AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಜೂನ್​ 08 ರಿಂದ ಜೂನ್​ 14ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜೂನ್ ತಿಂಗಳ ಎರಡನೇ ವಾರ 08-06-2025ರಿಂದ 04-06-2025ರವರೆಗೆ ಇರಲಿದೆ. ಗ್ರಹನಾಯಕನಾದ ರವಿಯು ವೃಷಭದಲ್ಲಿ ಇದ್ದಾನೆ. ಉಚ್ಚಸ್ಥಾನದಿಂದ ಮುಂದೆ ಸಾಗಿದ್ದು ಶತ್ರುವಿನ ಸ್ಥಾನದಲ್ಲಿ ಇದ್ದಾನೆ. ಹಾಗಾಗಿ ರವಿಯಿಂದ ನಷ್ಟಗಳೇ ಸಂಭವಿಸುವ ಸಾಧ್ಯತೆ ಹೆಚ್ಚು. ಅಂತಹ ರವಿಯಿಂದ ತೊಂದರೆ ಬಾರದಂತೆ ನಿಯಂತ್ರಣ ಮಾಡಿಕೊಳ್ಳಲು ಸೂರ್ಯ ಕವಚವನ್ನು ಸೂರ್ಯೋದಯಕ್ಕಿಂತಲೂ ಮೊದಲು ಪಠಿಸಿ.

Weekly Horoscope: ಜೂನ್​ 08 ರಿಂದ ಜೂನ್​ 14ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 08, 2025 | 1:41 AM

Share

ಜೂನ್ ತಿಂಗಳ ಎರಡನೇ ವಾರ 08-06-2025ರಿಂದ 14-06-2025ರವರೆಗೆ ಇರಲಿದೆ. ಗ್ರಹನಾಯಕನಾದ ರವಿಯು ವೃಷಭದಲ್ಲಿ ಇದ್ದಾನೆ. ಉಚ್ಚಸ್ಥಾನದಿಂದ ಮುಂದೆ ಸಾಗಿದ್ದು ಶತ್ರುವಿನ ಸ್ಥಾನದಲ್ಲಿ ಇದ್ದಾನೆ. ಹಾಗಾಗಿ ರವಿಯಿಂದ ನಷ್ಟಗಳೇ ಸಂಭವಿಸುವ ಸಾಧ್ಯತೆ ಹೆಚ್ಚು. ಅಂತಹ ರವಿಯಿಂದ ತೊಂದರೆ ಬಾರದಂತೆ ನಿಯಂತ್ರಣ ಮಾಡಿಕೊಳ್ಳಲು ಸೂರ್ಯ ಕವಚವನ್ನು ಸೂರ್ಯೋದಯಕ್ಕಿಂತಲೂ ಮೊದಲು ಪಠಿಸಿ.

ಮೇಷ ರಾಶಿ: ಜೂನ್ ತಿಂಗಳ ಎರಡನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಅಶುಭ. ಆಲಂಕಾರಿಕ ವಸ್ತುಗಳಿಗೆ ಧನವ್ಯಯ. ಸುಖವೂ ಹಾಳಗುವ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ನೀಡಿದರೆ ಒಳ್ಳೆಯದು. ಆಗಬೇಕಾಗಿರುವ ಕೆಲಸದ ಬಗ್ಗೆ ಗಮನ ಹರಿಸಿ ಮುಗಿಸುವುದು ಒಳ್ಳೆಯದು. ಸಂಬಂಧಗಳನ್ನು ಸರಿಯಾಗಿ ಹಾಳು ಮಾಡಿಕೊಳ್ಳುವುದು. ಅತಿಯಾದ ಸಲುಗೆಯು ದುರ್ಬಳಕೆಯಾದೀತು. ನಿಮ್ಮನ್ನು ನೆಚ್ಚುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಅಶುಭ. ರವಿಯು ನಿಮ್ಮ ರಾಶಿಯಲ್ಲಿ ಇದ್ದು ಆಯಾಸವನ್ನು ಹೆಚ್ಚಿಸುವನು. ಎಲ್ಲ ವಿಚಾರಕ್ಕೂ ಕ್ರೋಧ ಬರಬಹುದು. ಮನೋರಂಜನೆಗೆ ಅಧಿಕ ಸಮಯವನ್ನು ನೀವು ನೋಡುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ಚಿಂತಿತಕಾರ್ಯವು ಸಾಧ್ಯವಾಗಬಹುದು. ನಿಮ್ಮ ಯಶಸ್ಸನ್ನು ಸಹಿಸಲಾಗದೇ ನೊಂದುಕೊಳ್ಳುವರು. ಅದನ್ನು ಲೆಕ್ಕಿಸದೇ ಮುಂದುವರಿಯಿರಿ. ದಾಂಪತ್ಯದಲ್ಲಿ ವಿವಾದವಾಗಬಹುದು. ಬೆಳಗಿನ ಉತ್ಸಾಹವು ಸಂಜೆಯವರೆಗೂ ಇರಲಿದೆ. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯವನ್ನು ನಷ್ಟ ಮಾಡಿಕೊಳ್ಳುವುದು ಬೇಡ. ಗುರುಚರಿತ್ರೆಯ ಭಾಗವನ್ನು ಪಠಿಸಿ.

ಮಿಥುನ ರಾಶಿ: ಜೂನ್ ತಿಂಗಳಲ್ಲಿ ಎರಡನೇ ವಾರದಲ್ಲಿ ನಿಮಗೆ ಅಶುಭ. ಆರ್ಥಿಕ ಹಾನಿಯಾಗಿಲಿದೆ. ನೀವಂದುಕೊಂಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು. ಇಲ್ಲವಾದರೆ ಎಲ್ಲ ಕಡೆಯೂ ಇದೇ ಸ್ಥಿತಿ ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗಬಹುದು. ಯಾವುದನ್ನು ಹೇಗೆ ಮಾಡಬೇಕು ಎಂಬ ವಿಧಾನ ಗೊತ್ತಾಗದು. ಸಂಬಂಧಗಳು ಸಡಿಲವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿರುತ್ತದೆ. ಆರ್ಥಿಕತೆಯ ದೃಷ್ಟಿಯಿಂದ ನೀವು ಕಳೆದುಕೊಂಡಿದ್ದು ಬಹಳ ಆಗಿರುತ್ತದೆ. ಬಹಳ ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸವು ವ್ಯರ್ಥವಾಗು ಸಂಭವವಿದೆ. ಮಹೇಶ್ವರನ ಸ್ತೋತ್ರವನ್ನು ಪ್ರಾತಃಕಾಲದಲ್ಲಿ ಮಾಡಿ.

ಕರ್ಕಾಟಕ ರಾಶಿ: ಈ ತಿಂಗಳ ಎರಡನೇ ವಾರದಲ್ಲಿ ರವಿಯಿಂದ ನಿಮಗೆ ಬಯಸಿದ ಅಥವಾ ಬಯಸದೇ ಇರುವ ಸ್ಥಾನಗಳು ಸಿಗಲಿವೆ. ಅದರಲ್ಲಿಯೂ ವಿಶೇಷವಾಗಿ ಸರ್ಕಾರದ ಉದ್ಯೋಗದಲ್ಲಿ ಇದ್ದವರಿಗೆ ಇದು ಪ್ರಾಪ್ತವಾಗಲಿದೆ. ವೃತ್ತಿಯ ಬಗ್ಗೆ ಗೌರವ ಇರಲಿ. ನಿಮ್ಮ ವಾದವು ಸರಿ ಇದ್ದರೂ ವ್ಯಕ್ತಪಡಿಸುವ ರೀತಿಯಿಂದ ಅದು ಭಿನ್ನವೆನಿಸಬಹುದು. ಕಣ್ಣಿನ ಸಮಸ್ಯೆಗಳು ಉಂಟಾಗಬಹುದು ವೈದ್ಯರ ಸಲಹೆ ಪಡೆದು ಚಿಕಿತ್ಸೆಯನ್ನು ಮಾಡಿಕೊಳ್ಳುವಿರಿ. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ಸುದ್ದಿಯು ಬರಬಹುದು. ಸುಮ್ಮನಿರುವ ಶತ್ರುಗಳನ್ನು ಏನನ್ನಾದರೂ ಹೇಳಿ ಎಬ್ಬಿಸಬೇಡಿ. ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಲು ಆದ್ಯತೆ ನೀಡಿ.

ಸಿಂಹ ರಾಶಿ: ಈ ವಾರದಲ್ಲಿ ಸೂರ್ಯನು ದಶಮದಲ್ಲಿ ಇದ್ದು ನಿಮಗೆ ಕರ್ಮಸಿದ್ಧಿಯನ್ನು ನೀಡುವನು. ಅಪೂರ್ಣವಾದ ಕಾರ್ಯ ಅಥವಾ ಮಾಡಬೇಕೆಂದುಕೊಂಡ ಕಾರ್ಯವು ಬಹುಬೇಗ ಮುಕ್ತಾಯವಾಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ವಿಪರೀತ ವರ್ತನೆಯಾದರೆ ಸ್ಥಾನಭ್ರಷ್ಟವಾಗುವ ಭಯವು ನಿಮಗೆ ಕಾಡುವುದು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ದಾಖಲೆಗಳ‌ ವಿಚಾರದಲ್ಲಿ ಸರಿಯಾಗಿರಿ. ಕುಟುಂಬದಲ್ಲಿ ನಿಮ್ಮ ಕುರಿತು ಬೇಸರ ಉಂಟಾಗಬಹುದು. ಸುಬ್ರಹ್ಮಣ್ಯನ ಸ್ತುತಿಯನ್ನು ಮಾಡಿ.

ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಅಶುಭ. ಧಾರ್ಮಿಕ ಕಾರ್ಯಗಳಿಗೆ ಎಲ್ಲಿಂದಲಾದರೂ ಅಡಚಣೆ ಬರಲಿದೆ. ಇದು ಮಕ್ಕಳ‌ ಮೇಲೆ ಬೇರೆ ಪರಿಣಾಮವನ್ನು ಬೀರಬಹುದು. ದೈವದ ಬಗ್ಗೆ ಆಸಕ್ತಿ, ಶ್ರದ್ಧೆ, ಭಕ್ತಿಗಳಿದ್ದರೂ ಪ್ರಕಟವಾಗಲಾರದು. ಸಂಬಂಧವನ್ನು ಉಳಿಸಿಕೊಳ್ಳಲು ನೀವು ಹಣವನ್ನು ವ್ಯಯಿಸಬೇಕಾಗಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ತೆಗೆದುಕೊಳ್ಳುವಿರಿ. ನಿಮಗೆ ಪಾಪಪ್ರಜ್ಞೆ ಕಾಡಬಹುದು. ಅದಕ್ಕೋಸ್ಕರ ಪಶ್ಚಾತ್ತಾಪ ಪಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂದು ಬುದ್ಧಿಯು ಊಹಿಸುತ್ತದೆ. ನೆಮ್ಮದಿ ಬೇಕಾದ ಎಲ್ಲ ಸಂಗತಿಗಳು ಇದ್ದರೂ ಚಿಂತೆ ಕಾಡಿಸಬಹುದು. ಸಕಾರಾತ್ಮಕ ಆಲೋಚನೆ ಇರಲಿ.

ತುಲಾ ರಾಶಿ: ರವಿಯು ಅಷ್ಟಮದಲ್ಲಿ ಇದ್ದು ರೋಗದ ಭಯವು ಕಾಣಿಸುವುದು. ಸರ್ಕಾರದಿಂದ ಹಣಕಾಸಿಗೆ ಸಂಬಂಧಿಸಿದ ಭಯವಾಗುವುದು. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಪ್ರಯತ್ನವೂ ಇರಲಿ. ಉದ್ಯೋಗದ ಕಾರಣದಿಂದ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ತುಂಬಾ ದಿನಗಳಿಂದ ನಡೆಯುತ್ತಿರುವ ಕುಟುಂಬದ ಶೀತಲ ಕಲಹವು ನಿಮಗೆ ಬೇಸರ ತರುತ್ತದೆ. ಅದನ್ನು ಮುಗಿಸಲು ನಾನಾ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ.

ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಅಶುಭ. ಉದರ ರೋಗದ ಭೀತಿಯಿರುವುದು. ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ‌ ಸೂಚನೆ ಬರಬಹುದು. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ಪರರಲ್ಲಿ ಏನನ್ನಾದರೂ ಬೇಡುವ ಸ್ಥಿತಿಬರಲಿದೆ. ನಿಮ್ಮ ಮೇಲೆ ಸಹೋದ್ಯೋಗಿಗಳು ಸಲ್ಲದ ಅಪವಾದವನ್ನು ಮಾಡಿಯಾರು. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ನೀವೂ ಬಹಳ ಉತ್ಸುಕರಾಗಿರುವಿರಿ. ವ್ಯಾಪಾರವು ನಿಮಗೆ ಲಾಭಾಂಶವನ್ನು ಕಡಿಮೆ‌ ಮಾಡೀತು. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಯನ್ನು ಮಾಡುವಿರಿ. ನಿಮಗೆ ಕುಟುಂಬದ ಬೆಂಬಲವಿದ್ದು, ಧೈರ್ಯವಾಗಿ ಮುನ್ನಡೆಯುವಿರಿ.

ಧನು ರಾಶಿ: ಜೂನ್ ತಿಂಗಳ ಈ ವಾರದಲ್ಲಿ ನಿಮಗೆ ಶುಭ. ಬಂದ ರೋಗಗಳು ನಿಮ್ಮಿಂದ ದೂರಾಗಿ, ಮಾನಸಿಕ ನೆಮ್ಮದಿ ಸಿಗಲಿದೆ. ಮಾತ್ರವಲ್ಲ ಶತ್ರುಗಳನ್ನೂ ಇಲ್ಲದಂತೆ ರವಿಯು ಮಾಡುವನು. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಚಾಡಿಯಿಂದ ಯಾರನ್ನಾದರೂ ಹಾಳು ಮಾಡುವ ಕೆಲಸವು ನಿಮ್ಮಿಂದ ಆದೀತು. ನೀವು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ನಿಮ್ಮ ಮನಸ್ಸು ಬಹಳ ಸಂತೋಷದಿಂದ ಇರಲಿದೆ. ಸಹೋದರಿಯು ನಿಮಗೆ ಧನಸಹಾಯವನ್ನು ಮಾಡುವರು. ಆದರೆ ದುಂದು ವೆಚ್ಚಗಳನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ವರ್ತನೆಯು ಬಹಳ ಅಚ್ಚರಿ ಎನಿಸೀತು.

ಮಕರ ರಾಶಿ: ಈ ತಿಂಗಳು ನಿಮಗೆ ಅಶುಭ. ಪಂಚಮದ ರವಿಯು ಆರ್ಥಿಕ ವಿಚಾರದಲ್ಲಿ ಉದ್ವೇಗ ಉಂಟುಮಾಡುವನು. ಆರಂಭಿಸಿದ ಕಾರ್ಯಕ್ಕೆ ಹಣಕಾಸಿನ ಕೊರತೆ ಕಸಣಿಸುವುದು ಹಾಗೂ ಯಾರಿಂದಲಾದರೂ ಸಹಾಯ ದೊರೆಯಬಹುದು ಎಂಬ ಅತಿಯಾದ ನಿರೀಕ್ಷೆ ಇರುವುದು. ನಿಮಗೆ ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಬೇಸರದಿಂದ ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾವಲಂಬನೆಯ ಕಡೆಯೇ ನಿಮ್ಮ ಆಲೋಚನೆಗಳು ಇರಲಿವೆ. ನಿಮ್ಮ ಗಮನಸೆಳೆದು ವಂಚಿಸುವ ಕೆಲಸವು ನಡೆಯಬಹುದು. ಜಾಗರೂಕತೆಯಿಂದ ಇರಿ. ಸಣ್ಣ ಆದಾಯವನ್ನು ನೀವು ಇಂದು ಪಡೆಯಬಹುದು. ಪ್ರವಾಸ ಮಾಡುವ ಮನಸ್ಸಾಗಲಿದೆ. ಸಾವಧಾನತೆ ನಿಮಗೆ ವರದಾನವಾಗಿದೆ. ಮೃತ್ಯುಂಜಯನ ಸ್ತೋತ್ರವನ್ನು ಮಾಡಿ.

ಕುಂಭ ರಾಶಿ: ಚತುರ್ಥದಲ್ಲಿ ರವಿಯಿದ್ದು ಅಶುಭ ನಿಮಗೆ. ಮನೆಯಿಂದ ದೂರವಿರುವಂತೆ ಮಾಡುವನು. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ತಂದೆಯಿಂದ ನಿಂದನೆಯಾಗಲಿದೆ. ಹೆಚ್ಚು ಆಯಾಸವಾಗುವ ಕೆಲಸವನ್ನು ನೀವು ಮಾಡುವಿರಿ. ಹಿರಿಯರ ಆಸೆಗಳನ್ನು ಪೂರ್ಣ ಮಾಡುವ ಮನಸ್ಸು ಬರಬಹುದು. ವ್ಯಾಧಿಯಿಂದ ಪೀಡಗೊಳಗಾಗಬಹುದು. ತುಂಬ ದಿನದ ಆಸ್ತಿಯ ವಿವಾದವು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯು ಮಧ್ಯಗತಿಯಲ್ಲಿ ಇರಲಿದೆ. ನಿಮ್ಮನ್ನು ಕಂಡು ಅವಮಾನಿಸುವವರಿಗೆ ತಕ್ಕ ಉತ್ತರವನ್ನು ಕೊಡುವಿರಿ. ಹನುಮಂತನ ಸ್ಮರಣೆಯನ್ನು ಮಾಡಿ.

ಮೀನ ರಾಶಿ: ಜೂನ್ ತಿಂಗಳ ಎರಡನೇ ವಾರದಲ್ಲಿ ಬಯಸಿದ ಸ್ಥಾನಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ಬಂದ ಧನವನ್ನು ಒಳ್ಳೆಯ ಅನವಶ್ಯಕ ಖರೀದಿಗೆ ಬಳಸುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಕಡಿಮೆ ಆಗಬಹುದು. ಎಲ್ಲ ಸಮಯದಲ್ಲಿಯೂ ಸಂತೋಷದಿಂದ ಇರುವಿರಿ. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯನ್ನು ಇಟ್ಟುಕೊಳ್ಳುವರಿದ್ದಾರೆ. ನಿಮಗೆ ಬಹಳ ಕಾರ್ಯದ ಒತ್ತಡ ಇದ್ದರೂ ನೀವು ನಿಮ್ಮವರಿಗೆ ಸಮಯವನ್ನು ಕೊಡುವಿರಿ. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ. ಶಿವಕವಚವನ್ನು ಪಠಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)