ಕೋಟಿ ಕೋಟಿ ಪಿಂಚಣಿ ಹಣ ಬಂದಾಕ್ಷಣ ಒಬ್ಬನೇ ಇರ್ತೀನೆಂದು ಪತ್ನಿ ಬಿಟ್ಟು ಹೋಗಿದ್ದ ವ್ಯಕ್ತಿ, ಆಮೇಲೇನಾಯ್ತು?

ಸಾಮಾನ್ಯವಾಗಿ ನಿವೃತ್ತಿ ಜೀವನವನ್ನು ಪಿಂಚಣಿ(Pension)ಹಣದಲ್ಲಿ ಅಚ್ಚುಕಟ್ಟಾಗಿ ತಮ್ಮ ಸಂಗಾತಿ ಜತೆಗೆ ಕಳೆಯಲು ಜನ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ನಿವೃತ್ತಿ ಹೊಂದಿದ ತಕ್ಷಣ ಪಿಂಚಣಿ ಹಣ ಕೈಗೆ ಬರುತ್ತಿದ್ದಂತೆ. ತಾನು ಒಂಟಿಯಾಗಿ ಜೀವನ ಸಾಗಿಸಬೇಕು ಎಂದು ಬಯಸಿದ್ದಾರೆ.ಟೆಟ್ಸು ಯಮಡಾ ಎಂಬುವವರು ನಿವೃತ್ತಿ ಹೊಂದಿದ್ದಾರೆ. ಅವರಿಗೆ ಸುಮಾರು 3 ಕೋಟಿ ರೂ. ಪಿಂಚಣಿ ಹಣ ಬಂದಿದೆ. ಅವರು ಪತ್ನಿಯಿಂದ ಪ್ರತ್ಯೇಕವಾಗಿರಲು ಬಯಸಿದ್ದಾರೆ.

ಕೋಟಿ ಕೋಟಿ ಪಿಂಚಣಿ ಹಣ ಬಂದಾಕ್ಷಣ ಒಬ್ಬನೇ ಇರ್ತೀನೆಂದು ಪತ್ನಿ ಬಿಟ್ಟು ಹೋಗಿದ್ದ ವ್ಯಕ್ತಿ, ಆಮೇಲೇನಾಯ್ತು?
ನಿವೃತ್ತಿ(ಸಾಂದರ್ಭಿಕ ಚಿತ್ರ)
Image Credit source: Japan For Sustainability

Updated on: Aug 18, 2025 | 11:09 AM

ಜಪಾನ್, ಆಗಸ್ಟ್​ 18: ಸಾಮಾನ್ಯವಾಗಿ ನಿವೃತ್ತಿ ಜೀವನವನ್ನು ಪಿಂಚಣಿ(Pension)ಹಣದಲ್ಲಿ ಅಚ್ಚುಕಟ್ಟಾಗಿ ತಮ್ಮ ಸಂಗಾತಿ ಜತೆಗೆ ಕಳೆಯಲು ಜನ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ನಿವೃತ್ತಿ ಹೊಂದಿದ ತಕ್ಷಣ ಪಿಂಚಣಿ ಹಣ ಕೈಗೆ ಬರುತ್ತಿದ್ದಂತೆ. ತಾನು ಒಂಟಿಯಾಗಿ ಜೀವನ ಸಾಗಿಸಬೇಕು ಎಂದು ಬಯಸಿದ್ದಾರೆ.

ಘಟನೆ ಏನು?

ಟೆಟ್ಸು ಯಮಡಾ ಎಂಬುವವರು ನಿವೃತ್ತಿ ಹೊಂದಿದ್ದಾರೆ. ಅವರಿಗೆ ಸುಮಾರು 3 ಕೋಟಿ ರೂ. ಪಿಂಚಣಿ ಹಣ ಬಂದಿದೆ. ಅವರು ಪತ್ನಿಯಿಂದ ಪ್ರತ್ಯೇಕವಾಗಿರಲು ಬಯಸಿದ್ದಾರೆ. ಗೃಹಿಣಿಯಾಗಿದ್ದ ತನ್ನ ಪತ್ನಿ ಕೀಕೊಗೆ ಸರಳ ಜೀವನ ನಡೆಸಲು ತನ್ನ ಊರಿಗೆ ತೆರಳುವಂತೆ ಸೂಚಿಸಿದ್ದರು. ಆದರೆ ನಗರಕ್ಕೆ ಹೊಂದಿಕೊಂಡಿದ್ದ ಆಕೆ ತೆರಳಲು ನಿರಾಕರಿಸಿದ್ದರು. ಟೋಕಿಯೊದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪುತ್ರರು ಕೂಡ ತಾವು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದರು.

ಯಮಡಾ ಮತ್ತು ಕೀಕೊ ನಡುವೆ ಉದ್ವಿಗ್ನತೆ ಹೆಚ್ಚಾದಂತೆ, ಯಮಡಾ ‘ಸೊಟ್ಸುಕಾನ್’ ಎಂಬ ಜಪಾನೀಸ್ ಪರಿಕಲ್ಪನೆಯನ್ನು ಸೂಚಿಸಿದರು. ಅದು ವಿವಾಹವಾದ ದಂಪತಿ ವಿಚ್ಛೇದನ ಪಡೆಯದೆ ಪ್ರತ್ಯೇಕವಾಗಿ ವಾಸಿಸುವ ಪರಿಕಲ್ಪನೆಯಾಗಿದೆ. ಈ ಕಲ್ಪನೆಯು ಮೊದಲು 2004 ರಲ್ಲಿ ಜಪಾನಿನ ಮಹಿಳಾ ಬರಹಗಾರ್ತಿಯೊಬ್ಬರು ಪರಿಚಯಿಸಿದ್ದರು.

ವಿಚ್ಛೇದನಕ್ಕೆ ಹೋಲಿಸಿದರೆ ಇದು ಸರಳವಾದ ಆಯ್ಕೆ ಎಂದು ಭಾವಿಸಿ ಯಮಡಾ ಒಪ್ಪಿಕೊಂಡರು. ಅವರು ಶೀಘ್ರದಲ್ಲೇ ಗ್ರಾಮಾಂತರಕ್ಕೆ ಏಕಾಂಗಿಯಾಗಿ ಹಿಂತಿರುಗಿ ತಮ್ಮ ಪಿಂಚಣಿ ಹಣವನ್ನು ಬಳಸಿಕೊಂಡು ಮನೆಯನ್ನು ನವೀಕರಿಸಿದರು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​​ನ ವರದಿ ಪ್ರಕಾರ, ಅವರು ಒಂಟಿಯಾಗಿ ಶಾಂತಿಯುತ ಜೀವನವನ್ನು ನಡೆಸಲು ಬಯಸಿದ್ದರು. ಆದರೆ ಅದ್ಯಾವುದೂ ನಡೆಯಲೇ ಇಲ್ಲ.

ಮತ್ತಷ್ಟು ಓದಿ: EPFO: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್

ಹೆಂಡತಿ ಜತೆಯಲ್ಲಿಲ್ಲದೆ ಕಷ್ಟ ಪಡಲು ಪ್ರಾರಂಭಿಸಿದ್ದರು. ಮನೆಗೆಲಸ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಸರಳ ಅಡುಗೆ ಮಾಡಿಕೊಳ್ಳುವುದರಲ್ಲಿಯೂ ವಿಫಲರಾಗಿದ್ದರು. ಇನ್​​ಸ್ಟಂಟ್ ನೂಡಲ್ಸ್​​ ಹಾಗೂ ತರಕಾರಿಗಳನ್ನು ತಿಂದು ಜೀವ ಉಳಿಸಿಕೊಂಡಿದ್ದರು.

ಆದರೆ ಇಲ್ಲಿ ಯಮುಡಾ ಕಷ್ಟ ಪಡುತ್ತಿದ್ದರೆ, ಅಲ್ಲಿ ಪತ್ನಿ ಕಿಕೋ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಂಡಿದ್ದಾರೆ. ಟೋಕಿಯೋದಲ್ಲಿ ತಮ್ಮ ಕೈಯಿಂದಲೇ ಸಿದ್ಧಪಡಿಸಿದ ಕರಕುಶಲ ವಸ್ತುಗಳ ಮಾರಾಟ ಮಳಿಗೆಯನ್ನು ಆರಂಭಿಸಿ ಖುಷಿಯಾಗಿದ್ದರು. ತಾನು ಇಲ್ಲದಿದ್ದರೂ ಆಕೆ ಸಂತೋಷವಾಗಿದ್ದಾಳೆ ಎನ್ನುವ ಅರಿವಾಗಿದೆ. ಆದರೆ ಆಕೆಯನ್ನು ಬಿಟ್ಟು ನಾನು ನೆಮ್ಮದಿಯಾಗಿರಲು ಬಯಸಿದ್ದೆ ಆದರೆ ನಾನೇ ಖುಷಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ತನ್ನ ನಿರ್ಧಾರಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ.

ಇಬ್ಬರೂ ಮೊಬೈಲ್​ನಲ್ಲಿ ಮಾತನಾಡುತ್ತಿದ್ದರೂ, ಮಕ್ಕಳೊಂದಿಗಿನ ಸಂಬಂಧ ಮುರಿದುಬಿದ್ದಿತ್ತು. ಅವರು ಮತ್ತೆ ತಮ್ಮ ಕುಟುಂಬದೊಂದಿಗೆ ವಾಸಿಸಲು ಟೋಕಿಯೊಗೆ ಮರಳಲು ಯೋಜಿಸುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಮಡಾ ಪತ್ನಿಯನ್ನು ತಾನು ಎರಡನೇ ಜೀವನವನ್ನು ಪ್ರಾರಂಭಿಸುತ್ತಿದ್ದೇನೆಂದು ಭಾವಿಸಿದ್ದರು, ಆದರೆ ಜೀವನದ ಕೌಶಲ್ಯ ತಿಳಿದಿರದೇ, ತನ್ನ ಕುಟುಂಬವನ್ನು ಬಿಟ್ಟು ಹೋಗಿರುವುದು ಒಂದು ದುರಂತವಾಗಿ ಪರಿಣಮಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:08 am, Mon, 18 August 25