AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಅಕ್ಟೋಬರ್​ನಲ್ಲಿ ದೇಶದಾದ್ಯಂತ ಸಾಮೂಹಿಕ ವ್ಯಾಕ್ಸಿನ್ ನೀಡಲು ರಷ್ಯಾ ಪ್ಲಾನ್

ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 83,99,981 ಜನರಿಗೆ ಅಟ್ಯಾಕ್ ಆಗಿದ್ದು, 13 ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್​ ಸಂಶೋಧನೆ ಕಾರ್ಯ ಪ್ರಗತಿಯಲ್ಲಿದ್ದು, ಅಕ್ಟೋಬರ್​ನಲ್ಲಿ ದೇಶದಾದ್ಯಂತ ಸಾಮೂಹಿಕವಾಗಿ ವ್ಯಾಕ್ಸಿನ್ ಲಸಿಕೆ ನೀಡಲು ರಷ್ಯಾ ಮುಂದಾಗಿದೆ. ಡಾಕ್ಟರ್ಸ್ ಮತ್ತು ಶಿಕ್ಷಕರು ವ್ಯಾಕ್ಸಿನ್​ ನೀಡಲಿದ್ದಾರೆ ಅಂತಾ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ. ಕೊರೊನಾ ‘ಚಕ್ರವ್ಯೂಹ’ ವಿಶ್ವದಾದ್ಯಂತ ಕೊರೊನಾ ವೈರಸ್​ನ ಅಬ್ಬರಕ್ಕೆ ಕೊನೆಯೇ ಇಲ್ಲವಾಗಿದ್ದು, ಸೋಂಕಿತರ ಸಂಖ್ಯೆ 1,80,31,89 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. ವಿಶ್ವದಾದ್ಯಂತ ಈವರೆಗೂ 6,88,718 ಜನರು […]

Top News: ಅಕ್ಟೋಬರ್​ನಲ್ಲಿ ದೇಶದಾದ್ಯಂತ ಸಾಮೂಹಿಕ ವ್ಯಾಕ್ಸಿನ್ ನೀಡಲು ರಷ್ಯಾ ಪ್ಲಾನ್
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Aug 02, 2020 | 3:27 PM

Share

ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 83,99,981 ಜನರಿಗೆ ಅಟ್ಯಾಕ್ ಆಗಿದ್ದು, 13 ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್​ ಸಂಶೋಧನೆ ಕಾರ್ಯ ಪ್ರಗತಿಯಲ್ಲಿದ್ದು, ಅಕ್ಟೋಬರ್​ನಲ್ಲಿ ದೇಶದಾದ್ಯಂತ ಸಾಮೂಹಿಕವಾಗಿ ವ್ಯಾಕ್ಸಿನ್ ಲಸಿಕೆ ನೀಡಲು ರಷ್ಯಾ ಮುಂದಾಗಿದೆ. ಡಾಕ್ಟರ್ಸ್ ಮತ್ತು ಶಿಕ್ಷಕರು ವ್ಯಾಕ್ಸಿನ್​ ನೀಡಲಿದ್ದಾರೆ ಅಂತಾ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ.

ಕೊರೊನಾ ‘ಚಕ್ರವ್ಯೂಹ’ ವಿಶ್ವದಾದ್ಯಂತ ಕೊರೊನಾ ವೈರಸ್​ನ ಅಬ್ಬರಕ್ಕೆ ಕೊನೆಯೇ ಇಲ್ಲವಾಗಿದ್ದು, ಸೋಂಕಿತರ ಸಂಖ್ಯೆ 1,80,31,89 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. ವಿಶ್ವದಾದ್ಯಂತ ಈವರೆಗೂ 6,88,718 ಜನರು ಸಾವನ್ನಪ್ಪಿದ್ದು, 1,13,26,433 ಜನರು ವೈರಸ್​ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಪ್ರಸ್ತುತ 59,98,038 ಜನರು ಸೋಂಕಿನಿಂದ ನರಳಾಡುತ್ತಿದ್ದಾರೆ. 65 ಸಾವಿರ ಜನರ ಸ್ಥಿತಿ ಚಿಂತಾಜನಕವಾಗಿದೆ.

ಸೌತ್ ಆಫ್ರಿಕಾದಲ್ಲಿ ಕೊರೊನಾ ಸುಳಿ ಆಫ್ರಿಕಾದಲ್ಲಿ ಕೊರೊನಾ ವೈರಿ ಅಟ್ಟಹಾಸ ಮೆರೆಯುತ್ತಲೇ ಇದ್ದು, ಸೋಂಕಿತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 3,42,461ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 8,153 ಜನರು ಪ್ರಾಣ ಕಳೆದುಕೊಂಡಿದ್ದಾರೆ. 3,42,461 ಜನರು ವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 10,107 ಸೋಂಕಿತರು ಪತ್ತೆಯಾಗಿದ್ದಾರೆ.

ಸ್ಟೇಡಿಯಂನಲ್ಲೇ ಆಸ್ಪತ್ರೆ! ವೆನೆಜುವೆಲಾ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19,443ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದ 169 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಆಸ್ಪತ್ರೆಗಳಲ್ಲಿ ಬೆಡ್​​ಗಳು ಸಿಗದೇ ಪರದಾಡುವಂತಾಗಿತ್ತು. ಇದ್ರಿಂದ ಎಚ್ಚೆತ್ತ ಅಧ್ಯಕ್ಷ ನಿಕೋಲಸ್ ಮಡುರೋ, ರಾಜಧಾನಿ ಕರಾಕಸ್​ ಕ್ರೀಡಾ ಸ್ಟೇಡಿಯಂನಲ್ಲಿ 100ಕ್ಕೂ ಹೆಚ್ಚು ಬೆಡ್​ಗಳ ಫೀಲ್ಡ್ ಆಸ್ಪತ್ರೆಯನ್ನ ನಿರ್ಮಿಸಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ 715 ಸೋಂಕಿತರು ಪತ್ತೆಯಾಗಿದ್ದಾರೆ.

ಫ್ರಾನ್ಸ್​ ಏರ್​ಪೋರ್ಟ್​ನಲ್ಲೇ ಟೆಸ್ಟಿಂಗ್ ಫ್ರಾನ್ಸ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,87,919ಕ್ಕೆ ಏರಿಕೆಯಾಗಿದ್ದು, ವೈರಸ್​ನಿಂದಾಗಿ 30 ಸಾವಿರಕ್ಕು ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ, ಸೋಂಕು ನಿಯಂತ್ರಣಕ್ಕಾಗಿ ಎಚ್ಚೆತ್ತುಕೊಂಡಿರುವ ಫ್ರಾನ್ಸ್, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಪ್ಯಾರಿಸ್ ವಿಮಾನ ನಿಲ್ದಾಣದಲ್ಲೇ ಕೊವಿಡ್ ಟೆಸ್ಟಿಂಗ್ ಮಾಡುತ್ತಿದೆ. ಪ್ರಯಾಣಿಕರು ಕೊವಿಡ್ ಟೆಸ್ಟ್ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗ್ತಿದೆ.

ಒಕಿನಾವಾದಲ್ಲಿ ಎಮರ್ಜೆನ್ಸಿ ಜಪಾನ್​ನಲ್ಲಿ ಕೊರೊನಾ ಸೋಂಕಿನಿಂದಾಗಿ ಸೋಂಕಿತರ ಸಂಖ್ಯೆ 34,372ಕ್ಕೇ ಏರಿಕೆಯಾಗಿದ್ರೆ, ಸತ್ತವರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಇದ್ರ ಬೆನ್ನಲ್ಲೇ, ಒಕಿನಾವಾದಲ್ಲಿ ಸೋಂಕಿತರ ಸಖಖ್ಯೆ ಏರಿಕೆಯಾಗುತ್ತಲೇ ಇದ್ದು, 24 ಗಂಟೆಗಳ ಅವಧಿಯಲ್ಲಿ 71 ಹೊಸ ಕೇಸ್​ಗಳು ಪತ್ತೆಯಾಗಿವೆ. ಹೀಗಾಗಿ, ಒಕಿನಾವಾ ರಾಜ್ಯದಲ್ಲಿ ಎಮರ್ಜೆನ್ಸಿ ಘೋಷಿಸಲಾಗಿದೆ. ಸೋಂಕು ಹೆಚ್ಚಳದ ಬಳಿಕ ಆಸ್ಪತ್ರೆಗಳೆಲ್ಲಾ ಭರ್ತಿಯಾಗಿವೆ ಅಂತಾ ಗವರ್ನರ್ ಡೆನ್ನಿ ಟಮಾಕಿ ಹೇಳಿದ್ದಾರೆ.

ಚೀನಾದಲ್ಲಿ ಸೋಂಕು ಇಳಿಕೆ ಕೊರೊನಾ ಸೋಂಕಿನ ಮೂಲವಾಗಿರುವ ಚೀನಾದಲ್ಲಿ ವೈರಸ್​ನ 2ನೇ ಅಲೆ ಹೆಚ್ಚಾಗಿತ್ತು. ಆದ್ರೀಗ, ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಕೇವಲ 49 ಜನರಿಗಷ್ಟೇ ವೈರಸ್ ಪತ್ತೆಯಾಗಿದ್ದು, ಕ್ಸಿನ್​ಜಿಯಾಂಗ್​ನಲ್ಲಷ್ಟೇ ವೈರಸ್​ ಹೊಕ್ಕಿದೆ. ಚೀನಾದಲ್ಲಿ ಸೋಂಕಿತರ ಸಂಖ್ಯೆ 84,337ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ 4,654 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ನಿರ್ಬಂಧಗಳ ವಿರುದ್ಧ ಕಿಚ್ಚು ಜರ್ಮನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 2,10,665ಕ್ಕೆ ಏರಿಕೆಯಾಗಿದೆ. 9 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡು ಜಿನೇವಾದಲ್ಲಿ ಹಲವು ಷರತ್ತುಗಳನ್ನ ವಿಧಿಸಲಾಗಿದೆ. ಇದಕ್ಕೆ ರೊಚ್ಚಿಗೆದ್ದ ಜನರು, ಕೊರೊನಾ ಅಂತ್ಯಕ್ಕೆ ಬಂದಿದ್ದರೂ ಸಹ, ಸರ್ಕಾರ ಕೆಲವರು ಸೋಂಕಿನ ಸಂಖ್ಯೆ ಏರಿಕೆ ಮಾಡಿ ಜನರನ್ನ ಕಂಗೆಡಿಸುತ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ. ಟೈಗರ್ ಪಾರ್ಕ್ ಬಳಿ ಜಮಾಯಿಸಿ ಪ್ರತಿಭಟಿಸಿದ್ರು.

ಸೋಂಕಿತರ ಪತ್ತೆ ಹಚ್ಚದಂತೆ ಸಂಚು! ಕೊರೊನಾ ಸೋಂಕಿತರನ್ನ ಪತ್ತೆಹಚ್ಚಲಾಗ್ತಿದೆ. ಆದ್ರೆ, ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿತರನ್ನ ಮರೆಮಾಚುವ ಕೆಲಸ ನಡೆದಿದೆ. ಕ್ರಿಶ್ಚಿಯನ್ ಮುಖಂಡ, ಶಿಂಚೆಂಚಿ ಚರ್ಚ್​ನ 89 ವರ್ಷದ ವ್ಯಕ್ತಿ, ಬೃಹತ್ ಸಭೆ ನಡೆಸಿದ್ರು. ಸಭೆ ನಡೆಸಿದ ಸ್ಥಳಗಳು ಮತ್ತು ಪಂಥದ ಕೂಟಗಳಲ್ಲಿ ಭಾಗವಹಿಸಿದ್ದವರ ಮಾಹಿತಿ ಬಚ್ಚಿಡಲು ಮುಂದಾಗಿದ್ದಕ್ಕೆ ಕ್ರೈಸ್ತ ನಾಯಕನನ್ನ ಬಂಧಿಸಿದ್ದಾರೆ.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ