PM Modi Speech in Australia: ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ಹಾನಿ ಉಲ್ಲೇಖ, ನಮ್ಮ ಸಂಬಂಧಗಳಿಗೆ ಯಾರೂ ಹಾನಿ ಮಾಡಲಾರರು: ಮೋದಿ

| Updated By: Digi Tech Desk

Updated on: May 24, 2023 | 9:09 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೂರು ದಿನಗಳ ಪ್ರವಾಸದಲ್ಲಿ ಆಸ್ಟ್ರೇಲಿಯಾದಲ್ಲಿದ್ದಾರೆ. ಬುಧವಾರ (ಮೇ 24) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

PM Modi Speech in Australia: ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ಹಾನಿ ಉಲ್ಲೇಖ, ನಮ್ಮ ಸಂಬಂಧಗಳಿಗೆ ಯಾರೂ ಹಾನಿ ಮಾಡಲಾರರು: ಮೋದಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೂರು ದಿನಗಳ ಪ್ರವಾಸದಲ್ಲಿ ಆಸ್ಟ್ರೇಲಿಯಾದಲ್ಲಿದ್ದಾರೆ. ಬುಧವಾರ (ಮೇ 24) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ದೇವಾಲಯಗಳ ಮೇಲಿನ ದಾಳಿಯಿಂದ ನಮ್ಮ ಸಂಬಂಧಗಳಿಗೆ ಎಂದೂ ಹಾನಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದ್ವಿಪಕ್ಷೀಯ ಸಭೆಯ ವೇಳೆ ಪ್ರಧಾನಿಯವರು ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿದ ಅವರು ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿಗಳು ಮತ್ತು ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ಬಗ್ಗೆ ನಾವು ಈ ಮೊದಲೇ ಮಾತನಾಡಿದ್ದೇವೆ ಇಂದೂ ಕೂಡ ಮಾತುಕತೆ ನಡೆಸಿದ್ದೇವೆ.

ಭಾರತ-ಆಸ್ಟ್ರೇಲಿಯಾ ಸಂಬಂಧಗಳನ್ನು ಅವರ ಆಲೋಚನೆಗಳು ಈ ಕೆಲವು ಕೃತ್ಯಗಳಿಂದ ಬದಲಾಗುವುದಿಲ್ಲ ಎಂದು ಭರವಸೆ ನೀಡಿದರು. ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಲ್ಬನೀಸ್ ಭರವಸೆ ನೀಡಿದರು.  ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಮತ್ತಷ್ಟು ಓದಿ: ಸಿಡ್ನಿಯಲ್ಲಿರುವ ಹ್ಯಾರಿಸ್ ಪಾರ್ಕ್​​ಗೆ ಮರು ನಾಮಕರಣ; ‘ಲಿಟಲ್ ಇಂಡಿಯಾ’ ಗೇಟ್‌ವೇಗೆ ಮೋದಿ ಶಂಕುಸ್ಥಾಪನೆ

ಸಭೆಯ ನಂತರ ಎರಡೂ ದೇಶಗಳು ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದವು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಂಟನಿ ಅಲ್ಬನೀಸ್ ಅವರನ್ನು ಕ್ರಿಕೆಟ್ ವಿಶ್ವಕಪ್‌ ಸಂದರ್ಭದಲ್ಲಿ ಭಾರತಕ್ಕೆ ಬರುವಂತೆ ಆಹ್ವಾನಿಸಿದರು. ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಪ್ರಧಾನಿ ಮೋದಿ ಅವರು, ಕ್ರಿಕೆಟ್ ವಿಷಯದಲ್ಲಿ, ನಮ್ಮ ಮತ್ತು ಆಸ್ಟ್ರೇಲಿಯಾದ ಸಂಬಂಧಗಳು ಟಿ 20 ಮೋಡ್‌ಗೆ ಬದಲಾಗಿವೆ. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವು ಎರಡು ದೇಶಗಳ ನಡುವೆ ಜೀವಂತ ಸೇತುವೆಯಾಗಿದೆ.

ಇಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗಿದೆ. ದಶಕದಲ್ಲಿ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬಗ್ಗೆ ಮಾತನಾಡಿದರು. ಹೊಸ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಸಾಧ್ಯತೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:02 am, Wed, 24 May 23