ಕರಾಚಿ: 12 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ವಿಮಾನ ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿರುವ (Karachi Airport) ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ವಿಶೇಷ ವಿಮಾನವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.10ಕ್ಕೆ (ಪಾಕಿಸ್ತಾನದ ಸಮಯ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ಮೂಲಗಳು ತಿಳಿಸಿವೆ.
ಭಾರತದ ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ವಕ್ತಾರರು ಈ ಕುರಿತು ಖಚಿತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಚಾರ್ಟರ್ ವಿಮಾನವು ಭಾರತದಿಂದ ಪಾಕಿಸ್ತಾನದಲ್ಲಿ ಲ್ಯಾಂಡ್ ಆಗಿದೆ. ಆದರೆ, ಅದನ್ನು ಹೊರತುಪಡಿಸಿ ಪಾಕಿಸ್ತಾನದಿಂದ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: NATO: ನ್ಯಾಟೊ ಜೊತೆಗೆ ಭಾರತದ ಗೌಪ್ಯ ಮಾತುಕತೆ; ಚೀನಾ, ಪಾಕಿಸ್ತಾನ ಉಪಟಳದ ಹಿನ್ನೆಲೆಯಲ್ಲಿ ಮಹತ್ವ ಪಡೆದ ವಿದ್ಯಮಾನ
ಭಾರತದ ವಿಮಾನ ಕರಾಚಿಯಲ್ಲಿ ಇಳಿದ ಸ್ವಲ್ಪ ಸಮಯದ ನಂತರ 12 ಪ್ರಯಾಣಿಕರೊಂದಿಗೆ ಮತ್ತೆ ಹಾರಾಟ ನಡೆಸಿತು. ಕರಾಚಿ ವಿಮಾನ ನಿಲ್ದಾಣದಲ್ಲಿ ಆ ವಿಶೇಷ ವಿಮಾನ ಏಕೆ ಇಳಿದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ತಿಂಗಳು ಭಾರತದಿಂದ ಹೊರಟ 2 ವಿಮಾನಗಳು ಕರಾಚಿಯಲ್ಲಿ ಲ್ಯಾಂಡ್ ಆಗಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಸ್ಪೈಸ್‌ಜೆಟ್‌ನ ದೆಹಲಿ-ದುಬೈ ವಿಮಾನದಲ್ಲಿ ಸಮಸ್ಯೆ ಎದುರಾಗಿದ್ದರಿಂದ ಜುಲೈ 5ರಂದು ಕರಾಚಿಯಲ್ಲಿ ಲ್ಯಾಂಡ್ ಮಾಡಲಾಗಿತ್ತು. ಪೈಲಟ್‌ಗಳು ಎಂಜಿನ್‌ನಲ್ಲಿ ದೋಷವನ್ನು ಗಮನಿಸಿದ ನಂತರ ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು ಜುಲೈ 17ರಂದು ಮುನ್ನೆಚ್ಚರಿಕಾ ಕ್ರಮವಾಗಿ ಕರಾಚಿ ಏರ್ಪೋರ್ಟ್ಗೆ ತಿರುಗಿಸಲಾಗಿತ್ತು.