ಕೈವ್: ಉಕ್ರೇನ್‌ನ ಡ್ನಿಪ್ರೊ (Dnipro) ನಗರದ ಮೇಲೆ ರಷ್ಯಾದಿಂದ ಶುಕ್ರವಾರ ನಡೆದ ಕ್ಷಿಪಣಿ ದಾಳಿಯಿಂದ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಲೆಂಟಿನ್ ರೆಜ್ನಿಚೆಂಕೊ ಹೇಳಿದ್ದಾರೆ. ರಾಕೆಟ್‌ಗಳು ಕೈಗಾರಿಕಾ ಸ್ಥಾವರ ಮತ್ತು ಅದರ ಪಕ್ಕದ ಜನನಿಬಿಡ ಬೀದಿಗೆ ಅಪ್ಪಳಿಸಿವೆ ಎಂದು ರೆಜಿನ್‌ಚೆಂಕೊ ತನ್ನ ಫೇಸ್‌ಬುಕ್ (Facebook) ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ರಷ್ಯಾದ (Russia) ಕ್ಷಿಪಣಿ ದಾಳಿಯು ಉಕ್ರೇನ್‌ನ 3 ಜನರ ಪ್ರಾಣವನ್ನು ತೆಗೆದುಕೊಂಡಿದೆ. ಇನ್ನೂ 15 ಜನರು ಗಾಯಗೊಂಡಿದ್ದಾರೆ. ಹಾನಿಯ ಪ್ರಮಾಣ ಎಷ್ಟಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಪ್ರಾದೇಶಿಕ ಗವರ್ನರ್ ವ್ಯಾಲೆಂಟಿನ್ ರೆಜ್ನಿಚೆಂಕೊ ಪ್ರಕಾರ, ಶುಕ್ರವಾರ ಮಧ್ಯ ಉಕ್ರೇನಿಯನ್ ನಗರವಾದ ಡ್ನಿಪ್ರೊ ಮೇಲೆ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: Rocket Attack: ಉಕ್ರೇನ್ ಅಪಾರ್ಟ್ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಮಂದಿ ಸಾವು
“ರಾಕೆಟ್‌ಗಳು ಕೈಗಾರಿಕಾ ಸ್ಥಾವರವನ್ನು ಮತ್ತು ಅದರ ಪಕ್ಕದ ಜನನಿಬಿಡ ರಸ್ತೆಯನ್ನು ಅಪ್ಪಳಿಸಿವೆ” ಎಂದು ರೆಜಿಂಚೆಂಕೊ ತನ್ನ ಫೇಸ್‌ಬುಕ್ ಪೇಜ್ನಲ್ಲಿ ತಿಳಿಸಿದ್ದಾರೆ. ಕ್ಯಾಸ್ಪಿಯನ್ ಸಮುದ್ರದ ಮೇಲೆ ಆಯಕಟ್ಟಿನ ಬಾಂಬರ್‌ಗಳಿಂದ ಹಾರಿಸಲಾದ ಹಲವಾರು ಕ್ರೂಸ್ ಕ್ಷಿಪಣಿಗಳು ರಾತ್ರಿ 10 ಗಂಟೆಗೆ ಡ್ನಿಪರ್ ನದಿಯ ಪ್ರಮುಖ ನಗರವಾದ ಡ್ನಿಪ್ರೊದಲ್ಲಿರುವ ಕಾರ್ಖಾನೆಯ ಮೇಲೆ ಅಪ್ಪಳಿಸಿವೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ.
ರಾಜಧಾನಿ ಕೈವ್‌ನ ನೈಋತ್ಯದಲ್ಲಿರುವ ವಿನ್ನಿಟ್ಸಿಯಾದಲ್ಲಿ ರಷ್ಯಾದ ಕ್ಷಿಪಣಿ ದಾಳಿಯಲ್ಲಿ 23 ಜನ ಸಾವನ್ನಪ್ಪಿದ್ದರು. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಡ್ನಿಪ್ರೊ ಮೇಲಿನ ದಾಳಿ ನಡೆದಿದೆ.
Published On - 8:31 am, Sat, 16 July 22