
ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ (Russia Ukraine War) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಭಾನುವಾರ) ರಷ್ಯಾವು ಉಕ್ರೇನ್ನೊಂದಿಗೆ ಮಾತುಕತೆಗೆ ಸಿದ್ಧವಾಗಿದೆ ಎಂದಿದೆ. ಇತ್ತ ಉಕ್ರೇನ್ ಕೂಡ ತಾನು ಮಾತುಕತೆಗೆ ಸಿದ್ಧ ಎಂದು ಹೇಳಿಕೊಂಡಿದೆ. ಆದರೆ ಎರಡೂ ಪಕ್ಷಗಳಲ್ಲಿ ಯಾವ ಪ್ರದೇಶದಲ್ಲಿ ಮಾತುಕತೆ ನಡೆಸಬೇಕು ಎಂಬ ಗೊಂದಲಗಳಿವೆ. ರಷ್ಯಾವು ಉಕ್ರೇನ್ಅನ್ನು ಬೆಲಾರಸ್ಗೆ ಆಹ್ವಾನಿಸಿದೆ. ರಷ್ಯಾದ ನಿಯೋಗ ಕೂಡ ಬೆಲಾರಸ್ನಲ್ಲಿದೆ. ಆದರೆ ಉಕ್ರೇನ್ ಈ ಆಹ್ವಾನವನ್ನು ಒಪ್ಪುತ್ತಿಲ್ಲ. ಇದಕ್ಕೆ ತನ್ನದೇ ಆದ ಕಾರಣಗಳನ್ನು ಉಕ್ರೇನ್ ನೀಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ವಿಡಿಯೋ ಸಂದೇಶದಲ್ಲಿ ಮಾತನಾಡಿ, ‘‘ಉಕ್ರೇನ್ಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿದೆ. ಆದರೆ ಬೆಲಾರಸ್ನಲ್ಲ. ಕಾರಣ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲುಬೆಲಾರಸ್ಅನ್ನು ಲಾಂಚ್ ಪ್ಯಾಡ್ನಂತೆ ಬಳಸುತ್ತಿದೆ. ಆದ್ದರಿಂದ ಅಲ್ಲಿ ಮಾತುಕತೆ ನಡೆಸುವುದಿಲ್ಲ’’ ಎಂದಿದೆ. ಅಷ್ಟೇ ಅಲ್ಲ, ಈ ಮಾತುಕತೆಗೆ ‘ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಕು’ ಮೊದಲಾದ ಪ್ರದೇಶಗಳನ್ನು ಹೆಸರಿಸಿದ್ದೆವು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಈ ಕುರಿತು ಎಎಫ್ಪಿ ಹಂಚಿಕೊಂಡ ಟ್ವೀಟ್:
#UPDATE President Volodymyr Zelensky said Ukraine is willing to hold talks with Russia – but not in neighbouring Belarus as it is being used as a launchpad for the invasion.
“Warsaw, Bratislava, Budapest, Istanbul, Baku. We proposed all of them,” he said in an online address.
— AFP News Agency (@AFP) February 27, 2022
ವಿಡಿಯೋದಲ್ಲಿ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಮಾತನಾಡಿದ ಝೆಲೆನ್ಸ್ಕಿ, ‘‘ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಅನ್ನು ಪ್ರವೇಶಿಸಿದಾಗ ಉಕ್ರೇನ್ ಮತ್ತು ರಷ್ಯಾದ ಸೈನಿಕರ ನಡುವೆ ಕಾದಾಟ ನಡೆದಿದೆ. ಜನರನ್ನು ನೋಯಿಸಲು ರಷ್ಯಾದ ಪಡೆಗಳು ಉದ್ದೇಶಪೂರ್ವಕವಾಗಿ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿವೆ’’ ಎಂದು ಆರೋಪಿಸಿದ್ದಾರೆ.
ಉಕ್ರೇನ್ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು. ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿದೆ. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಪ್ರಸ್ತಾಪಿಸಿ, ಬೇರೆಡೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ:
Russia Ukraine War Live: ಮಾತುಕತೆಗೆ ಸಿದ್ಧ; ಆದರೆ ಬೆಲಾರಸ್ನಲ್ಲಿ ಸಾಧ್ಯವಿಲ್ಲ ಎಂದ ಉಕ್ರೇನ್
Published On - 2:01 pm, Sun, 27 February 22