Population Crisis: ಜಪಾನ್‌ನಲ್ಲಿ ಜನಸಂಖ್ಯೆ ಬಿಕ್ಕಟ್ಟು, ಜನನ ಪ್ರಮಾಣ ಕಡಿಮೆ
ಜಪಾನ್ಗೆ ಜನಸಂಖ್ಯೆ ಬಿಕ್ಕಟ್ಟು ಶುರುವಾಗಿದೆ, ಇಲ್ಲಿ ಜನಸಂಖ್ಯೆ ಕಡಿಮೆ ಇದೆ ಎಂಬುದು ಈ ದೇಶದ ದೊಡ್ಡ ಸಮಸ್ಯೆಯಾಗಿದೆ.
ಟೋಕಿಯೋ: ಜಪಾನ್‌ನಲ್ಲಿ (Japan) ಈಗ ದೊಡ್ಡ ಸಮಸ್ಯೆಯೊಂದು ಪ್ರಾರಂಭವಾಗಿದೆ, ಒಂದು ದೇಶಕ್ಕೆ ಜನಸಂಖ್ಯೆ ಹೆಚ್ಚಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಇದೀಗ ಜಪಾನ್ಗೆ ಜನಸಂಖ್ಯೆ ಬಿಕ್ಕಟ್ಟು (Population Crisis) ಶುರುವಾಗಿದೆ, ಇಲ್ಲಿ ಜನಸಂಖ್ಯೆ ಕಡಿಮೆ ಇದೆ ಎಂಬುದು ಈ ದೇಶದ ದೊಡ್ಡ ಸಮಸ್ಯೆಯಾಗಿದೆ. ಜನನ ಪ್ರಮಾಣವು 2022ರಲ್ಲಿ ಸತತ ಏಳನೇ ವರ್ಷಕ್ಕೆ ದಾಖಲೆಯ ಮಟ್ಟಕ್ಕೆ ಕುಸಿದಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ, ಜನಸಂಖ್ಯೆಯು ಕುಗ್ಗುತ್ತಿರುವಾಗ ಮತ್ತು ವೇಗವಾಗಿ ವಯಸ್ಸಾಗುತ್ತಿರುವುದನ್ನು ತಡೆಯಲು ಸಾಧ್ಯವಾಗದೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂತಾನೋತ್ಪತ್ತಿ ದರ, ಅಥವಾ ಜೀವಿತಾವಧಿಯಲ್ಲಿ ಮಹಿಳೆಗೆ ಜನಿಸಿದ ಮಕ್ಕಳ ಸರಾಸರಿ ಸಂಖ್ಯೆ 1.2565 ಆಗಿತ್ತು. ಇದು 2005ರ ಜನಸಂಖ್ಯೆಗೆ ಈ ಹಿಂದಿನ ಜನಸಂಖ್ಯೆಗೆ (1.2601) ರೊಂದಿಗೆ ಹೋಲಿಸಿದರೆ, ದೇಶದಲ್ಲಿ ಗಣನೀಯವಾಗಿ ಜನಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಇದೀಗ 2.07 ದರಕ್ಕಿಂತ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಜಪಾನ್ ಅಧ್ಯಕ್ಷ ಫ್ಯೂಮಿಯೊ ಕಿಶಿಡಾ ಅವರು ದೇಶದ ಸ್ಲೈಡಿಂಗ್ ಜನನ ದರವನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಿದ್ದಾರೆ ಮತ್ತು ಮಕ್ಕಳ ಪಡೆಯುವ ಮಹಿಳೆಯರಿಗೆ ಸರ್ಕಾರದ ಸೌಲಭ್ಯ ಸಾಲ ಮಾತ್ರವಲ್ಲದೆ ಮಕ್ಕಳ ಆರೈಕೆ ಮತ್ತು ಪೋಷಕರಿಗೆ ಬೆಂಬಲ ನೀಡುವ ಇತರ ಕ್ರಮಗಳಿಗಾಗಿ ವರ್ಷಕ್ಕೆ 3.5 ಟ್ರಿಲಿಯನ್ ಯೆನ್ ($25 ಬಿಲಿಯನ್) ಖರ್ಚು ಮಾಡಲು ಯೋಜಿಸಿದೆ.
2030ರ ವೇಳೆಗೆ ಯುವಕರ ಜನಸಂಖ್ಯೆ ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ. ಇದೀಗ 2030ರವರೆಗೆ ಪ್ರಮುಖ ಮಟ್ಟದಲ್ಲಿ ಜನ ಸಂಖ್ಯೆ ಕ್ಷೀಣಿಸಬಹುದು, ಅದಕ್ಕಾಗಿ ಇಂದಿನಿಂದಲ್ಲೇ ಅದನ್ನು ತಪ್ಪಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಡೇಕೇರ್ ಸೌಲಭ್ಯಕ್ಕೆ ಭೇಟಿ ನೀಡಿದಾಗ ಹೇಳಿದರು.
ಇದನ್ನೂ ಓದಿ:China Population: ಚೀನಾದ ಕನಸಿಗೆ ದೊಡ್ಡ ಹೊಡೆತ, 60 ವರ್ಷಗಳಲ್ಲೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತ
ಸಾಂಕ್ರಾಮಿಕ ರೋಗವು ಜಪಾನ್‌ನ ಜನಸಂಖ್ಯಾ ಸವಾಲುಗಳನ್ನು ಉಲ್ಬಣಗೊಳಿಸಿದೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನರು ಮದುವೆಯಾಗುತ್ತಿಲ್ಲ, ಮದುವೆಯಾದರು ಮಕ್ಕಳು ಮಾಡಿಕೊಳ್ಳುವ ಆಸಕ್ತಿ ತೋರುತ್ತಿಲ್ಲ. ಇದು ದೇಶಕ್ಕೆ ದೊಡ್ಡ ತಲೆ ನೋವಾಗಿದೆ. ಮತ್ತೊಂದು ಕಡೆ COVID-19 ಹೆಚ್ಚಿನ ಸಾವನ್ನಪ್ಪಿದ್ದಾರೆ. ಇದು ಇದಕ್ಕೆ ಮುಖ್ಯ ಕಾರಣವಾಗಿದೆ.
ಜಪಾನ್‌ನಲ್ಲಿ ನವಜಾತ ಶಿಶುಗಳ ಸಂಖ್ಯೆಯು ಕಳೆದ ವರ್ಷ 5% ರಷ್ಟು ಕುಸಿದು 770,747 ಕ್ಕೆ ತಲುಪಿದೆ, ಆದರೆ ಸಾವಿನ ಸಂಖ್ಯೆ 9% ರಷ್ಟು ಹೆಚ್ಚಾಗಿ 1.57 ಮಿಲಿಯನ್‌ಗೆ ತಲುಪಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಜಪಾನ್‌ನಲ್ಲಿ 47,000 ಕ್ಕೂ ಹೆಚ್ಚು ಸಾವುಗಳು ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿವೆ.
Published On - 5:55 pm, Fri, 2 June 23