ಅರ್ಜೇಂಟೀನಾದಲ್ಲಿ ಸುಮಾರು 1 ಲಕ್ಷ ಸರ್ಕಾರಿ ನೌಕರಿಗೆ ದೊಡ್ಡ ಕತ್ತರಿ, ಕಾರಣ ಇದೇರಿ
ಸರ್ಕಾರಿ ಕಂಪನಿಗಳ ಖಾಸಗೀಕರಣವೇ ಇದಕ್ಕೆ ಕಾರಣ ಎನ್ನಲಾಗಿದೆ. ಅರ್ಜೆಂಟೀನಾ ಹೊಸ ಅಧ್ಯಕ್ಷರು ದೇಶವನ್ನು ಪುನರ್ರಚನೆ ಮಾಡುವ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಕಂಪನಿಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಜನರಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಹಿಂದಿರುಗಿಸುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವ ನಿಯಮಗಳನ್ನು ಬದಲಾಯಿಸುವುದು ಅವರ ಗುರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಅರ್ಜೆಂಟೀನಾದಲ್ಲಿ ಸರ್ಕಾರಿ ನೌಕರಿಗೆ ದೊಡ್ಡ ಕುತ್ತು: ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ (Argentine President Javier Milei) ರಾಜ್ಯದಲ್ಲಿ ಅಂದಾಜು 1 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲು (layoffs) ಯೋಜಿಸುತ್ತಿದ್ದಾರೆ. ಆದರೆ ಕಾರ್ಮಿಕ ಸಂಘಗಳಿಂದ ಇದಕ್ಕೆ ಭಾರೀ ಪ್ರತಿರೋಧ ಎದುರಾಗುವ ಸಾಧ್ಯತೆಯಿದೆ. ಅರ್ಜೆಂಟೀನಾದಲ್ಲಿ ಸಾರ್ವಜನಿಕ ವಲಯದಲ್ಲಿ 35 ಲಕ್ಷ ಉದ್ಯೋಗಿಗಳು ದುಡಿಯುತ್ತಿದ್ದಾರೆ. ಅಂದರೆ ಪ್ರಸ್ತಾವಿತ ನೌಕರರ ವಜಾಗೊಳಿಸುವಿಕೆಯು ಅದರ ಒಂದು ಸಣ್ಣ ಭಾಗ ಮಾತ್ರವೇ ಆಗಿದೆ. ಆದರೂ ಮಿಲೀ ಪ್ರಭಾವಿ ಕಾರ್ಮಿಕ ಸಂಘಗಳಿಂದ (labour unions) ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಅವರು ಮುಂಬರುವ ತಿಂಗಳುಗಳಲ್ಲಿ 70,000 ಸರ್ಕಾರಿ ನೌಕರರನ್ನು ವಜಾಗೊಳಿಸುವ ಉದ್ದೇಶವನ್ನು ಇತ್ತೀಚೆಗೆ ಘೋಷಿಸಿದ್ದಾರೆ. ಬ್ಲೂಮ್‌ಬರ್ಗ್ ವರದಿ ಮಾಡಿದಂತೆ ರಾಜ್ಯದ ವೆಚ್ಚ ಗಾತ್ರವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಅವರು ಈ ಆಕ್ರಮಣಕಾರಿ ಕಾರ್ಯತಂತ್ರ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.
ಜೇವಿಯರ್ ಮಿಲೀ ಉದ್ಯೋಗ ಕಡಿತದ ಯೋಜನೆ ಕುರಿತಾದ ಟ್ವಿಟ್ಟರ್ ಪೋಸ್ಟ್ ಹೀಗಿದೆ:
BREAKING: Bloomberg reports that Argentina’s President Javier Milei is planning to fire 70,000 government workers
— The Spectator Index (@spectatorindex) March 27, 2024
ಸರ್ಕಾರಿ ಕಂಪನಿಗಳ ಖಾಸಗೀಕರಣವೇ ಇದಕ್ಕೆ ಕಾರಣ:
ಅರ್ಜೆಂಟೀನಾ ಹೊಸ ಅಧ್ಯಕ್ಷರು ದೇಶವನ್ನು ಪುನರ್ರಚನೆ ಮಾಡುವ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಕಂಪನಿಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಜನರಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಹಿಂದಿರುಗಿಸುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವ ನಿಯಮಗಳನ್ನು ಬದಲಾಯಿಸುವುದು ಅವರ ಗುರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: Nelore cow sale in Brazil – ನೆಲ್ಲೂರು ಹಸು ಬ್ರೆಜಿಲ್‌ನಲ್ಲಿ 40 ಕೋಟಿ ರೂಪಾಯಿಗೆ ಮಾರಾಟವಾಯಿತು! ಏನಿದರ ದಾಖಲೆ?
ಅರ್ಜೆಂಟೀನಾದ ಅಧ್ಯಕ್ಷರು ದೇಶದಲ್ಲಿ ಸುಮಾರು 300 ಬದಲಾವಣೆಗಳನ್ನು ಮಾಡಲಿದ್ದಾರೆ. ಅನೇಕ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸುವುದು, ಬಾಡಿಗೆದಾರರು, ಉದ್ಯೋಗಿಗಳು ಮತ್ತು ಅಂಗಡಿಯವರಿಗೆ ಅನುಕೂಲಕರವಾದ ನಿಯಮಗಳನ್ನು ಮಾಡುವುದು, ಇಂಧನ ಮತ್ತು ಸಾರಿಗೆ ಸಬ್ಸಿಡಿಗಳನ್ನು ಕಡಿಮೆ ಮಾಡುವುದು ಮತ್ತು ಕೆಲವು ಸರ್ಕಾರಿ ಸಚಿವಾಲಯಗಳನ್ನು ಮುಚ್ಚುವುದು ಈ ನಿರ್ಧಾರಗಳ ಪೈಕಿ ಪ್ರಮುಖವಾಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Wed, 27 March 24