ಕೈವ್: ಉಕ್ರೇನ್‌ನ (Ukraine) ಮೇಲಿನ ರಷ್ಯಾದ ಯುದ್ಧದ ಭೀಕರತೆಯ ನಡುವೆ ಕೈವ್‌ನಲ್ಲಿ ಏರ್ ರೇಡ್ ಶೆಲ್ಟರ್ನಲ್ಲಿ ಆಶ್ರಯ ಪಡೆದಿದ್ದ ಕುಟುಂಬವೊಂದರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೆಡೆ ನೂರಾರು ಜನರು ಯುದ್ಧದಲ್ಲಿ ಸಾವನ್ನಪ್ಪಿರುವ ನಡುವೆ ಇನ್ನೊಂದೆಡೆ ಹೊಸ ಜೀವವೊಂದು ಭೂಮಿಗೆ ಕಾಲಿಟ್ಟಿದೆ. ಈ ಮೂಲಕ ಪ್ರಾಣಭೀತಿಯ ನಡುವೆಯೂ ಆ ಕುಟುಂಬ ಸಂತಸದಿಂದ ಮಗುವನ್ನು ಸ್ವಾಗತಿಸಿದೆ.
ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. “ಕೈವ್ನ ಶೆಲ್ಟರ್ನಲ್ಲಿ ಮೊದಲ ಮಗುವೊಂದು ಜನಿಸಿದೆ. ಸುತ್ತಲೂ ಉರಿಯುತ್ತಿರುವ ಕಟ್ಟಡಗಳು ಮತ್ತು ರಷ್ಯಾದ ಟ್ಯಾಂಕ್‌ಗಳ ಪಕ್ಕದಲ್ಲಿ ನಾವು ಆ ಮಗುವನ್ನು ಸ್ವಾತಂತ್ರ್ಯ ಎಂದು ಕರೆಯಬಹುದು!” ಎಂದು ಟ್ವೀಟ್ ಮಾಡಲಾಗಿದೆ.
First (to our knowledge) baby was born in one of the shelters in Kyiv. Under the ground, next to the burning buildings and Russian tanks… We shall call her Freedom! ?? Believe in Ukraine, #StandWithUkraine pic.twitter.com/gyV7l2y9K1
— MFA of Ukraine ?? (@MFA_Ukraine) February 26, 2022
ಮಗು ಮುದ್ದಾಗಿ ಮಲಗಿರುವ ಫೋಟೋವೊಂದನ್ನು ಟ್ವೀಟ್ ಜೊತೆಗೆ ಅಪ್ಲೋಡ್ ಮಾಡಲಾಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಹೆಣ್ಣು ಮಗುವಿಗೆ ಮಿಯಾ ಎಂದು ಹೆಸರಿಡಲಾಗಿದೆ. ಭೂಗತ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದ 23 ವರ್ಷದ ಮಹಿಳೆಗೆ ಈ ಮಗು ಜನಿಸಿದೆ.
ಉಕ್ರೇನಿಯನ್ ಪೊಲೀಸ್ ಅಧಿಕಾರಿಗಳೇ ಹೆರಿಗೆ ಮಾಡಿ, ಮಿಯಾಳನ್ನು ಆಕೆಯ ಅಮ್ಮನ ಕೈಗೆ ಇಟ್ಟಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
Russia-Ukraine War: ಕೈವ್ ಬಳಿ 14 ಜನರಿದ್ದ ಉಕ್ರೇನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ರಷ್ಯಾ ಸೇನೆ
Published On - 6:24 pm, Sat, 26 February 22