Chinese Threat: ಚೀನಾದ ಬೇಹುಗಾರಿಕೆ ಹಡಗು ಬರುವುದಕ್ಕೆ ಒಂದು ದಿನ ಮೊದಲು ಶ್ರೀಲಂಕಾಕ್ಕೆ ಮಿಲಿಟರಿ ವಿಮಾನ ಕಳಿಸಿದ ಭಾರತ

India Vs China: ಚೀನಾದ ಬೇಹುಗಾರಿಕೆ ಹಡಗು ಶ್ರೀಲಂಕಾದ ಹಂಬನ್​ತೋಟಾ ಬಂದರಿಗೆ ಬರುವುದಕ್ಕೆ ಒಂದು ದಿನ ಮೊದಲು ನಡೆದಿರುವ ಈ ಬೆಳವಣಿಗೆಯು ಹಲವು ದೇಶಗಳ ಹುಬ್ಬೇರುವಂತೆ ಮಾಡಿದೆ.

Chinese Threat: ಚೀನಾದ ಬೇಹುಗಾರಿಕೆ ಹಡಗು ಬರುವುದಕ್ಕೆ ಒಂದು ದಿನ ಮೊದಲು ಶ್ರೀಲಂಕಾಕ್ಕೆ ಮಿಲಿಟರಿ ವಿಮಾನ ಕಳಿಸಿದ ಭಾರತ
ಚೀನಾದ ಬೇಹುಗಾರಿಕೆ ಹಡು ಯಾನ್ ವಾಂಗ್ ಮತ್ತು ಭಾರತದ ಡಾರ್ನಿಯರ್ ವಿಮಾನ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 16, 2022 | 8:25 AM

ದೆಹಲಿ: ಆಗಸದಿಂದಲೇ ನೆಲದ ಮೇಲೆ ತೀಕ್ಷ್ಣ ನಿಗಾ ಇರಿಸಬಲ್ಲ ಮಹತ್ವದ ‘ಡಾರ್ನಿಯರ್’ (Dornier Aircraft) ವಿಮಾನವೊಂದನ್ನು ಭಾರತ ಸರ್ಕಾರವು ಶ್ರೀಲಂಕಾಕ್ಕೆ (Indian Gift to Srilanka) ಉಡುಗೊರೆಯಾಗಿ ಕಳಿಸಿಕೊಟ್ಟಿದೆ. ಚೀನಾದ ಬೇಹುಗಾರಿಕೆ ಹಡಗು ‘ಯಾನ್ ವಾಂಗ್ 5’ (Yuan Wang 5) ಶ್ರೀಲಂಕಾದ ಹಂಬನ್​ತೋಟಾ ಬಂದರಿನಲ್ಲಿ (Hambantota Port) ಲಂಗರು ಹಾಕುವುದಕ್ಕೆ ಕೇವಲ ಒಂದು ದಿನ ಮೊದಲು ನಡೆದಿರುವ ಈ ಬೆಳವಣಿಗೆಯು ಹಲವು ದೇಶಗಳ ಹುಬ್ಬೇರುವಂತೆ ಮಾಡಿದೆ. ಈ ವಿಮಾನವು ಬಹು ಎತ್ತರದಿಂದಲೇ ನೆಲದ ಮೇಲೆ ಸೂಕ್ಷ್ಮ ಕಣ್ಣು ಇರಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದನ್ನು ಶ್ರೀಲಂಕಾ ಸರ್ಕಾರವು ಮಾದಕವಸ್ತುಗಳ ಕಳ್ಳಸಾಗಣೆ ತಡೆಯಲು ಹಾಗೂ ಸಾಗರ ಸುರಕ್ಷೆ ಹೆಚ್ಚಿಸಲು ಬಳಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಸಲಹೆ ಮಾಡಿದೆ.

ಶ್ರೀಲಂಕಾ ವಾಯುಸೇನೆಯ ಪ್ರಮುಖ ನೆಲೆ ಇರುವ ಕಟುನಾಯಕೆ ಎಂಬಲ್ಲಿ ಈ ವಿಮಾನವನ್ನು ಭಾರತದ ಅಧಿಕಾರಿಗಳು ಹಸ್ತಾಂತರಿಸಿದರು. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯಂದೇ ಈ ಮಹತ್ವದ ಬೆಳವಣಿಗೆಯೂ ನಡೆದಿರುವುದು ವಿಶೇಷ ಎನಿಸಿದೆ. ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥರಾದ ವೈಸ್ ಅಡ್ಮಿರಲ್ ಎಸ್.ಎನ್.ಘೋರ್ಮಡೆ, ಶ್ರೀಲಂಕಾದಲ್ಲಿರುವ ಭಾರತದ ರಾಯಭಾರಿ ಗೋಪಾಲ್ ಬಾಗ್ಲೋಯ್ ಮತ್ತು ಶ್ರೀಲಂಕಾದ ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ಮುಖ್ಯಸ್ಥರು ವಿಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚೀನಾದ ನೌಕಾಪಡೆಗೆ ಬಲ ತುಂಬಲು ಭಾರತದ ಬದ್ಧತೆಯನ್ನು ಈ ನಡೆ ಸಾರಿ ಹೇಳಿದೆ. ಚೀನಾ ಸೇನೆಯ ‘ಯಾನ್ ವಾಂಗ್ 5’ ಬೇಹುಗಾರಿಕೆ ನೌಕೆಯು ಇಂದು (ಆಗಸ್ಟ್ 16) ಶ್ರೀಲಂಕಾ ತಲುಪಲಿದೆ. ಕ್ಷಿಪಣಿಗಳು ಮತ್ತು ಉಪಗ್ರಹಗಳನ್ನು ಸಹ ಜಾಲಾಡುವ ಸಾಮರ್ಥ್ಯವಿರುವ ಆಂಟೆನಾಗಳು ಈ ಹಡಗಿನಲ್ಲಿವೆ. ಮೊದಮೊದಲು ಈ ನೌಕೆಗೆ ಲಂಗರು ಹಾಕಲು ಶ್ರೀಲಂಕಾ ಸರ್ಕಾರ ಅನುಮತಿ ನಿರಾಕರಿಸಿತ್ತು. ಆದರೆ ಚೀನಾದ ಒತ್ತಡ ಹೆಚ್ಚಾದ ನಂತರ ಅನಿವಾರ್ಯವಾಗಿ ಅನುಮತಿ ಕೊಟ್ಟಿತ್ತು. ಆಗಸ್ಟ್ 5ರಂದು ಈ ಹಡಗು ಶ್ರೀಲಂಕಾಕ್ಕೆ ಬರಬೇಕಿತ್ತು. ಆದರೆ ಅನುಮತಿ ಪಡೆಯುವ ಪ್ರಕ್ರಿಯೆ ಸಮಯ ತೆಗೆದುಕೊಂಡ ಹಿನ್ನೆಲೆಯಲ್ಲಿ ನೌಕೆಯು ಬರುವುದು ತಡವಾಯಿತು.

ಹಂಬನ್​ತೋಟಾ ಬಂದರಿಗೆ ಯಾನ್ ವಾಂಗ್ 5 ಹಡಗು ಬರುವುದನ್ನು ಅಮೆರಿಕ ಸಹ ವಿರೋಧಿಸಿತ್ತು. ಹಡಗಿಗೆ ಶ್ರೀಲಂಕಾ ಅನುಮತಿ ನಿರಾಕರಿಸಲು ಭಾರತದ ಒತ್ತಡ ಕಾರಣ ಎನ್ನುವ ಚೀನಾದ ಆರೋಪವನ್ನು ಭಾರತ ಸರ್ಕಾರ ತಳ್ಳಿ ಹಾಕಿತ್ತು.

ಭಾರತ ಸರ್ಕಾರವು ಕೊಡುಗಡೆಯಾಗಿ ಕೊಟ್ಟಿರುವ ‘ಡಾರ್ನಿಯರ್’ ವಿಮಾನ ನಿರ್ವಹಣೆಗಾಗಿ ಶ್ರೀಲಂಕಾದ ವಾಯುಪಡೆ ಸಿಬ್ಬಂದಿಗೆ ಭಾರತದಲ್ಲಿಯೇ ತರಬೇತಿಯನ್ನೂ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಭಾರತದ ಅಧಿಕಾರಿಗಳು ಶ್ರೀಲಂಕಾದ ವಾಯುಪಡೆ ಸಿಬ್ಬಂದಿಗೆ ವಿಮಾನ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಅಗತ್ಯ ಬೆಂಬಲ ಒದಗಿಸಲಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.

ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ಹೆಚ್ಚಾಗುತ್ತಿರುವುದನ್ನು ತಡೆಯಲು ಭಾರತ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಮಾಲ್ಡೀವ್ಸ್, ಮಾರಿಷಸ್ ಮತ್ತು ಶ್ರೀಲಂಕಾ ಜೊತೆಗೆ ಭಾರತ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಬಾಂಗ್ಲಾದೇಶ ಮತ್ತ ಸೆಚೆಲ್ಸ್​ಗಳನ್ನು ಸಾಗರ ನಿಗಾ ದೇಶವಾಗಿ ಬಳಸಿಕೊಳ್ಳಲು ಅವಕಾಶ ಪಡೆದುಕೊಂಡಿದೆ.

Published On - 7:44 am, Tue, 16 August 22

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ