Russia Ukraine War Live: ರಷ್ಯಾ ದೇಶದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಶ: ರಷ್ಯಾ

TV9 Web
| Updated By: preethi shettigar

Updated on:Mar 12, 2022 | 10:46 PM

Russia Ukraine Conflict Live Updates: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, ರಷ್ಯಾದಲ್ಲಿ ಯುಟ್ಯೂಬ್ ಚಾನಲ್‌ಗಳು ಬ್ಲಾಕ್ ಮಾಡಲಾಗಿದೆ. ರಷ್ಯಾಗೆ ಸಂಬಂಧಿಸಿದ ಯೂಟ್ಯೂಬ್ ಚಾನಲ್‌ಗಳನ್ನು ಗುನ್ನಾ ಬ್ಲಾಕ್ ಮಾಡಲಾಗಿದೆ.

Russia Ukraine War Live: ರಷ್ಯಾ ದೇಶದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಶ: ರಷ್ಯಾ
ಪ್ರಾತಿನಿಧಿಕ ಚಿತ್ರ

ರಷ್ಯಾ ಉಕ್ರೇನ್ (Russia Ukraine War) ನಡುವೆ ಯುದ್ಧ ಮುಂದುವರೆದಿದೆ. ಯುದ್ಧ ಪ್ರದೇಶದಿಂದ ಆಪರೇಷನ್ ಗಂಗಾ ಕಾರ್ಯಾಚರಣೆ ಸಾಗಿದ್ದು, ಕರ್ನಾಟಕಕ್ಕೆ ಆಪರೇಷನ್ ಗಂಗಾ ಕೊನೆಯ ಬ್ಯಾಚ್ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಮಧ್ಯರಾತ್ರಿ 12:20 ಹಾಗೂ 1:45 ಎರಡು ವಿಮಾನಗಳಲ್ಲಿ ಒಟ್ಟು 8 ವಿದ್ಯಾರ್ಥಿಗಳು  ಬೆಂಗಳೂರಿಗೆ ಆಗಮಿಸಿದ್ದಾರೆ. ಉಕ್ರೇನ್ ಇಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ಒಟ್ಟು 572 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, ರಷ್ಯಾದಲ್ಲಿ ಯುಟ್ಯೂಬ್ ಚಾನಲ್‌ಗಳು ಬ್ಲಾಕ್ ಮಾಡಲಾಗಿದೆ. ರಷ್ಯಾಗೆ ಸಂಬಂಧಿಸಿದ ಯೂಟ್ಯೂಬ್ ಚಾನಲ್‌ಗಳನ್ನು ಗುನ್ನಾ ಬ್ಲಾಕ್ ಮಾಡಲಾಗಿದೆ. ಸುಮಾರು 14,000 ಧರಣಿನಿರತರನ್ನು ರಷ್ಯಾ ಬಂಧಿಸಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಯುದ್ಧ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿಲಾಗಿದೆ. ಪೋಲೆಂಡ್ ಸೇರಿದ ಉಕ್ರೇನ್‌ನ ಸುಮಾರು 3 ಲಕ್ಷ ಜನರು, ಪೋಲೆಂಡ್‌ನ ಕ್ರಾಕೋವ್ ನಗರಕ್ಕೆ ಒಂದು ಲಕ್ಷ ಜನರು ಮತ್ತು ವಾರ್ಸಾಗೆ 2 ಲಕ್ಷ ಉಕ್ರೇನಿಗರು ಸೇರಿರುವ ಮಾಹಿತಿಯಿದೆ.

LIVE NEWS & UPDATES

The liveblog has ended.
  • 12 Mar 2022 10:27 PM (IST)

    ಉಕ್ರೇನ್‌ನ ಮೆಲಿಟೊಪೋಲ್ ಮೇಯರ್​ನನ್ನು ಕಿಡ್ನ್ಯಾಪ್ ಮಾಡಿದ್ದಾರೆ: ಝೆಲೆನ್​​ಸ್ಕಿ

    ಉಕ್ರೇನ್‌ನ ಮೆಲಿಟೊಪೋಲ್ ಮೇಯರ್​ನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮೇಯರ್ ಇನ್ನೂ ಜೀವಂತವಾಗಿದ್ದಾರೆ. ರಷ್ಯಾ ಮೇಯರ್‌ರನ್ನು ಹಿಂಸಿಸುತ್ತಿದೆ ಎಂದು ರಷ್ಯಾ ವಿರುದ್ಧ ಉಕ್ರೇನ್​ ಅಧ್ಯಕ್ಷ ಝೆಲೆನ್​​​ಸ್ಕಿ ಆರೋಪ ಮಾಡಿದ್ದಾರೆ.

  • 12 Mar 2022 10:25 PM (IST)

    ರಷ್ಯಾದ ಅಪಾರ ಪ್ರಮಾಣದ ಯುದ್ಧೋಪಕರಣ ನಾಶ

    ಉಕ್ರೇನ್​ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ರಷ್ಯಾದ ಅಪಾರ ಪ್ರಮಾಣದ ಯುದ್ಧೋಪಕರಣ ನಾಶವಾಗಿದೆ. 5 ಬಿಲಿಯನ್​ ಡಾಲರ್​​ಗೂ ಹೆಚ್ಚು​ ಮೌಲ್ಯದ ಶಸ್ತ್ರಾಸ್ತ್ರ ನಾಶವಾಗಿದೆ.

  • 12 Mar 2022 10:24 PM (IST)

    ಉಕ್ರೇನ್​​ಗೆ ಮಿಲಿಟರಿ ನೆರವು ನೀಡುವುದರ ಬಗ್ಗೆ ಬೈಡನ್​ ಪತ್ರ

    ಉಕ್ರೇನ್​​ಗೆ ಮಿಲಿಟರಿ ನೆರವು ನೀಡುವುದರ ಬಗ್ಗೆ ಬೈಡನ್ ಜ್ಞಾಪಕ ಪತ್ರ ಹೊರಡಿಸಿದ್ದಾರೆ. 200 ಮಿಲಿಯನ್ ಡಾಲರ್​ ಮಿಲಿಟರಿ ನೆರವನ್ನು ಯುಎಸ್​ ಘೋಷಿಸಿದೆ.

  • 12 Mar 2022 10:22 PM (IST)

    ರಷ್ಯಾ ಜೊತೆಗೆ ಮಾತುಕತೆಗೆ ಸಿದ್ಧ ಎಂದ ಝೆಲೆನ್​ಸ್ಕಿ

    ಈಗಾಗಲೇ ಮೂರು ಸುತ್ತಿನ ಶಾಂತಿ ಮಾತುಕತೆ ನಡೆದಿವೆ. ಜೆರುಸಲೆಮ್​​ನಲ್ಲಿ ಮಾತುಕತೆಗೆ ಇರಾದೆ ಇದೆ. ಪುಟಿನ್​ ಜತೆ ಮಾತುಕತೆಗೆ ಸಿದ್ಧವಿದ್ದೇವೆ. ಇಸ್ರೇಲ್​ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಾತುಕತೆಗೆ ಇಂಗಿತ ಇದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್​​ಸ್ಕಿ ಹೇಳಿದ್ದಾರೆ.

  • 12 Mar 2022 08:33 PM (IST)

    ರಷ್ಯಾದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದ ಸೋನಿ ಪಿಕ್ಚರ್ಸ್

    ಉಕ್ರೇನ್​ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ದೊಡ್ಡ ದೊಡ್ಡ ಕಂಪನಿಗಳು ಹೊಡೆತ ಕೊಡುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ರಷ್ಯಾದಲ್ಲಿ ಸೋನಿ ಪಿಕ್ಚರ್ಸ್​ ತನ್ನ ಸೇವೆ ಸ್ಥಗಿತಗೊಳಿಸಿದೆ.

  • 12 Mar 2022 08:31 PM (IST)

    ಯುದ್ಧದಲ್ಲಿ ಈವರೆಗೆ ಉಕ್ರೇನ್​ 1,300​​ ಸೈನಿಕರ ಬಲಿದಾನ: ಉಕ್ರೇನ್​ ಅಧ್ಯಕ್ಷ ಝೆಲೆನ್​​ಸ್ಕಿ

    ಉಕ್ರೇನ್​ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಯುದ್ಧದಲ್ಲಿ ಈವರೆಗೆ ಉಕ್ರೇನ್​ 1,300​​ ಸೈನಿಕರ ಬಲಿದಾನವಾಗಿದೆ ಎಂದು ಮೊದಲ ಬಾರಿಗೆ ಉಕ್ರೇನ್​ ಅಧ್ಯಕ್ಷ ಝೆಲೆನ್​​ಸ್ಕಿ ಮಾಹಿತಿ ನೀಡಿದ್ದಾರೆ.

  • 12 Mar 2022 07:06 PM (IST)

    ಯುದ್ಧ ಭೀತಿ ನಡುವೆ ಚೆರ್ನೋಬಿಲ್ ವಿದ್ಯುತ್ ಸ್ಥಾವರ ದುರಸ್ತಿ ಕಾರ್ಯ ಆರಂಭ

    ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ ಉಕ್ರೇನ್​ ಇದ್ದು, ಚೆರ್ನೋಬಿಲ್ ವಿದ್ಯುತ್ ಸ್ಥಾವರದಲ್ಲಿ ಹಾನಿಗೊಳಗಾದ ವಿದ್ಯುತ್ ಮಾರ್ಗಗಳನ್ನು ಸರಿಪಡಿಸಲು ಪ್ರಾರಂಭಿಸಿದೆ ಎಂದು ಉಕ್ರೇನ್ ಶುಕ್ರವಾರ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ತಿಳಿಸಿದೆ ಎಂದು ಯುಎನ್ ಪರಮಾಣು ಸಂಸ್ಥೆ ತಿಳಿಸಿದೆ.

  • 12 Mar 2022 06:29 PM (IST)

    ಮರಿಯುಪೋಲ್‌ನಲ್ಲಿ ಮಸೀದಿಯೊಂದರ ಮೇಲೆ ರಷ್ಯಾ ದಾಳಿ

    ಮರಿಯುಪೋಲ್‌ನ ಮಸೀದಿಯೊಂದರ ಮೇಲೆ ರಷ್ಯಾ ದಾಳಿ ನಡೆಸಿದ್ದು, ದಾಳಿಗೊಳಗಾದ ಮಸೀದಿಯಲ್ಲಿ 80 ಜನ ಆಶ್ರಯ ಪಡೆದಿದ್ದರು. 80 ಜನರ ಪೈಕಿ ಟರ್ಕಿ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಕ್ಷಣೆಗೆಂದು ಮಸೀದಿಯೊಳಗಡೆ ಬಂದು ಜನರು ಕುಳಿತಿದ್ದರು. ಆದರೆ ಈಗ ರಷ್ಯಾ ಮಸೀದಿ ಮೇಲೆ ದಾಳಿ ಮಾಡಿದೆ.

  • 12 Mar 2022 06:12 PM (IST)

    ಮಾರಿಯುಪೋಲ್​ನಲ್ಲಿ ಎದುರಾಗಿದೆ ಕುಡಿಯುವ ನೀರಿನ ಕೊರತೆ

    ಉಕ್ರೇನ್- ರಷ್ಯಾ ಯುದ್ಧದಿಂದಾಗಿ ಉಕ್ರೇನಿಯನ್ ನಗರವಾದ ಮಾರಿಯುಪೋಲ್‌ನ ಕೆಲವು ನಿವಾಸಿಗಳು ಔಷಧಿಗಳ ಕೊರತೆ ಮತ್ತು ಆಹಾರ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಾವು ನೋವು ಸಂಭವಿಸುತ್ತಿದೆ ಎಂದು ಸಹಾಯ ಗುಂಪು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಹೇಳಿದೆ.

  • 12 Mar 2022 05:48 PM (IST)

    ಉಕ್ರೇನ್ ನಾಗರಿಕರಿಗೆ ಗೂಗಲ್ ಕಂಪನಿಯಿಂದ ಸಹಕಾರ

    ಉಕ್ರೇನ್ ನಾಗರಿಕರಿಗೆ ಗೂಗಲ್​ ಕಂಪನಿ ಸಹಕಾರ ನೀಡಿದೆ. ಉಕ್ರೇನ್​​ನಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ನೆರವು ನೀಡಿದೆ. ರಷ್ಯಾ ವೈಮಾನಿಕ ದಾಳಿ ಬಗ್ಗೆ ಗೂಗಲ್​ ಎಚ್ಚರಿಕೆ ನೀಡಲಿದೆ.

  • 12 Mar 2022 05:46 PM (IST)

    ರಷ್ಯಾ ದಾಳಿಯಿಂದ ಸ್ಮಶಾನದಂತಾದ ವೋಲ್ನೋವಾಖಾ ಪಟ್ಟಣ

    ಉಕ್ರೇನ್​ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ರಷ್ಯಾ ದಾಳಿಯಿಂದ ವೋಲ್ನೋವಾಖಾ ಪಟ್ಟಣ ಸ್ಮಶಾನದಂತಾಗಿದೆ. ಸದ್ಯ ಜೀವ ಉಳಿಸಿಕೊಳ್ಳಲು ಬೇರೆ ಪ್ರದೇಶಗಳಿಗೆ ಜನರು ಸ್ಥಳಾಂತರವಾಗುತ್ತಿದ್ದಾರೆ.

  • 12 Mar 2022 05:01 PM (IST)

    ರಷ್ಯಾ ದೇಶದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಶ: ರಷ್ಯಾ

    ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಶ ಮಾಡಲಾಗುತ್ತದೆ ಎಂದು ರಷ್ಯಾ ತನ್ನ ಮಿತ್ರ ರಾಷ್ಟ್ರಗಳಿಗೆ ಮತ್ತು ಅಮೆರಿಕಾಗೆ ಎಚ್ಚರಿಕೆ ನೀಡಿದೆ.

  • 12 Mar 2022 04:52 PM (IST)

    ಮರಿಯುಪೋಲ್​ನಲ್ಲಿ ರಷ್ಯಾ ಶೆಲ್ ದಾಳಿಗೆ 80 ಜನ ಬಲಿ

    ರಷ್ಯಾ ಸೇನಾಪಡೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದು, ರಷ್ಯಾ ಶೆಲ್​ ದಾಳಿಗೆ ಮರಿಯುಪೋಲ್​​ನಲ್ಲಿ 80 ಜನ ಬಲಿಯಾಗಿದ್ದಾರೆ.

  • 12 Mar 2022 03:39 PM (IST)

    Russia Ukraine War Live: ರಷ್ಯಾದ ಯುದ್ಧ ವಿಮಾನಗಳ ಪೈಲಟ್‌ಗಳಿಗೆ ಭಾರಿ ಆಫರ್

    ರಷ್ಯಾ ಉಕ್ರೇನ್ ದೇಶದ ಮೇಲೆ ಯುದ್ಧ ಮುಂದುವರಿಸಿದೆ. ರಷ್ಯಾದ ಯುದ್ಧ ವಿಮಾನಗಳ ಪೈಲಟ್‌ಗಳಿಗೆ ಉಕ್ರೇನ್ ರಕ್ಷಣಾ ಇಲಾಖೆ ಭಾರಿ ಆಫರ್ ನೀಡಿದೆ. ಉಕ್ರೇನ್ ಪರ ನಿಷ್ಠೆ ತೋರಿದ್ರೆ 5 ಲಕ್ಷ ಡಾಲರ್‌ ಆಫರ್ ನೀಡಿದೆ. ಪ್ರತಿ ಹೆಲಿಕಾಪ್ಟರ್‌ಗೆ 5 ಲಕ್ಷ ಅಮೆರಿಕನ್ ಡಾಲರ್ ಆಫರ್ ನೀಡಿದೆ. ಯುದ್ಧ ವಿಮಾನ, ಹೆಲಿಕಾಪ್ಟರ್ ಸಮೇತ ನಿಷ್ಠೆ ತೋರಬೇಕು. ಉಕ್ರೇನ್ ಪರ ಯುದ್ಧದಲ್ಲಿ ನಿಲ್ಲಬೇಕು ಅಂತ ರಕ್ಷಣಾ ಇಲಾಖೆ ತಿಳಿಸಿದೆ. ಉಕ್ರೇನ್ ರಕ್ಷಣಾ ಇಲಾಖೆಯಿಂದ ವಿಡಿಯೋ ಬಿಡುಗಡೆಯಾಗಿದೆ.

  • 12 Mar 2022 03:07 PM (IST)

    Russia Ukraine War Live: ಉಕ್ರೇನ್ ದೇಶದ ಮೇಲೆ ಯುದ್ಧ ಮುಂದುವರಿಸಿದ ರಷ್ಯಾ

    ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಚೆರ್ನಿಹಿವ್ ನಗರಕ್ಕೆ ನೀರು ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ.

  • 12 Mar 2022 01:46 PM (IST)

    Russia Ukraine War Live: ಬಾಹ್ಯಾಕಾಶ ಸ್ಟೇಷನ್ ನಾಶ ಮಾಡಿದರೇ, ಎಲ್ಲ ದೇಶಗಳಿಗೂ ತೊಂದರೆ

    ಬಾಹ್ಯಾಕಾಶ ಸ್ಟೇಷನ್ ನಾಶ ಮಾಡಿದರೇ, ಎಲ್ಲ ದೇಶಗಳಿಗೂ ತೊಂದರೆ ಉಂಟಾಗಲಿದೆ. ಇಂಟರ್ ನ್ಯಾಷನಲ್ ಸ್ಪೇಷ್ ಸ್ಟೇಷನ್​ನಲ್ಲಿ ರಷ್ಯಾ, ಅಮೆರಿಕಾ, ಯೂರೋಪ್ ರಾಷ್ಟ್ರಗಳು ಇವೆ. ಇಂಟರ್ ನ್ಯಾಷನಲ್ ಸ್ಪೆಷ್ ಸ್ಟೇಷನ್ ನಾಶವಾದರೇ, ಈ ದೇಶಗಳು ಬಾಹ್ಯಾಕಾಶ ಚಟುವಟಿಕೆ ನಡೆಸಲಾಗಲ್ಲ.

  • 12 Mar 2022 01:21 PM (IST)

    Russia Ukraine War Live: ರಷ್ಯಾ ಸೇನೆ ಪರ ಉಕ್ರೇನ್​ನಲ್ಲಿ ಹೋರಾಡಲು ಸಿರಿಯಾ ದೇಶದ ಯೋಧರ ನೇಮಕ

    ರಷ್ಯಾ ಸೇನೆ ಪರ ಉಕ್ರೇನ್​ನಲ್ಲಿ ಹೋರಾಡಲು ಸಿರಿಯಾ ದೇಶದ 16 ಸಾವಿರ ಫೈಟರ್​ಗಳ ನೇಮಕ ಮಾಡಲಾಗಿದೆ. ಸಿರಿಯಾ ಫೈಟರ್​ಗಳು ಉಕ್ರೇನ್​ಗೆ ಹೋಗಿ ರಷ್ಯಾ ಪರ ಹೋರಾಟ ಮಾಡಲಿದ್ದಾರೆ. ಸಿರಿಯಾ ಪೈಟರ್​ಗಳಿಗೆ ರಷ್ಯಾ ಸರ್ಕಾರ ತಿಂಗಳಿಗೆ 3 ಸಾವಿರ ಡಾಲರ್ ಹಣ ನೀಡುತ್ತದೆ. ಸಿರಿಯಾ ಸೈನಿಕರಿಗೆ ಸಿರಿಯಾ ಸೇನೆ ನೀಡುವ ಸಂಬಳದ 50 ಪಟ್ಟು ಹೆಚ್ಚು ಹಣ ರಷ್ಯಾ ಸರ್ಕಾರ ನೀಡುತ್ತದೆ. ಸಿರಿಯಾ ಯೋಧರನ್ನು ಸಿರಿಯಾದ ಕೊಲೆಗಡುಕರು ಎಂದು ಉಕ್ರೇನ್ ಅಧ್ಯಕ್ಷ ವಾಡ್ಲಿಮಿರ್ ಜೆಲೆನ್ ಸ್ಕಿ ಹೇಳಿದ್ದಾರೆ. ಸಿರಿಯಾ ಸೈನಿಕರನ್ನು ತಮ್ಮ ಪರ ನೇಮಕ ಮಾಡಿಕೊಳ್ಳುವುದಾಗಿ ರಷ್ಯಾದ ರಕ್ಷಣಾ ಸಚಿವ ಹೇಳಿದೆ.

  • 12 Mar 2022 01:13 PM (IST)

    Russia Ukraine War Live: ವಿದ್ಯಾರ್ಥಿಗಳ ಪರವಾಗಿ ನಾನು ಪ್ರಧಾನಿಗೆ ಧನ್ಯವಾದ ಹೇಳುವೆ; ತೇಜಸ್ವಿ ಸೂರ್ಯ

    3 ವಾರಗಳಿಂದ ಆಪರೇಶನ್ ಗಂಗಾ ಯೋಜನೆ ಜಾರಿಯಲ್ಲಿತ್ತು. ಉಕ್ರೇನ್​ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆದುಕೊಂಡು ಬರಲಾಗಿದೆ. 19,448 ಭಾರತೀಯರನ್ನು ಉಕ್ರೇನ್​ನ ವಿವಿಧ ಭಾಗಗಳಿಂದ ಮಾತೃ ಭೂಮಿಗೆ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ ಎಂದು ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಸುದ್ದಿ ಗೋಷ್ಠಿಲಿ ಹೇಳಿದ್ದಾರೆ. ಸರಿ ಸುಮಾರು 16 ಸಾವಿರ ವಿದ್ಯಾರ್ಥಿಗಳು ಇದರಲ್ಲಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ನಾನು ನಮ್ಮ ಪ್ರಧಾನಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. 633 ಕನ್ನಡಿಗ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಆಪರೇಶನ್ ಗಂಗಾ ಸಾಕಷ್ಟು ಜಟಿಲವಾಗಿತ್ತು. ಪ್ರಧಾನಿ ಸತತ ಪ್ರಯತ್ನದಿಂದ ಆಪರೇಶನ್ ಗಂಗಾ ಯಶಸ್ವಿ ಆಗಿದೆ. ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರ ಜತೆ ನಿರಂತರವಾಗಿ ಸಂಪರ್ಕ ಮಾಡಿ ಭಾರತೀಯರನ್ನು ಕರೆ ತರುವಲ್ಲಿ ಪ್ರಧಾನಿ ಯಶಸ್ವಿ ಆಗಿದ್ದಾರೆ. ನನ್ನ ಕಚೇರಿಯಿಂದಲೂ ಸಾಕಷ್ಟು ಕೆಲಸವನ್ನು ಮಾಡಲಾಗಿದೆ. ೪೦೦ ವಿದ್ಯಾರ್ಥಿಗಳ ಪಟ್ಟಿ ರೆಡಿ ಮಾಡಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಉಕ್ರೇನ್​ನ ವಾಟ್ಸ್ ಅಪ್ ಗ್ರೂಪ್​ಗಳಿಗೆ ಆಡ್ ಮಾಡಿ ವಿದ್ಯಾರ್ಥಿಗಳ ಸಂಪರ್ಕ ಪಡೆಯಲಾಗಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅವರವರ ಪ್ರಾಣಿಗಳನ್ನು ಕೂಡ ಆಪರೇಶನ್ ಗಂಗಾ ಮೂಲಕ ರಕ್ಷಿಸಲಾಗಿದೆ ಎಂದು ಹೇಳಿದರು.

  • 12 Mar 2022 01:08 PM (IST)

    Russia Ukraine War Live: ಮೈಕೋಲವಿವ ನಗರದ ಕ್ಯಾನ್ಸರ್ ಆಸ್ಪತ್ರೆಯನ್ನು ನಾಶ ಮಾಡಿದ ರಷ್ಯಾದ ಸೇನೆ

    ಉಕ್ರೇನ್ ರಾಜಧಾನಿ ಕೀವ್ ಬಳಿಯೇ ರಷ್ಯಾದ ಸೇನೆ ಜಮಾಯಿಸಿದೆ. ದಕ್ಷಿಣ ಭಾಗದ ಮೈಕೋಲವಿವ ನಗರದ ಕ್ಯಾನ್ಸರ್ ಆಸ್ಪತ್ರೆಯನ್ನು ರಷ್ಯಾದ ಸೇನೆ ನಾಶ ಮಾಡಿದೆ. ಆಸ್ಪತ್ರೆ ಮೇಲೆ ಶೆಲ್ ದಾಳಿ ನಡೆಸಿ ನಾಶ ಮಾಡಲಾಗಿದೆ.

  • 12 Mar 2022 01:04 PM (IST)

    Russia Ukraine War Live: ರಾಜಧಾನಿ ಕೀವ್‌ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಸೇನೆ

    ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ರಾಜಧಾನಿ ಕೀವ್‌ ನಗರಕ್ಕೆ ರಷ್ಯಾ ಸೇನೆ ಮುತ್ತಿಗೆ ಹಾಕಿದೆ. ಇಡೀ ಕೀವ್ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದ್ದು, ಕೀವ್ ನಗರದಲ್ಲಿ ರಷ್ಯಾ, ಉಕ್ರೇನ್ ಸೇನೆ ನಡುವೆ ಕಾಳಗ ಶುರುವಾಗಿದೆ.

  • 12 Mar 2022 01:01 PM (IST)

    Russia Ukraine War Live: ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ನಾಶದ ಎಚ್ಚರಿಕೆ ನೀಡಿದ ರಷ್ಯಾ ದೇಶ

    ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳಿಂದ ಇಂಟರ್ ನ್ಯಾಷನಲ್ ಬಾಹ್ಯಾಕಾಶ ಸ್ಟೇಷನ್ ಕುಸಿತಕ್ಕೆ ಕಾರಣವಾಗಬಹುದು ಎಂದು ರಷ್ಯಾದಿಂದ ಅಮೆರಿಕಾ, ಮಿತ್ರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ನಾಶದ ಕುರಿತು ರಷ್ಯಾ ದೇಶ ಎಚ್ಚರಿಕೆ ನೀಡಿದೆ.

  • 12 Mar 2022 12:58 PM (IST)

    Russia Ukraine War Live: ಸುಮಿ ನಗರಗಳಲ್ಲಿ ಮೊಳಗಿದ ಏರ್​ರೇಡ್ ಸೈರನ್

    ಉಕ್ರೇನ್​ನ ಪ್ರಮುಖ ನಗರಗಳಲ್ಲಿ ಏರ್​ರೇಡ್​ನ‌ ಸೈರನ್ ಮಾಡಲಾಗುತ್ತಿದೆ. ರಾಜಧಾನಿ ಕೀವ್, ಖಾರ್ಕೀವ್, ‌ಲಿವ್, ಚರ್ಕಸೆ, ಸುಮಿ ನಗರಗಳಲ್ಲಿ ಏರ್ ರೇಡ್ ಸೈರನ್ ಮೊಳಗಿದೆ. ರಷ್ಯಾ ಈ‌ ನಗರಗಳಲ್ಲಿ ಏರ್ ರೇಡ್ ನಡೆಸುವ ಮುನ್ಸೂಚನೆ ನೀಡಿದೆ. ಜನರು ಬಂಕರ್, ಸುರಕ್ಷಿತ ಸ್ಥಳಗಳಿಗೆ ತೆರಳಲು ಉಕ್ರೇನ್ ಸರ್ಕಾರದ ಸೂಚನೆ ನೀಡಿದೆ.

  • 12 Mar 2022 12:20 PM (IST)

    Russia Ukraine War Live: ಝಪೋರಿಝಿಯಾ ಅಣುಸ್ಥಾವರ ವಶಕ್ಕೆ ಪಡೆದ ರಷ್ಯಾ ಸೇನೆ

    ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಜೊತೆಗೆ ಸಾಕಷ್ಟು ಜನರನ್ನು ಸ್ಥಳಾಂತರ ಕೂಡ ಮಾಡಲಾಗುತ್ತಿದೆ. ಝಪೋರಿಝಿಯಾ ಅಣುಸ್ಥಾವರವನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದೆ.

  • 12 Mar 2022 12:10 PM (IST)

    Russia Ukraine War Live: ಮೃತದೇಹಗಳ ಅಂತ್ಯಸಂಸ್ಕಾರ ಕೂಡ ಮಾಡಲು ಆಗ್ತಿಲ್ಲ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. 12 ದಿನಗಳ ಯುದ್ಧದಲ್ಲಿ 1,500 ಜನರ ಸಾವನ್ನಪ್ಪಿದ್ದಾರೆ. ಮರಿಯುಪೋಲ್‌ನಲ್ಲಿ 1,500 ಜನರು ಮೃತಪಟ್ಟಿದ್ದಾರೆ ಎಂದು ಮರಿಯಪೋಲ್ ಮೇಯರ್ ಕಚೇರಿಯಿಂದ ಮಾಹಿತಿ ನೀಡಿದೆ. ರಷ್ಯಾ ಶೆಲ್ ದಾಳಿಗೆ ಹೆಣಗಳ ರಾಶಿಯೇ ಬಿದ್ದಿದೆ. ಮೃತ ದೇಹಗಳ ಅಂತ್ಯಸಂಸ್ಕಾರ ಕೂಡ ಮಾಡಲು ಆಗುತ್ತಿಲ್ಲ. ಜನರಿಗೆ ಆಹಾರ, ನೀರು ಕೂಡ ತಲುಪಿಸಲು ಆಗುತ್ತಿಲ್ಲ ಎಂದು ಮಾಹಿತಿ ನೀಡಿದೆ.

  • 12 Mar 2022 10:53 AM (IST)

    Russia Ukraine War Live: ಉಕ್ರೇನ್‌ನಾದ್ಯಂತ ಕೇಳಿಬರುತ್ತಿರುವ ಸೈರನ್ ಶಬ್ದ

    ಉಕ್ರೇನ್, ರಷ್ಯಾ ನಡುವೆ 17ನೇ ದಿನದ ಯುದ್ಧ ಮುಂದುವರೆದಿದೆ. ಉಕ್ರೇನ್‌ನಾದ್ಯಂತ ವಾಯುದಾಳಿಗೂ ಮುನ್ನ ಮಾಡುವ ಸೈರನ್ ಶಬ್ದ ಕೇಳಿಬರುತ್ತಿರುದೆ.

  • 12 Mar 2022 10:06 AM (IST)

    Russia Ukraine War Live: ಆಪರೇಷನ್ ಗಂಗಾ ಯೋಜನೆ ಯಶಸ್ವಿ; ಆರ್.ಅಶೋಕ್ ಹೇಳಿಕೆ

    ಉಕ್ರೇನ್​ಲ್ಲಿ ಸಿಲುಕಿರುವ ವಿಧ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದ್ದು, ಎಲ್ಲ ಭಾರತೀಯರನ್ನ ಸುರಕ್ಷಿತವಾಗಿ ಕರೆತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಲ್ಕು ಜನ ಸಚಿವರನ್ನ ಕಳಿಸಿಕೊಟ್ಟು ಸುರಕ್ಷಿತವಾಗಿ ದೇಶಕ್ಕೆ ಕರೆದುಕೊಂಡು ಬಂದಿದ್ದಾರೆ. ಆಪರೇಷನ್ ಗಂಗಾ ಯೋಜನೆ ಯಶಸ್ವಿಯಾಗಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

  • 12 Mar 2022 09:43 AM (IST)

    Russia Ukraine War Live: ರಷ್ಯಾದೊಂದಗಿನ ವ್ಯಾಪಾರ ಸಂಬಂಧಗಳು ಕೊನೆ

    ಉಕ್ರೇನ್ ಮತ್ತು ರಷ್ಯಾ ಯುದ್ಧವು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಸರಕುಗಳ ಮೇಲೆ ಕಡಿದಾದ ಸುಂಕವನ್ನು ಹೇರಲು ಅನುವು ಮಾಡಿಕೊಡುತ್ತದೆ. NATO ಮಿತ್ರರಾಷ್ಟ್ರಗಳು, ಗ್ರೂಪ್ ಆಫ್ ಸೆವೆನ್ ಮತ್ತು ಯುರೋಪಿಯನ್ ಯೂನಿಯನ್ ಜೊತೆಗಿನ ಸಮನ್ವಯದೊಂದಿಗೆ, ವಾಷಿಂಗ್ಟನ್ ಮತ್ತು ಬ್ರಸೆಲ್ಸ್ ಅವರು ರಷ್ಯಾಕ್ಕೆ ಐಷಾರಾಮಿ ವಸ್ತುಗಳ ರಫ್ತುಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ. ಈಯೂ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಇದು ರಷ್ಯಾಕ್ಕೆ ನೇರ ಹೊಡೆತವಾಗಿದೆ ಎಂದು ಹೇಳಿದ್ದಾರೆ.

  • 12 Mar 2022 09:18 AM (IST)

    Russia Ukraine War Live: ಉಕ್ರೇನ್​ನಲ್ಲಿ ರಷ್ಯಾ ಪರಮಾಣು ಸುರಕ್ಷತಾ ತತ್ವ ಉಲ್ಲಂಘನೆ

    ಉಕ್ರೇನ್‌ನಲ್ಲಿ ರಷ್ಯಾ ಪರಮಾಣು ಸುರಕ್ಷತಾ ತತ್ವಗಳನ್ನು ಉಲ್ಲಂಘಿಸುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಶುಕ್ರವಾರ ಆರೋಪ ಮಾಡಿದೆ. ಜೊತೆಗೆ ಪರಮಾಣು ವಿದ್ಯುತ್ ಸ್ಥಾವರಗಳ ಮೇಲೆ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದೆ.

  • 12 Mar 2022 08:42 AM (IST)

    Russia Ukraine War Live: ಚೆರ್ನೋಬಿಲ್ ಪರಮಾಣು ಸ್ಥಾವರ ದುರಸ್ತಿ

    ಚೆರ್ನೋಬಿಲ್ ಪರಮಾಣು ಸ್ಥಾವರ ದುರಸ್ತಿಯಾಗಿದ್ದು, ಉಕ್ರೇನ್‌ನ ಚೆರ್ನೋಬಿಲ್ ಹಾನಿಗೊಳಗಾದ ಪರಮಾಣು ಸ್ಥಾವರ ದುರಸ್ತಿ ಕಾರ್ಯ ನಡೆಯುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, ರಷ್ಯಾದಲ್ಲಿ ಯುಟ್ಯೂಬ್ ಚಾನೆಲ್‌ಗಳು ಬ್ಲಾಕ್ ಮಾಡಲಾಗಿದೆ. ರಷ್ಯಾಗೆ ಸಂಬಂಧಿಸಿದ ಯುಟ್ಯೂಬ್ ಚಾನೆಲ್‌ಗಳನ್ನು ಗುನ್ನಾ ಬ್ಲಾಕ್ ಮಾಡಲಾಗಿದೆ.

  • 12 Mar 2022 08:38 AM (IST)

    Russia Ukraine War Live: ಉಕ್ರೇನ್ ಆಸ್ಪತ್ರೆ, ವಸತಿ ಪ್ರದೇಶಗಳ ಮೇಲೆ ರಷ್ಯಾ ಸೇನೆ ದಾಳಿ

    ರಷ್ಯಾ ಸೇನೆ ಆಸ್ಪತ್ರೆ, ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದ್ದು, ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಉಕ್ರೇನ್‌ನ ಮೈಕೋಲೈವ್‌ನ ಕ್ಯಾನ್ಸರ್ ಆಸ್ಪತ್ರೆ ಮೇಲೆ ದಾಳಿ ಮಾಡಿದೆ. ರಷ್ಯಾ ಶೆಲ್ ದಾಳಿಯ ವೇಳೆ ರೋಗಿಗಳು ಆಸ್ಪತ್ರೆಯಲ್ಲಿದ್ದು, ನೂರಾರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಷ್ಯಾ ಶೆಲ್ ದಾಳಿಯಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲವೆಂದು ಮಾಹಿತಿ ನೀಡಿದೆ.

  • 12 Mar 2022 08:32 AM (IST)

    Russia Ukraine War Live: ಉಕ್ರೇನ್‌ನ ಮೆಲಿಟೊಪೋಲ್ ಮೇಯರ್​ನ್ನು ಕಿಡ್ನ್ಯಾಪ್ ಮಾಡಿದ ರಷ್ಯಾ

    ಉಕ್ರೇನ್‌ನ ಮೆಲಿಟೊಪೋಲ್ ಮೇಯರ್​ನ್ನು ರಷ್ಯಾ ಸೇನೆ ಕಿಡ್ನ್ಯಾಪ್ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದು ಐಸಿಸ್ ಉಗ್ರ ಸಂಘಟನೆ ಮಾಡುವ ಕೆಲಸದಂತಿದೆ ಎಂದು ಹೇಳಿದ್ದಾರೆ. ರಷ್ಯಾ ಪರಮಾಣು ಸುರಕ್ಷತಾ ನಿಯಮ ಉಲ್ಲಂಘಿಸುತ್ತಿದೆ ಎಂದು ರಷ್ಯಾ ಸೇನೆಯ ವಿರುದ್ಧ ಅಮೆರಿಕ ಆರೋಪ ಮಾಡಿದೆ.

  • 12 Mar 2022 08:28 AM (IST)

    Russia Ukraine War Live: ಉಕ್ರೇನ್​ ನಗರಗಳ ಮೇಲೆ ರಷ್ಯಾ ವಾಯುದಾಳಿ

    ಉಕ್ರೇನ್ ನಗರಗಳನ್ನ ಗುರಿಯಾಗಿಸಿ ರಷ್ಯಾದಿಂದ ಲುಟ್ಸ್ಕ್ ಮತ್ತು ಇವಾನೊ-ಫ್ರಾಂಕಿವ್ಸ್ಕ್ ನಗರಗಳ ಮೇಲೆ ವಾಯುದಾಳಿ ಮಾಡಲಾಗುತ್ತಿದೆ. ಕೀವ್ ನಗರವನ್ನು ರಷ್ಯಾ ಸೇನೆ ಸಮೀಪಿಸಿದ್ದು, ಕೀವ್‌ನಲ್ಲಿ ಬೆಳ್ಳಂಬೆಳಗ್ಗೆ ಬಾಂಬ್ ಸದ್ದು ಕೇಳಿಬಂದಿದೆ. ಉಕ್ರೇನ್ ರಾಜಧಾನಿ ಕೀವ್ ವಶಪಡಿಸಿಕೊಳ್ಳಲು ರಷ್ಯಾ ಯತ್ನಿಸುತ್ತಿದೆ.

  • 12 Mar 2022 08:23 AM (IST)

    Russia Ukraine War Live: ಉಕ್ರೇನ್‌ನಲ್ಲಿ ಈವರೆಗೆ 549 ನಾಗರಿಕರ ಸಾವು

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಹಿನ್ನೆಲೆ ಉಕ್ರೇನ್‌ನಲ್ಲಿ ಈವರೆಗೆ 549 ನಾಗರಿಕರು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ 957ಕ್ಕೂ ಹೆಚ್ಚು ನಾಗರಿಕರಿಗೆ ಗಾಯವಾಗಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ತೊರೆದಿದ್ದಾರೆ.

  • 12 Mar 2022 08:17 AM (IST)

    Russia Ukraine War Live: ಉಕ್ರೇನ್‌ನಿಂದ ನಿನ್ನೆ 7,144 ಜನರ ಸ್ಥಳಾಂತರ; ಉಕ್ರೇನ್ ಅಧ್ಯಕ್ಷ ಹೇಳಿಕೆ

    ಉಕ್ರೇನ್​ ಮೇಲೆ ರಷ್ಯಾಸೇನೆ ಯುದ್ಧ ಸಮರ ಮುಂದುವರೆಸಿದೆ. ಈಗಾಗಲೇ ಸಾಕಷ್ಟು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಉಕ್ರೇನ್‌ನಿಂದ ನಿನ್ನೆ 7,144 ಜನರನ್ನ ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಾಹಿತಿ ನೀಡಿದ್ದಾರೆ.

  • 12 Mar 2022 08:14 AM (IST)

    Russia Ukraine War Live: 14 ದಿನಗಳಿಂದ ತಾಯ್ನಾಡಿಗೆ ಬರಲು ಪ್ರಯತ್ನ; ವಿದ್ಯಾರ್ಥಿ ಹೇಳಿಕೆ

    ಉಕ್ರೇನ್​ನ ಸುಮಿ ಸ್ಟೇಟ್​ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ವಿದ್ಯಾರ್ಥಿಗಳು ಮರಳಿದ್ದಾರೆ. ಟಿವಿ 9ಗೆ ವಿದ್ಯಾರ್ಥಿ ಅಜಯ್ ಹೇಳಿಕೆ ನೀಡಿದ್ದಾರೆ. ಕಳೆದ 14 ದಿನಗಳಿಂದ ಭಾರತಕ್ಕೆ ಬರಲು ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ. ಸುಮಿ ಸ್ಟೇಟ್ ಒಳಭಾಗವನ್ನ ಉಕ್ರೇನ್ ಸೈನಿಕರು ಸುತ್ತುವರೆದಿದ್ದರು. ಸುಮಿ ಸ್ಟೇಟ್ ಹೊರಭಾಗದಲ್ಲಿ ರಷ್ಯಾದ ಮಿಲಿಟರಿ ಪಡೆ ಸುತ್ತುವರೆದಿದ್ದರು. ಕೀವ್, ಖಾರ್ಕೀವ್,ಸುಮಿ ಸ್ಟೇಟ್ ರಷ್ಯಾದ ಮಿಲಿಟರಿ ಪಡೆ ಟಾರ್ಗೇಟ್ ಆಗಿತ್ತು. ರಷ್ಯಾದ ಮಿಲಿಟರಿ ಪಡೆ ಮೂಲಭೂತ ಸೌಕರ್ಯಗಳು ಸಿಗದಂತೆ ಮಾಡಿದ್ರು. ಎಲೆಕ್ಟ್ರಸಿಟಿ, ನೀರು, ಆಹಾರ ಪೂರೈಕೆಯಲ್ಲಿ ತೊಂದರೆಯಾಗಿತ್ತು. ಕರ್ಪ್ಯೂ ನಡುವೆ ಎರಡ್ಮೂರು ದಿನ ಹಸಿವಿನಿಂದ ಕಾಲಕಳೆಯಬೇಕಾದ ಪರಿಸ್ಥಿತಿಯಿತ್ತು. ಹಣ ಡ್ರಾ ಮಾಡಲು ಎಟಿಮ್ ಗಳಲ್ಲೂ ಹಣ ಇರಲಿಲ್ಲ. ನವೀನ್ ಮೃತಪಟ್ಟ ಬಳಿಕ ವಿದ್ಯಾರ್ಥಿಗಳು ಮತ್ತಷ್ಟು ಅಲರ್ಟ್ ಆಗಿದ್ದೇವು. ಹಸಿವಿನಿಂದ ಇದ್ದ ನಮ್ಮೆಲ್ಲರಿಗೂ ಆಹಾರ ನೀಡಿ ಕರೆತಂದರು. ಕೊನೆಗೂ ಕೇಂದ್ರ ಸರ್ಕಾರ ನಮ್ಮನ್ನು ಸೇಫ್ ಆಗಿ ಕರೆತಂದಿದ್ದು, ಈಗ ನಮ್ಮ ಪೋಷಕರನ್ನ ಬಂದು ಸೇರಿದ್ದೇವೆ ಎಂದು ಧನ್ಯವಾದ ತಿಳಿಸಿದರು.

  • Published On - Mar 12,2022 8:06 AM

    Follow us
    ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
    ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
    Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
    Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
    ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
    ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
    ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್