AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಕೊರೊನಾದಿಂದ ಯುಎಸ್ ಟೆನ್ನಿಸ್​ ಟೂರ್ನಮೆಂಟ್​ಗೂ ಕುತ್ತು..

ಕೊರೊನಾ ಭೀತಿಯಿಂದಾಗಿ ವಿಶ್ವದಾದ್ಯಂತ ಹಲವು ಕ್ರೀಡಾಕೂಟಗಳು ರದ್ದು ಗೊಂಡಿವೆ. ಸೋಂಕು ಹೆಚ್ಚಿರುವ ಅಮೆರಿಕದಲ್ಲಿ ಬೇಸ್​ ಬಾಲ್​ನಂಥಾ ಆಟಗಳು ಪ್ರೇಕ್ಷಕರಿಲ್ಲದೇ ಖಾಲಿ ಸ್ಟೇಡಿಯಂನಲ್ಲಿ ಆಡಲಾಗ್ತಿದೆ. ಆದ್ರೆ, ಮುಂಬರುವ ಯುಎಸ್ ಓಪನ್ ಟೆನ್ನಿಸ್​ ಟೂರ್ನಮೆಂಟ್​ಗೆ ಕುತ್ತು ಬಂದಿದೆ. ಯಾಕಂದ್ರೆ, ವಿಶ್ವದ 40ನೇ ಟೆನ್ನಿಸ್ ಆಟಗಾರ ನಿಕ್ ಕಿಗ್ರಿಯೋಸ್, ವೈರಸ್ ಭೀತಿಯಿಂದಾಗಿ ನಾನು ಟೂರ್ನಮೆಂಟ್​ನಲ್ಲಿ ಭಾಗವಹಿಸಲ್ಲ ಅಂತಾ ಹೇಳಿದ್ದಾರೆ. ಕಿಲ್ಲರ್ ಕೊರೊನಾ ಕೇಕೆ ಜಗತ್ತಿನಾದ್ಯಂತ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, 2 ಕೋಟಿಯ ಸನಿಹದಲ್ಲಿದೆ. […]

Top News: ಕೊರೊನಾದಿಂದ ಯುಎಸ್ ಟೆನ್ನಿಸ್​ ಟೂರ್ನಮೆಂಟ್​ಗೂ ಕುತ್ತು..
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Aug 03, 2020 | 2:34 PM

Share

ಕೊರೊನಾ ಭೀತಿಯಿಂದಾಗಿ ವಿಶ್ವದಾದ್ಯಂತ ಹಲವು ಕ್ರೀಡಾಕೂಟಗಳು ರದ್ದು ಗೊಂಡಿವೆ. ಸೋಂಕು ಹೆಚ್ಚಿರುವ ಅಮೆರಿಕದಲ್ಲಿ ಬೇಸ್​ ಬಾಲ್​ನಂಥಾ ಆಟಗಳು ಪ್ರೇಕ್ಷಕರಿಲ್ಲದೇ ಖಾಲಿ ಸ್ಟೇಡಿಯಂನಲ್ಲಿ ಆಡಲಾಗ್ತಿದೆ. ಆದ್ರೆ, ಮುಂಬರುವ ಯುಎಸ್ ಓಪನ್ ಟೆನ್ನಿಸ್​ ಟೂರ್ನಮೆಂಟ್​ಗೆ ಕುತ್ತು ಬಂದಿದೆ. ಯಾಕಂದ್ರೆ, ವಿಶ್ವದ 40ನೇ ಟೆನ್ನಿಸ್ ಆಟಗಾರ ನಿಕ್ ಕಿಗ್ರಿಯೋಸ್, ವೈರಸ್ ಭೀತಿಯಿಂದಾಗಿ ನಾನು ಟೂರ್ನಮೆಂಟ್​ನಲ್ಲಿ ಭಾಗವಹಿಸಲ್ಲ ಅಂತಾ ಹೇಳಿದ್ದಾರೆ.

ಕಿಲ್ಲರ್ ಕೊರೊನಾ ಕೇಕೆ ಜಗತ್ತಿನಾದ್ಯಂತ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, 2 ಕೋಟಿಯ ಸನಿಹದಲ್ಲಿದೆ. ಸದ್ಯ ಒಟ್ಟು 1 ಕೋಟಿ 82 ಲಕ್ಷದ 40 ಸಾವಿರದ 634 ಜನರು ಸೋಂಕಿತರಾಗಿದ್ದಾರೆ. ಇನ್ನು ಕೊರೊನಾ ಹೆಮ್ಮಾರಿಗೆ ಇದುವರೆಗೆ 6 ಲಕ್ಷದ 92 ಸಾವಿರದ 894 ಜನರು ಬಲಿಯಾಗಿದ್ದಾರೆ. ಸದ್ಯ ಸುಮಾರು 60 ಲಕ್ಷದಷ್ಟು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಕ್ಟೋರಿಯಾದಲ್ಲಿ ಮತ್ತೆ ಕರ್ಫ್ಯೂ ಆಸ್ಟ್ರೇಲಿಯಾದ ವಿಕ್ಟೋರಿಯಾ ಜಿಲ್ಲೆಯಲ್ಲಿ ಮತ್ತೆ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಲಾಗಿದೆ. ವಿಕ್ಟೋರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 429 ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಮಾಡಲಾಗಿದೆ. ಹೀಗಾಗಿ ಜನರ ಹಾಗೂ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ನೇಪಾಳದಲ್ಲಿ ರಕ್ಷಾ ಬಂಧನ ನೆರೆಯ ರಾಷ್ಟ್ರ ನೇಪಾಳದಲ್ಲೂ ರಕ್ಷಾ ಬಂಧ ಆಚರಿಸಲಾಯ್ತು. ರಾಜಧಾನಿ ಕಠ್ಮಂಡುವಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಪೂಜೆ ಬಳಿಕ ರಾಖಿ ಕಟ್ಟಿ ಸಂಭ್ರಮಿಸಿದ್ರು. ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಮುಂಜಾನೆಯೇ ಭಕ್ತರು ದೇಗುಲಗಳಿಗೆ ತೆರಳಿದ್ರು.

ಕೊರೊನಾ ವಿರುದ್ಧ ರಕ್ಷಣೆ ಇದೆಯೇ? ಕ್ರೂರಿ ಕೊರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗುತ್ತಿದ್ದು, ವೈರಸ್ ಹೆಸರು ಕೇಳಿಯೇ ಅರ್ಧಕ್ಕ ಅರ್ಧದಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ರೆ, ಕೊರೊನಾ ವಿರುದ್ಧ ಹಲವರು ಹೋರಾಡಿ ರಕ್ಷಣೆ ಪಡೆದುಕೊಂಡಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ವಿಶ್ವದ ನಾನಾ ಕಡೆ ನಡೆದ ಸಂಶೋಧನೆಯಲ್ಲಿ ಕೊರೊನಾ ರೋಗ ಕೆಲ ವ್ಯಕ್ತಿಗಳ ಬಳಿ ಸುಳಿದೇ ಇಲ್ಲ. ಇದು ಈಗ ವೈದ್ಯಕೀಯ ಲೋಕಕ್ಕೂ ಸವಾಲಾಗಿ ಪರಿಣಮಿಸಿದೆ.

ಕಾರ್​ನಲ್ಲೇ ಪ್ರೇಯರ್! ಕೊರೊನಾ ಹೆಮ್ಮಾರಿ ವಕ್ಕರಿಸಿದ ಹಿನ್ನೆಲೆಯಲ್ಲಿ ಹಲವು ಧರ್ಮಗಳ ಪ್ರಾರ್ಥನಾ ಶೈಲಿಯೇ ಬದಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಬಿದ್ದಿದೆ. ಮೆಕ್ಸಿಕೋದಲ್ಲಿ ಕ್ರೈಸ್ತರು ಚರ್ಚ್​ನೊಳಗೆ ಸಾಮೂಹಿಕ ಪ್ರಾರ್ಥನೆ ಬದಲಿಗೆ ಕಾರಿನೊಳಗೇ ಕೂತ್ಕೊಂಡು ಪ್ರಾರ್ಥನೆ ಮಾಡಿದ್ರು.