
ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ, ಮೊದಲೇ ನಿಗದಿಯಾಗಿರುವಂತೆ ಈಜಿಪ್ಟ್ ದೇಶಕ್ಕೆ ಭೇಟಿ ನೀಡಿದ್ದಾರೆ, ಇದೀಗ ಮೋದಿ ಈಜಿಪ್ಟ್ನ ರಾಜಧಾನಿ ಕೈರೋಗೆ ಬಂದಿಳಿದಿದ್ದಾರೆ. ಮೋದಿ ಈಜಿಪ್ಟ್ನಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದು. 26 ವರ್ಷಗಳ ನಂತರ ಈಜಿಪ್ಟ್ಗೆ ಭಾರತದ ಪ್ರಧಾನಿ ದ್ವಿಪಕ್ಷೀಯ ಭೇಟಿ ನೀಡುತ್ತಿರುವುದು ಮೊದಲು ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಅವರನ್ನು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಎಲ್-ಸಿಸಿ ಅವರು ತನ್ನ ದೇಶಕ್ಕೆ ಆಹ್ವಾನಿಸಿದ್ದು, ಅವರೊಂದಿಗೆ ಮೋದಿ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಬಗ್ಗೆ ಮತ್ತು ದ್ವಿಪಕ್ಷೀಯ ಸಂಬಂಧಗಳು, ಹಲವು ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ, ಇಬ್ಬರು ನಾಯಕರು ನಾಳೆ (ಜೂ.24) ಮಹತ್ವದ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ:PM Modi in US: ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮಾತು; ಅಮೆರಿಕ ಅಧ್ಯಕ್ಷರನ್ನ ಹಾಡಿ ಹೊಗಳಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ನಂತರ ಶನಿವಾರ ಈಜಿಪ್ಟ್ಗೆ ಬಂದಿದ್ದು, ಮೋದಿ ಟ್ವಿಟರ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಈಜಿಪ್ಟ್ಗೆ ಭೇಟಿ ನೀಡುವ ಸಂದರ್ಭದಲ್ಲಿ, ಕಾಮನ್ವೆಲ್ತ್ ಸ್ಥಾಪಿಸಿದ ಸ್ಮರಣಾರ್ಥ ಸ್ಥಳವಾದ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಈ ಸ್ಮಾರಕವು ಮೊದಲು ವಿಶ್ವ ಯುದ್ಧದ ಸಮಯದಲ್ಲಿ ಈಜಿಪ್ಟ್ನಲ್ಲಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ 3,799 ಭಾರತೀಯ ಸೈನಿಕರನ್ನು ಇಲ್ಲಿ ವಿಶೇಷವಾಗಿ ಗೌರವಿಸಲಾಗಿದೆ.
ಪ್ರಧಾನಿ ಮೋದಿ ಅವರು 11ನೇ ಶತಮಾನದ ಐತಿಹಾಸಿಕ ಮಸೀದಿ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ದಾವೂದಿ ಬೊಹ್ರಾ ಸಮುದಾಯದ ಬೆಂಬಲದೊಂದಿಗೆ ಈ ಮಸೀದಿಯನ್ನು ಪುನಃಸ್ಥಾಪಿಸಲಾಗಿದೆ. ಇದಲ್ಲದೆ, ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ಈಜಿಪ್ಟ್ನಲ್ಲಿ ನೆಲೆಸಿರುವ ಭಾರತೀಯರನ್ನು ಭೇಟಿ ಮಾಡಲಿದ್ದು, ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Sat, 24 June 23