ರೋಮ್‌ನ ಚರ್ಚ್​​ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ; ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಟ್ರಂಪ್, ಝೆಲೆನ್ಸ್ಕಿ ಭಾಗಿ

ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ವೇಳೆ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪ್ರಿನ್ಸ್ ವಿಲಿಯಮ್ಸ್ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಅಂತಿಮ ನಮನ ಸಲ್ಲಿಸಿ ವಿದಾಯ ಹೇಳಿದರು. ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಪೋಪ್​ಗೆ ಅಂತಿಮ ನಮನ ಸಲ್ಲಿಸಿದರು. ಸೇಂಟ್ ಪೀಟರ್ಸ್ ಬೆಸಿಲಿಕಾದ ಮುಂಭಾಗದಲ್ಲಿರುವ ವಿಶಾಲ ಚೌಕದಲ್ಲಿ 2,00,000ಕ್ಕೂ ಹೆಚ್ಚು ಜನರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಲ್ಲಿಯವರೆಗೆ, 10 ಆಳ್ವಿಕೆಯ ರಾಜರು ಸೇರಿದಂತೆ ಸುಮಾರು 50 ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ ಎಂದು ದೃಢಪಡಿಸಲಾಗಿದೆ.

ರೋಮ್‌ನ ಚರ್ಚ್​​ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ; ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಟ್ರಂಪ್, ಝೆಲೆನ್ಸ್ಕಿ ಭಾಗಿ
Pope Francis Last Rites

Updated on: Apr 26, 2025 | 8:50 PM

ರೋಮ್, ಏಪ್ರಿಲ್ 26: ರೋಮ್‌ನಲ್ಲಿರುವ ಪೋಪ್ ಫ್ರಾನ್ಸಿಸ್ (Pope Francis) ಅವರ ನೆಚ್ಚಿನ ಚರ್ಚ್ ಆದ ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾದಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್‌ನಿಂದ ಬೆಸಿಲಿಕಾಕ್ಕೆ ತರುವಾಗ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಲಕ್ಷಾಂತರ ಜನರು ಪೋಪ್ ಅವರಿಗೆ ನಮನ ಸಲ್ಲಿಸಿದರು. ರೋಮ್ ಚರ್ಚ್ ಒಳಗಿನ ಅಂತ್ಯಕ್ರಿಯೆ ಬಹಳ ಖಾಸಗಿ ಕಾರ್ಯಕ್ರಮವಾಗಿದ್ದು, ಅವರ ಹತ್ತಿರದವರಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ರೋಮ್ ಚರ್ಚ್ ಒಳಗೆ ಪೋಪ್ ಫ್ರಾನ್ಸಿಸ್ ಅವರನ್ನು ಸಮಾಧಿ ಮಾಡಲಾಗುವುದು. ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ಮಧ್ಯ ರೋಮ್‌ನಲ್ಲಿರುವ ಸೇಂಟ್ ಮೇರಿ ಮೇಜರ್ ಬೆಸಿಲಿಕಾದಲ್ಲಿ ಸಮಾಧಿ ಮಾಡಲಾಗಿದೆ ಎಂದು ವ್ಯಾಟಿಕನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ವೇಳೆ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪ್ರಿನ್ಸ್ ವಿಲಿಯಮ್ಸ್ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಅಂತಿಮ ನಮನ ಸಲ್ಲಿಸಿ ವಿದಾಯ ಹೇಳಿದರು.

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ


ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇಂಟ್ ಪೀಟರ್ಸ್ ಚೌಕದಲ್ಲಿ ಇಂದು ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ಗೋವಾ ವಿಧಾನಸಭೆಯ ಉಪ ಸ್ಪೀಕರ್ ಜೋಶುವಾ ಡಿಸೋಜಾ ಅವರು ಅಧಿಕೃತ ಭಾರತೀಯ ನಿಯೋಗದ ಭಾಗವಾಗಿದ್ದರು.


ಇದನ್ನೂ ಓದಿ: ಕೆಂಪು ಡ್ರೆಸ್, ಕೈಯಲ್ಲಿ ಜಪಮಾಲೆ; ತೆರೆದ ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್ ಮೊದಲ ಫೋಟೋ ಇಲ್ಲಿದೆ

ಸೋಮವಾರ ಮಾರಣಾಂತಿಕ ಪಾರ್ಶ್ವವಾಯು ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ 88 ವರ್ಷದ ಪೋಪ್ ಫ್ರಾನ್ಸಿಸ್ ಅವರನ್ನು ರೋಮ್‌ನ ಸೇಂಟ್ ಮೇರಿ ಮೇಜರ್ ಬೆಸಿಲಿಕಾದಲ್ಲಿ ಸಮಾಧಿ ಮಾಡಲಾಯಿತು. ಅವರು ಸುಮಾರು 1,300 ವರ್ಷಗಳಲ್ಲಿ ಮೊದಲ ಯುರೋಪಿಯನ್ ಅಲ್ಲದ ಪೋಪ್ ಆಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ