ಮಾಸ್ಕೋ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಚ್ಚಿಟ್ಟಿದ್ದ ಬಾಂಬ್ ಸ್ಫೋಟದಿಂದ ಮಾಸ್ಕೋದಲ್ಲಿ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ರಷ್ಯಾದ ಹಿರಿಯ ಜನರಲ್ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಇಂದು (ಮಂಗಳವಾರ) ಮೃತಪಟ್ಟಿದ್ದಾರೆ. ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ಸಂರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಅವರು ಕ್ರೆಮ್ಲಿನ್‌ನಿಂದ ಆಗ್ನೇಯಕ್ಕೆ 7 ಕಿ.ಮೀ ದೂರದಲ್ಲಿರುವ ರಿಯಾಜಾನ್ಸ್ಕಿ ಪ್ರಾಸ್ಪೆಕ್ಟ್‌ನಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡದ ಬಳಿ ಬಾಂಬ್ ದಾಳಿಯಿಂದ ಮೃತರಾಗಿದ್ದಾರೆ.
ಜನರಲ್ ಕಿರಿಲ್ಲೋವ್ ಅವರ ಸಹಾಯಕ ಸಹ ಈ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಮಯದಲ್ಲಿ ನಿಷೇಧಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿದ್ದಕ್ಕಾಗಿ ಕಿರಿಲ್ಲೋವ್‌ಗೆ ಉಕ್ರೇನಿಯನ್ ನ್ಯಾಯಾಲಯ ಸೋಮವಾರ ಗೈರುಹಾಜರಿ ಶಿಕ್ಷೆ ವಿಧಿಸಿತ್ತು.
BREAKING: Lieutenant General Igor Kirillov, head of Russia’s chemical and biological defense forces, killed in Moscow blast pic.twitter.com/ENBbMbXACG
— RT (@RT_com) December 17, 2024
ಇದನ್ನೂ ಓದಿ: ಮಹಾಯುದ್ಧದ ಭೀತಿ; ಮೊಟ್ಟ ಮೊದಲ ಬಾರಿಗೆ ರಷ್ಯಾದಿಂದ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ರಿಮೋಟ್‌ನಿಂದ ಸ್ಫೋಟಿಸಲಾದ ಸ್ಫೋಟಕ ಸಾಧನದ ಶಕ್ತಿಯು ಸುಮಾರು 300 ಗ್ರಾಂ ಟಿಎನ್‌ಟಿಯಷ್ಟಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ವರದಿ ಮಾಡಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಕ್ಕಾಗಿ ಉಕ್ರೇನಿಯನ್ ಕೋರ್ಟ್ ಜನರಲ್ ಕಿರಿಲ್ಲೋವ್ ಅವರಿಗೆ ಗೈರುಹಾಜರಾಗಿದ್ದಕ್ಕೆ ಶಿಕ್ಷೆ ವಿಧಿಸಿತ್ತು. ಅದಾದ ಒಂದು ದಿನದ ನಂತರ ಕಿರಿಲ್ಲೋವ್ ಅವರ ಸಾವು ಸಂಭವಿಸಿದೆ. ಉಕ್ರೇನ್‌ನ ಭದ್ರತಾ ಸೇವೆಯ ಪ್ರಕಾರ, ಯುದ್ಧದ ಆರಂಭದಿಂದಲೂ ಕಿರಿಲ್ವ್ಲೋವ್ ಅವರ ಆದೇಶದ ಮೇರೆಗೆ ರಷ್ಯಾದ ರಾಸಾಯನಿಕ ಯುದ್ಧಸಾಮಗ್ರಿಗಳ ಬಳಕೆಯ 4,800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ