ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಅವರು ತಮ್ಮ ಹಿರಿಯ ಸಚಿವರಲ್ಲಿ ಒಬ್ಬರಾದ ಬ್ರಿಟನ್ ಆಂತರಿಕ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ (Suella Braverman) ಅವರನ್ನು ತಮ್ಮ ಸಂಪುಟದಿಂದ ವಜಾಗೊಳಿಸಿದ್ದಾರೆ ಎಂದು ಸರ್ಕಾರದ ಮೂಲಗಳು ಇಂದು (ನ.13) ತಿಳಿಸಿದೆ. ಪ್ಯಾಲೇಸ್ಟಿನಿಯನ್ ಪರ ಮೆರವಣಿಗೆ ಮಾಡಿದ ಸಮಯದಲ್ಲಿ ಪೊಲೀಸರು ನಡೆದುಕೊಂಡ ರೀತಿಯನ್ನು ಸುಯೆಲ್ಲಾ ಬ್ರಾವರ್‌ಮನ್ ಟೀಕಿಸಿದ್ದಾರೆ. ಜತೆಗೆ ರಿಷಿ ಸುನಕ್ ವಿರುದ್ಧ ಹೇಳಿಕೆಯನ್ನು ಕೂಡ ನೀಡಿದರು. ಶನಿವಾರ ನಡೆದ ಮೆರವಣಿಗೆಯನ್ನು ಪೋಲೀಸರ ನಿರ್ವಹಣೆ ಮಾಡಿದ ರೀತಿಯ ಬಗ್ಗೆ ಒಂದು ಲೇಖನವನ್ನು ಕೂಡ ಬರೆದಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹೇಳಿಕೊಂಡಿದ್ದರು. ಇದು ಜನರ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಈ ಹೇಳಿಕೆ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಎಂದು ಸಂಪುಟ ಸದಸ್ಯರ ಒತ್ತಡಕ್ಕೆ ಮಣಿದು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಇನ್ನು ಬಿಬಿಸಿ ವರದಿಯ ಪ್ರಕಾರ ಸುನಕ್ ಅವರು ಸೋಮವಾರದಂದು ಕ್ಯಾಬಿನೆಟ್ ಪುನರ್ರಚನೆಯನ್ನು ಮಾಡಲಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಬ್ರೇವರ್‌ಮನ್ ಅವರನ್ನು ಬದಲಾಯಿಸಬಹುದು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಎಲ್ಲ ನಡೆ ರಾಜಕೀಯ ತಂತ್ರವಾಗಿದೆ ಎಂದು ಹೇಳಿದರು. ಮಾಜಿ ಪಿಎಂ ಡೇವಿಡ್ ಕ್ಯಾಮರೂನ್ ಅವರು ಮತ್ತೆ ವಿದೇಶಾಂಗ ಕಾರ್ಯದರ್ಶಿಯಾಗಿ ರಾಜಕೀಯಕ್ಕೆ ಮರಳುಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಿವಾಸದ ಗೇಟ್ಗೆ ಡಿಕ್ಕಿ ಹೊಡೆದ ಕಾರು, ಚಾಲಕ ಅರೆಸ್ಟ್
ಇನ್ನು ಸುಯೆಲ್ಲಾ ಬ್ರೆವರ್‌ಮನ್ ಅವರು ಸುನಕ್ ಅವರನ್ನು ವಿರೋಧಿಸಿದ್ದು ಒಂದು ಕಡೆಯಾದರೆ. ಇನ್ನು ಕಡೆ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಹಾಗೂ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧನವಿದೆ. ಜತೆಗೆ ಮಿತ್ರಪಕ್ಷಗಳಿಗೂ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Mon, 13 November 23