AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನ ಸೆಳೆಯುತ್ತಿದೆ ‘ಕರಿಕಾಡ’, ಆಸಕ್ತ ತಂಡದ ಸಾಹಸಮಯ ಪ್ರಯತ್ನ

Karikada movie: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕೆಲ ಹೊಸಬರು ಸದ್ದು ಮಾಡುತ್ತಿದ್ದಾರೆ. ಕೆಲ ಹೊಸ ತಂಡಗಳ ಹೊಸ ಪ್ರಯತ್ನ ಗಮನ ಸೆಳೆದಿವೆ. ಇದೀಗ ಮತ್ತೊಂದು ಹೊಸ ತಂಡವೊಂದು ಹೊಸದೊಂದು ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ‘ಕರಿಕಾಡ’ ಹೆಸರಿನಷ್ಟೆ ಟೀಸರ್ ಸಹ ಭಿನ್ನವಾಗಿದೆ.

ಗಮನ ಸೆಳೆಯುತ್ತಿದೆ ‘ಕರಿಕಾಡ’, ಆಸಕ್ತ ತಂಡದ ಸಾಹಸಮಯ ಪ್ರಯತ್ನ
Karikada
ಮಂಜುನಾಥ ಸಿ.
|

Updated on:Jun 07, 2025 | 11:18 PM

Share

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ಅಲ್ಲಲ್ಲಿ ಗಮನ ಸೆಳೆಯುತ್ತಿವೆ. ಹಲವು ಹೊಸಬರು ಹೊಸ ಕತೆ, ಹೊಸ ಐಡಿಯಾಗಳನ್ನಿಟ್ಟುಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಕೆಲವರು ಪ್ರತಿಭೆಯ ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಹಲವಾರು ಹೊಸ ತಂಡಗಳು ಸಿನಿಮಾ ಮೂಲಕ ಛಾಪು ಮೂಡಿಸಿವೆ. ಅಂಥಹುದೇ ಒಂದು ಆಸಕ್ತ ತಂಡವೊಂದು ‘ಕರಿಕಾಡ’ ಹೆಸರಿನ ಹೊಸ ರೀತಿಯ ಪ್ರಯತ್ನದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಒಳ್ಳೆಯ ಸಿನಿಮಾ ನೀಡಬೇಕು, ತನ್ನ ಅಭಿನಯ ಕಲೆಯನ್ನು ತೆರೆಯ ಮೇಲೆ ತೋರಿಸಬೇಕು ಎಂದು ಕನಸು ಹೊತ್ತು ನಟರಾಜ್ ಅವರು ‘ಕರಿಕಾಡ’ ಸಿನಿಮಾ ಮೂಲಕ ನಾಯಕನಾಗಿ, ಕತೆಗಾರನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈಗಾಗಲೇ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್ ಗಮನ ಸೆಳೆಯುವಂತಿದೆ.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್, ರಜೆ ಸಿಕ್ಕಾಗೆಲ್ಲ ನಟನೆ ಮಾಡಿ, ಬರೋಬ್ಬರಿ ಒಂದು ವರ್ಷ ತೆಗೆದುಕೊಂಡು ಸಿನಿಮಾ ಪೂರ್ಣಗೊಳಿಸಿದ್ದಾರೆ. ನಟರಾಜ್ ಅವರ ಸಿನಿಮಾ ಪ್ರಯತ್ನಕ್ಕೆ ಅವರ ಪತ್ನಿ ದೀಪ್ತಿ ದಾಮೋದರ್ ಬೆಂಬಲವಾಗಿ ನಿಂತಿದ್ದು, ಸಿನಿಮಾ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಅವರು ಮಾತ್ರವೇ ಅಲ್ಲದೆ ಸ್ನೇಹಿತರಾದ ರವಿ ಸಹ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಸುಳ್ಳು ಹೇಳಿ ಕನ್ನಡ ಸಿನಿಮಾ ಮಾಡಿದ್ದ ‘ಮಣಿರತ್ನಂ’; ಸಿಕ್ಕಿತ್ತು ದೊಡ್ಡ ಯಶಸ್ಸು

ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಗಿಲ್ಲಿ ವೆಂಕಟೇಶ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಹುಲಿಬೇಟೆ’ ಅನ್ನೋ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನೆಗೆಟಿವ್ ರೋಲ್ ಸಹ ಮಾಡಿದ್ದಾರೆ. ‘ತಾಳಟ್ಟಿ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿರುವ ಗಿಲ್ಲಿ ವೆಂಕಟೇಶ್ ‘ಕರಿಕಾಡ’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ನಿರೀಕ್ಷಾ ಶೆಟ್ಟಿ ಅವರು ನಾಯಕಿಯಾಗಿ ನಟಿಸಿದ್ದಾರೆ.

ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಅವರುಗಳು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕ್ಯಾಮರಾ ಕೆಲಸ ಮಾಡಿರುವುದು ಜೀವನ್ ಗೌಡ. ಎಡಿಟಿಂಗ್ ಜವಾಬ್ದಾರಿ ದೀಪಕ್ ಸಿ.ಎಸ್ ಅವರದ್ದು. ಚಿಕ್ಕಮಗಳೂರು , ಕಳಸ , ಕುದುರೆ ಮುಖ , ಮಂಡ್ಯ , ಚೆನ್ನರಾಯ ಪಟ್ನ ಸೇರಿದಂತೆ ರಾಜ್ಯದ ಅನೇಕ ರಮಣಿ ಸ್ಥಳಗಳಲ್ಲಿ ‘ಕರಿಕಾಡ’ ಚಿತ್ರೀಕರಣವಾಗಿದೆ. ‘ಕರಿಕಾಡ’ ಅರಣ್ಯದಂಚಿನಲ್ಲಿ ವಾಸಿಸುವ ಗ್ರಾಮಸ್ಥರ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಥ್ರಿಲ್ಲಿಂಗ್ ಅಂಶಗಳ ಜೊತೆಗೆ ಸಖತ್ ಆಕ್ಷನ್ ಸಹ ಇರುವುದು ಟೀಸರ್​ನಿಂದ ತಿಳಿದು ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 pm, Sat, 7 June 25