ಕೊರೊನಾ ತಂದಿಟ್ಟ ಸಂಕಷ್ಟ: ಬಯಲಲ್ಲೇ ಆಸ್ಪತ್ರೆ ನಿರ್ಮಾಣ!

| Updated By:

Updated on: May 23, 2020 | 2:23 PM

ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದೇ ಕಷ್ಟವಾಗ್ತಿದೆ. ಹೀಗಾಗಿ, ರಷ್ಯಾ ಸೇನಾ ಪಡೆಯು ಬ್ಯೂನಾಕ್ಸ್​ನಲ್ಲಿ ಬಯಲು ಆಸ್ಪತ್ರೆಗಳನ್ನ ಮಾಡ್ತಿದ್ದಾರೆ. ಶೆಡ್​ಗಳಂತೆ ಆಸ್ಪತ್ರೆಗಳನ್ನ ನಿರ್ಮಿಸಿ, ವೈದ್ಯಕೀಯ ಉಪಕರಣಗಳನ್ನ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಷ್ಯಾದಲ್ಲಿ ಈವರೆಗೂ 3 ಲಕ್ಷ 30 ಸಾವಿರ ಕೊರೊನಾ ಸೋಂಕಿತರಿದ್ದಾರೆ. ಬೊಲ್ಸಾನಾರೋ ಮೇಲೆ ಒತ್ತಡ: ಬ್ರೆಜಿಲ್​ನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದ್ರೂ, ಅಧ್ಯಕ್ಷ ಬೊಲ್ಸಾನಾರೋರಿಂದ ವೈರಸ್ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅವರು ಕೇವಲ ತಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಲು […]

ಕೊರೊನಾ ತಂದಿಟ್ಟ ಸಂಕಷ್ಟ: ಬಯಲಲ್ಲೇ ಆಸ್ಪತ್ರೆ ನಿರ್ಮಾಣ!
Follow us on

ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದೇ ಕಷ್ಟವಾಗ್ತಿದೆ. ಹೀಗಾಗಿ, ರಷ್ಯಾ ಸೇನಾ ಪಡೆಯು ಬ್ಯೂನಾಕ್ಸ್​ನಲ್ಲಿ ಬಯಲು ಆಸ್ಪತ್ರೆಗಳನ್ನ ಮಾಡ್ತಿದ್ದಾರೆ. ಶೆಡ್​ಗಳಂತೆ ಆಸ್ಪತ್ರೆಗಳನ್ನ ನಿರ್ಮಿಸಿ, ವೈದ್ಯಕೀಯ ಉಪಕರಣಗಳನ್ನ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಷ್ಯಾದಲ್ಲಿ ಈವರೆಗೂ 3 ಲಕ್ಷ 30 ಸಾವಿರ ಕೊರೊನಾ ಸೋಂಕಿತರಿದ್ದಾರೆ.

ಬೊಲ್ಸಾನಾರೋ ಮೇಲೆ ಒತ್ತಡ:
ಬ್ರೆಜಿಲ್​ನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದ್ರೂ, ಅಧ್ಯಕ್ಷ ಬೊಲ್ಸಾನಾರೋರಿಂದ ವೈರಸ್ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅವರು ಕೇವಲ ತಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಲು ಕೆಲ ಪೊಲೀಸ್ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಿದ್ದಾರೆ ಅನ್ನುವ ವಿಡಿಯೋ ರಿಲೀಸ್ ಮಾಡಲಾಗಿದೆ. ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಮಾತನಾಡಿರೋ ಬೊಲ್ಸಾನಾರೋ, ಅಗತ್ಯವಿದ್ದರೆ ಮಂತ್ರಿಮಂಡಲವನ್ನೇ ಬದಲಾಯಿಸುವ ಬಗ್ಗೆ ಕುಪಿತರಾಗಿ ಮಾತನಾಡಿದ್ದಾರೆ. ಬೊಲ್ಸಾನಾರೋ ರಾಜೀನಾಮೆಗೆ ಒತ್ತ ಹೆಚ್ಚಿದೆ.

ಚಿಲಿ ಗಲಿಬಿಲಿ:
ಕೊರೊನಾ ವೈರಸ್​ನಿಂದಾಗಿ ಚಿಲಿ ದೇಶದಲ್ಲಿ ಸೋಂಕಿತರ ಸಂಖ್ಯೆಯೇ 53 ಸಾವಿರ ದಾಟಿದೆ. ಬಡವರು ಹೆಚ್ಚಾಗಿರುವ ಏರಿಯಾಗಳಲ್ಲೇ ಸೋಂಕು ಹರಡುತ್ತಿದೆ.. ಹೀಗಾಗಿ, ಲಾಕ್​ಡೌನ್ ಹೇರಿದ್ದು, ಬಡ ಕುಟುಂಬಗಳಿಗೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಸ್ಥಳೀಯ ಆಡಳಿತದವರು ಮನೆ ಮನೆಗೆ ತೆರಳಿ ಆಹಾರದ ಕಿಟ್​ಗಳನ್ನ ವಿತರಣೆ ಮಾಡುತ್ತಿವೆ. ಕಳೆದ 7 ದಿನಗಳಲ್ಲಿ 10 ಸಾವಿರ ಸೋಂಕಿತರು ಹೆಚ್ಚಾಗಿರೋದು ಚಿಲಿ ಗಲಿಬಿಲಿಗೊಳ್ಳುವಂತೆ ಮಾಡಿದೆ.

ಇಟಲಿಯಲ್ಲಿ ಜನರ ನಿರ್ಲಕ್ಷ್ಯ:
ಕೊರೊನಾ ವೈರಸ್​ನಿಂದ ನಲುಗಿ ಹೋಗಿದ್ದ ಇಟಲಿ ಈ ಸಹಜ ಸ್ಥಿತಿಗೆ ಮರಳುತ್ತಿದೆ. ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ, ಮನೆಯಲ್ಲಿ ಬಂಧಿಯಾಗಿದ್ದ ನಾಗರೀಕರು ನೈಟ್ ಲೈಫ್​ಗೆ ಮರಳಿದ್ದಾರೆ. ಬಾರ್ ಪಬ್​ಗಳತ್ತ ಆಗಮಿಸ್ತಿದ್ದು ಮದ್ಯ ಹೀರುತ್ತಾ ಎಂಜಾಜ್ ಮಾಡ್ತಿದ್ದಾರೆ. ಆದ್ರೆ, ಸಾಮಾಜಿಕ ಅಂತರವೇ ಇಲ್ಲದೇ, ಮಾಸ್ಕ್ ಕೂಡ ಧರಿಸದೇ ಗುಂಪು ಗುಂಪಾಗಿ ಸೇರುತ್ತಿದ್ದಾರೆ.

ಜೂನ್​ವರೆಗೂ ಲಾಕ್​ಡೌನ್:
ಕೊರೊನಾ ವೈರಸ್ ಪೆರು ರಾಷ್ಟ್ರವನ್ನ ಪತರುಗುಟ್ಟುವಂತೆ ಮಾಡಿದೆ. ಮಾರ್ಚ್​ನಿಂದಲೇ ಲಾಕ್​ಡೌನ್ ಹೇರಲಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,11,698 ಜನರಿದ್ದಾರೆ. ಲ್ಯಾಟಿನ್ ಅಮೆರಿಕದ ಬಳಿಕ ಎರಡನೇ ಅತಿಹೆಚ್ಚು ಸೋಂಕಿತರು ಇಲ್ಲಿದ್ದಾರೆ. ಹೀಗಾಗಿ, ಸೋಂಕು ತಡೆಗೆ ಮುಂದಾಗಿರೋ ಅಧ್ಯಕ್ಷ ಮಾರ್ಟಿನ್ ವಿಜ್ಕಾರ್ರೋ ಜೂನ್ ಅಂತ್ಯದ ವರೆಗೂ ಲಾಕ್​ಡೌನ್​ ವಿಸ್ತರಣೆ ಮಾಡಿದ್ದಾರೆ.

ಕೊರೊನಾ ‘ತಾಂಡವ’:
ವಿಶ್ವದಲ್ಲಿ ಕೊರೊನಾ ವೈರಸ್ ರುದ್ರ ತಾಂಡವವಾಡ್ತಿದ್ದು, ಸೋಂಕಿತರ ಸಂಖ್ಯೆ 5ಕೋಟಿ ದಾಟಿದೆ. ಮೃತಪಟ್ಟವರ ಸಂಖ್ಯೆ 3 ಲಕ್ಷ ಮೀರಿದೆ. ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪಟ್ಟಾಗ್ತಿದೆ. 1 ಕೋಟಿ 58 ಲಕ್ಷ ಸೋಂಕಿತರು ದೇಶದಲ್ಲಿದ್ರೆ, 95 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಬ್ರೆಜಿಲ್​ನಲ್ಲಿ 3 ಲಕ್ಷದ 32 ಸಾವಿರ ಜನರಿದ್ರೆ, ರಷ್ಯಾದಲ್ಲಿ 3 ಲಕ್ಷದ 26 ಸಾವಿರ ದಾಟಿದೆ. ಸ್ಪೇನ್​ನಲ್ಲಿ 2ಲ ಕ್ಷದ 81 ಸಾವಿರ ಹಾಗೂ ಇಂಗ್ಲೆಂಡ್​ನಲ್ಲಿ 2 ಲಕ್ಷದ 54 ಸಾವಿರ ಸೋಂಕಿತರಿದ್ರೆ, ಇಟಲಿಯಲ್ಲಿ 2 ಲಕ್ಷದ 28 ಸಾವಿರ ಸೋಂಕಿನ ಸುಳಿಗೆ ಸಿಲುಕಿದ್ದಾರೆ.