ಮಹಾಯುದ್ಧದ ಭೀತಿ; ಮೊಟ್ಟ ಮೊದಲ ಬಾರಿಗೆ ರಷ್ಯಾದಿಂದ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ರಷ್ಯಾ ಇಂದು ಉಕ್ರೇನ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಅನ್ನು ಉಡಾವಣೆ ಮಾಡಿದೆ. ರಷ್ಯಾದ ವಾಯುಪಡೆಯು ಯುದ್ಧದಲ್ಲಿ ಮೊದಲ ಬಾರಿಗೆ ಸಾವಿರಾರು ಕಿಲೋಮೀಟರ್‌ಗಳ ವ್ಯಾಪ್ತಿಯೊಂದಿಗೆ ಅಂತಹ ಶಕ್ತಿಶಾಲಿ, ಪರಮಾಣು-ಸಾಮರ್ಥ್ಯದ ಅಸ್ತ್ರದ ಬಳಕೆಯನ್ನು ಮಾಡಿದೆ.

ಮಹಾಯುದ್ಧದ ಭೀತಿ; ಮೊಟ್ಟ ಮೊದಲ ಬಾರಿಗೆ ರಷ್ಯಾದಿಂದ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ಕ್ಷಿಪಣಿ
Follow us
ಸುಷ್ಮಾ ಚಕ್ರೆ
|

Updated on: Nov 21, 2024 | 5:56 PM

ಉಕ್ರೇನ್: ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಭಾರತ ಸೇರಿದಂತೆ ಕೆಲವು ದೇಶಗಳು ಪ್ರಯತ್ನಿಸುತ್ತಲೇ ಇವೆ. ಭಾರತ ಶಾಂತಿಯುತ ಮಾತುಕತೆಯ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಹಲವು ಬಾರಿ ಮನವಿ ಮಾಡಿದೆ. ಅಮೆರಿಕ, ಫ್ರಾನ್ಸ್ ಸೇರಿದಂತೆ ಇತರೆ ದೇಶಗಳು ಕೂಡ ಇದಕ್ಕೆ ಧ್ವನಿ ಸೇರಿಸಿದ್ದವು. ಆದರೆ, ಈ ಎರಡು ರಾಷ್ಟ್ರಗಳ ಯುದ್ಧ ಭೀಕರ ಹಂತಕ್ಕೆ ಹೋಗಿದ್ದು, ರಷ್ಯಾ ಮೊದಲ ಬಾರಿಗೆ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಐಸಿಬಿಎಂ ಪ್ರಯೋಗ ಮಾಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಕುರಿತ ನಿಯಮಾವಳಿಯಲ್ಲಿ ಬದಲಾವಣೆ ತರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಯುದ್ಧದಲ್ಲಿ ಮೊದಲ ಬಾರಿ ರಷ್ಯಾ ಐಸಿಬಿಎಂ ಅನ್ನು ಬಳಕೆ ಮಾಡಿದೆ. ಈ ಬಗ್ಗೆ ಉಕ್ರೇನ್ ವಾಯುಪಡೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಷ್ಯಾ ಇಂದು ಬೆಳಗ್ಗೆ ಮಧ್ಯ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದೆ ಎಂದು ಹೇಳಿದೆ. ಆದರೆ, ಇದರಿಂದ ಆಗಿರುವ ಹಾನಿ ಅಥವಾ ಸಾವುನೋವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉಕ್ರೇನ್ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಉಕ್ರೇನ್​ ಯುದ್ಧವನ್ನು ಉಲ್ಬಣಗೊಳಿಸದಂತೆ ರಷ್ಯಾ ಅಧ್ಯಕ್ಷ ಪುಟಿನ್​ಗೆ ಟ್ರಂಪ್ ಸಲಹೆ

ಉಕ್ರೇನ್ ಕಳೆದ ವಾರಾಂತ್ಯದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ನಿರ್ಮಿತ ಕ್ಷಿಪಣಿಗಳನ್ನು ರಷ್ಯಾದ ಮೇಲೆ ಉಡಆವಣೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇದೇ ಮೊದಲ ಬಾರಿಗೆ ಯುದ್ಧದಲ್ಲಿ ರಷ್ಯಾ ಐಸಿಬಿಎಂ ಪ್ರಯೋಗ ಮಾಡಿದೆ. ಉಕ್ರೇನ್​ನಲ್ಲಿ ಯುದ್ಧದ ಭೀಕರತೆ ಹೆಚ್ಚಾಗಿರುವುದರಿಂದ ಈಗಾಗಲೇ ಭಾರತ, ಅಮೆರಿಕಾ ಮುಂತಾದ ದೇಶಗಳು ಕೈವ್​ನಲ್ಲಿನ ರಾಯಭಾರ ಕಚೇರಿಯನ್ನು ಬಂದ್ ಮಾಡಿವೆ.

ಪುಟಿನ್ ಹೇಳಿದ್ದೇನು?:

ರಷ್ಯಾ ಉಕ್ರೇನ್ ಮೇಲೆ ಪರಮಾಣು ಅಣ್ವಸ್ತ್ರ ಬಳಕೆ ಮಾಡುವ ಬಗ್ಗೆ ಆತಂಕ ಹೆಚ್ಚುತ್ತಲೇ ಇತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಅಣ್ವಸ್ತ್ರ ನೀತಿಯಲ್ಲಿ ಬದಲಾವಣೆ ತರುವುದಾಗಿ ಘೋಷಿಸಿದ್ದರು. ಯುದ್ಧಕ್ಕೆ ವಿರಾಮ ನೀಡುವ ಒಪ್ಪಂದಕ್ಕೆ ಅಮೆರಿಕದ ಡೊನಾಲ್ಡ್​ ಟ್ರಂಪ್ ಜೊತೆ ಷರತ್ತುಬದ್ಧ ಮಾತುಕತೆಗೆ ಸಿದ್ಧ ಎಂದು ಪುಟಿನ್ ಹೇಳಿದ್ದರು. ಪರಮಾಣು ನಿಯಮಾವಳಿಯಲ್ಲಿ ಬದಲಾವಣೆ ತರುವುದಾಗಿ ಅವರು ಘೋಷಿಸಿದ್ದರು. ಅದರ ಬೆನ್ನಲ್ಲೇ ಉಕ್ರೇನ್ ಮೇಲಿನ ಈ ದಾಳಿ ನಡೆದಿದೆ.

ಏನಿದು ಬ್ಯಾಲಿಸ್ಟಿಕ್ ಕ್ಷಿಪಣಿ?:

ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೆಲ್ (ICBM) ಎಂದರೇನು? ರಷ್ಯನ್ನರು ಅದನ್ನು ನಿಜವಾಗಿಯೂ ಉಡಾಯಿಸಬಹುದೇ? ಎಂಬ ಕುರಿತು ಮಾಹಿತಿ ಇಲ್ಲಿದೆ.

ಕೈವ್‌ಗೆ ನಿಷ್ಠುರ ಸಂದೇಶ ರವಾನಿಸಿರುವ ರಷ್ಯಾ ಉಕ್ರೇನ್‌ನಲ್ಲಿ ICBM ಅನ್ನು ಉಡಾಯಿಸಿದೆ. ವ್ಲಾಡಿಮಿರ್ ಪುಟಿನ್ ಮಾಸ್ಕೋದ ಪರಮಾಣು ಸಿದ್ಧಾಂತವನ್ನು ಬದಲಾಯಿಸಿದ ಒಂದು ದಿನದ ನಂತರ ರಷ್ಯಾ ಉಕ್ರೇನ್‌ನಲ್ಲಿ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೆಲ್ ಅಥವಾ ICBM ಅನ್ನು ಉಡಾಯಿಸಿದೆ. ICBMನ ದಾಳಿಯು ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮಾಸ್ಕೋದ ಗಡಿಯ ಗೆರೆಗಳನ್ನು ಗೌರವಿಸಬೇಕು ಎಂಬ ಕಠಿಣ ಎಚ್ಚರಿಕೆಯನ್ನು ರಷ್ಯಾ ರವಾನಿಸಿದೆ.

ಇದನ್ನೂ ಓದಿ: ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

ರಷ್ಯಾ ಇಂದು ಉಕ್ರೇನ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಅನ್ನು ಉಡಾವಣೆ ಮಾಡಿದೆ. ರಷ್ಯಾದ ವಾಯುಪಡೆಯು ಯುದ್ಧದಲ್ಲಿ ಮೊದಲ ಬಾರಿಗೆ ಸಾವಿರಾರು ಕಿಲೋಮೀಟರ್‌ಗಳ ವ್ಯಾಪ್ತಿಯೊಂದಿಗೆ ಅಂತಹ ಶಕ್ತಿಶಾಲಿ, ಪರಮಾಣು-ಸಾಮರ್ಥ್ಯದ ಅಸ್ತ್ರದ ಬಳಕೆಯನ್ನು ಮಾಡಿದೆ. ರಷ್ಯಾದ ಕ್ಷಿಪಣಿ ದಾಳಿಯು ಮಧ್ಯ-ಪೂರ್ವ ನಗರವಾದ ದ್ನಿಪ್ರೊದಲ್ಲಿನ ಉದ್ಯಮಗಳು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ICBM ಏನು ಗುರಿಯಿಟ್ಟುಕೊಂಡಿದೆ ಅಥವಾ ಅದು ಯಾವುದಾದರೂ ಹಾನಿಯನ್ನುಂಟುಮಾಡಿದೆಯೇ ಎಂದು ವಾಯುಪಡೆಯು ಹೇಳಲಿಲ್ಲ.

ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು (ICBM) ಪರಮಾಣು ಸಿಡಿತಲೆಗಳನ್ನು ತಲುಪಿಸಲು ವಿನ್ಯಾಸಗೊಳಿಸಲಾದ ಕಾರ್ಯತಂತ್ರದ ಶಸ್ತ್ರಾಸ್ತ್ರಗಳಾಗಿವೆ. ಇದು ರಷ್ಯಾದ ಪರಮಾಣು ನಿರೋಧಕದ ಪ್ರಮುಖ ಭಾಗವಾಗಿದೆ. ಈ ಕ್ಷಿಪಣಿಗಳು ವಾತಾವರಣದ ಮೂಲಕ ಹೆಚ್ಚಿನ ವೇಗದಲ್ಲಿ ಚಲಿಸಲು ಸಮರ್ಥವಾಗಿವೆ. ಇದು ಶಾಖಕ್ಕೆ ನಿರೋಧಕವಾಗಿರುತ್ತವೆ.

2006ರಲ್ಲಿ ಈ ಕ್ಷಿಪಣಿಯನ್ನು ರಚಿಸಲಾಗಿದ್ದರೂ 2018ರಲ್ಲಿ ರಷ್ಯಾದ ಶಸ್ತ್ರಾಸ್ತ್ರ ಕಾರ್ಯಕ್ರಮದಿಂದ ಈ ಕ್ಷಿಪಣಿಯನ್ನು ಹೊರಗಿಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ವರ್ಷ ಜುಲೈನಲ್ಲಿ ಕ್ರೆಮ್ಲಿನ್ ಮಧ್ಯಮ ಮತ್ತು ಕಡಿಮೆ-ಶ್ರೇಣಿಯ ಕ್ಷಿಪಣಿಗಳ ಉತ್ಪಾದನೆಯನ್ನು ಪುನರಾರಂಭಿಸಲು ಸುಳಿವು ನೀಡಿತು. ಇದರಲ್ಲಿ RS-26 “Rubezh.” RS-26 “Topol-M” ಕ್ಷಿಪಣಿಯ ಎರಡು ಹಂತಗಳನ್ನು ಆಧರಿಸಿದೆ.

ಉಕ್ರೇನ್ ಮೇಲೆ ಉಡಾಯಿಸಲಾದ ಈ ಕ್ಷಿಪಣಿಯು ಯಾವ ರೀತಿಯ ಸಿಡಿತಲೆ ಹೊಂದಿದೆ ಅಥವಾ ಅದು ಯಾವ ರೀತಿಯ ಕ್ಷಿಪಣಿ ಎಂದು ಉಕ್ರೇನಿಯನ್ನರು ನಿರ್ದಿಷ್ಟವಾಗಿ ಬಹಿರಂಗಪಡಿಸಲಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ