ನವದೆಹಲಿ: ಇತ್ತೀಚೆಗಷ್ಟೇ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 22ರಂದು ಅವರು ಅಮೆರಿಕದ ಸಂಸತ್ನ (United States Congress) ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವಿಚಾರವಾಗಿ ಅಮೆರಿಕ ಕಾಂಗ್ರೆಸ್‌ನ ಉನ್ನತ ನಾಯಕರು ಶುಕ್ರವಾರ ಪ್ರಕಟಣೆ ಹೊರಡಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೆನೆಟ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ನಿಮ್ಮನ್ನು (ಮೋದಿ) ಆಹ್ವಾನಿಸುತ್ತಿರುವುದು ನಮಗೆ ಗೌರವದ ವಿಚಾರವಾಗಿದೆ ಎಂದು ಅಮೆರಿಕ್ ಕಾಂಗ್ರೆಸ್‌ನ ಪ್ರಕಟಣೆ ತಿಳಿಸಿದೆ. ಈ ಪ್ರಕಟಣೆಗೆ ಅಮೆರಿಕ ಸಂಸತ್ನ ಸ್ಪೀಕರ್ ಕೆವಿನ್ ಮೆಕ್ಕಾರ್ತಿ, ಸೆನೆಟ್ ಬಹುಮತದ ನಾಯಕ ಚಕ್ ಶುಮರ್, ಸೆನೆಟ್‌ನ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಹಾಗೂ ಡೆಮಾಕ್ರಟಿಕ್ ಹಕೀಮ್ ಜೆಫ್ರೀಸ್ ಅವರ ಸಹಿ ಇದೆ.
ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮೋದಿ ಮಾತನಾಡುತ್ತಿರುವುದು ಇದು ಎರಡನೇ ಬಾರಿ ಆಗಿದೆ.
ಜೂನ್ 22ರಂದು ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಔತಣಕೂಟವನ್ನೂ ಆಯೋಜಿಸಿದ್ದಾರೆ.
ಇದನ್ನೂ ಓದಿ: Narendra Modi: 3 ರಾಷ್ಟ್ರಗಳ ಪ್ರವಾಸ ಮುಗಿಸಿ ದೆಹಲಿಗೆ ಹಿಂದಿರುಗಿದ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
Prime Minister Narendra Modi to address a Joint Meeting of the United States Congress on June 22 during his state visit to the country. pic.twitter.com/yHBJN5Aoo3
— ANI (@ANI) June 2, 2023
ಇತ್ತೀಚೆಗಷ್ಟೇ ಮೋದಿ ಅವರು ಜಪಾನ್, ಪಪುವಾ ನ್ಯೂಗಿನಿ ಹಾಗೂ ಆಸ್ಟ್ರೇಲಿಯಾಕ್ಕೆ ಆರು ದಿನಗಳ ಐತಿಹಾಸಿಕ ಪ್ರವಾಸ ಕೈಗೊಂಡಿದ್ದರು. ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದರ ಜತೆಗೆ ಅನೇಕ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಿದ್ದರು. ಪ್ರವಾಸ ಮುಗಿಸಿ ಬಂದ ಬಳಿಕ ಅನುಭವ ಹಂಚಿಕೊಂಡಿದ್ದ ಅವರು, ಈ ಪ್ರವಾಸದಲ್ಲಿ ನನಗೆ ಲಭ್ಯವಾದ ಸಮಯವನ್ನು ನಾನು ದೇಶದ ಬಗ್ಗೆ ಮಾತನಾಡಲು ಹಾಗೂ ದೇಶದ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣವಾಗಿ ಬಳಸಿದ್ದೇನೆ. ಈಗ ಸವಾಲುಗಳು ದೊಡ್ಡದಾಗಿವೆ, ಈ ಸವಾಲುಗಳಿಗೆ ಸವಾಲು ಹಾಕುವುದು ನನ್ನ ಸ್ವಭಾವ ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ