪಗಳು ಮತ್ತಷ್ಟು ಸವಕಳಿಯಾಗುವುದನ್ನು ತಪ್ಪಿಸಲು ಅವರು ಈ ವಿನಂತಿಯನ್ನು ಮುಂದಿಡುತ್ತಾರೆ.
ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:44 pm, Fri, 29 April 22