ಖಲಿಸ್ತಾನಿ ಬೆಂಬಲಿಗರ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ವಶಪಡಿಸಿಕೊಂಡ ರಿಷಿ ಸುನಕ್ ಸರ್ಕಾರ

|

Updated on: Mar 09, 2024 | 10:23 PM

ಖಲಿಸ್ತಾನಿ ಬೆಂಬಲಿಗರ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸರ್ಕಾರ ವಶಪಡಿಸಿಕೊಂಡಿದೆ. ಬ್ಯಾಂಕ್ ಖಾತೆಗಳು ಸೇರಿದಂತೆ ಇಲ್ಲಿಯವರೆಗೆ 100 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಬ್ಯಾಂಕ್ ಖಾತೆಗಳಿಂದ ಕೆನಡಾ, ಅಮೆರಿಕ ಮತ್ತು ಆಸ್ಟ್ರೇಲಿಯಾಕ್ಕೆ ಅನುಮಾನಾಸ್ಪದ ವಹಿವಾಟು ನಡೆಯುತ್ತಿತ್ತು ಎನ್ನಲಾಗಿದೆ.

ಖಲಿಸ್ತಾನಿ ಬೆಂಬಲಿಗರ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ವಶಪಡಿಸಿಕೊಂಡ ರಿಷಿ ಸುನಕ್ ಸರ್ಕಾರ
ರಿಷಿ ಸುನಕ್
Follow us on

ಖಲಿಸ್ತಾನಿ ಬೆಂಬಲಿಗರ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಸರ್ಕಾರ ವಶಪಡಿಸಿಕೊಂಡಿದೆ. ಇಲ್ಲಿಯವರೆಗೆ 100 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಖಲಿಸ್ತಾನಿ ಭಯೋತ್ಪಾದಕ ಮತ್ತು ಸಿಖ್​ ಫಾರ್​​​ ಜಸ್ಟಿಸ್​​ ಮುಖ್ಯಸ್ಥ ಗುರುಪತ್ವಂತ್​ ಸಿಂಗ್​​ ಪನ್ನುನ್​ ಅವರ ಎಸ್‌ಎಫ್‌ಜೆ ಖಾತೆಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಸದ್ಯ ವಶಪಡಿಸಿಕೊಂಡಿರುವ ಬ್ಯಾಂಕ್ ಖಾತೆಗಳಿಂದ ಕೆನಡಾ, ಅಮೆರಿಕ ಮತ್ತು ಆಸ್ಟ್ರೇಲಿಯಾಕ್ಕೆ ಅನುಮಾನಾಸ್ಪದ ವಹಿವಾಟು ನಡೆಯುತ್ತಿತ್ತು ಎನ್ನಲಾಗಿದೆ.

ಈ ವಿಚಾರವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತನಾಡಿದ್ದು, ಯಾವುದೇ ರೀತಿಯ ಹಿಂಸಾಚಾರ ಅಥವಾ ಉಗ್ರವಾದ ದೇಶದಲ್ಲಿ ಸ್ವೀಕಾರಾರ್ಹವಲ್ಲ. ಖಾಲಿಸ್ತಾನಿ ಪರ ಉಗ್ರವಾದವನ್ನು ಎದುರಿಸಲು ಬ್ರಿಟನ್ ಭಾರತ ಸರ್ಕಾರದೊಂದಿಗೆ ಬಹಳ ನಿಟಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ಭದ್ರತಾ ಸಚಿವರು ಇತ್ತೀಚೆಗೆ ಭಾರತದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ. ನಾವು ಗುಪ್ತಚರ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಒಟ್ಟಾಗಿ ಕಾರ್ಯನಿರತ ತಂಡಗಳನ್ನು ಹೊಂದಿದ್ದೇವೆ. ಇದರಿಂದ ನಾವು ಈ ರೀತಿಯ ಹಿಂಸಾತ್ಮಕ ಉಗ್ರವಾದವನ್ನು ಬೇರುಸಹಿತ ಕಿತ್ತು ಹಾಕಲಿದ್ದೇವೆ ಎಂದಿದ್ದಾರೆ.

5ನೇ ಭಾರತ ಮತ್ತು ಯುಕೆ ಗೃಹ ವ್ಯವಹಾರಗಳ ಸಂವಾದದ ಸಂದರ್ಭದಲ್ಲಿ, ಭಾರತೀಯ ಗೃಹ ಸಚಿವಾಲಯವು ಯುಕೆ ಸರ್ಕಾರದೊಂದಿಗೆ ಲಂಡನ್‌ನಲ್ಲಿ ನಡೆಯುತ್ತಿರುವ ಖಲಿಸ್ತಾನಿ ಚಟುವಟಿಕೆಗಳು ಮತ್ತು ಪ್ರತಿಭಟನೆಗಳ ಕುರಿತು ಚರ್ಚೆ ಮಾಡಿದೆ. ಸಭೆಯಲ್ಲಿ ಭಾರತವು ಯುಕೆಗೆ ತಮ್ಮ ದೇಶದಲ್ಲಿ ಖಲಿಸ್ತಾನಿ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 pm, Sat, 9 March 24