ರಷ್ಯಾ ಸೈನಿಕರ ಅಟ್ಟಹಾಸ! ಕನ್ನಡಿಗರೂ ಸೇರಿದಂತೆ ಭಾರತೀಯರ ಮೇಲೆ ಪೋಲ್ಯಾಂಡ್ ಗಡಿಯಲ್ಲಿ ಹಲ್ಲೆ, ಆತಂಕದಲ್ಲಿ ಕನ್ನಡಿಗರು

| Updated By: ಸಾಧು ಶ್ರೀನಾಥ್​

Updated on: Feb 28, 2022 | 8:44 AM

ಉಕ್ರೇನ್​ನಿಂದ ಬಂದು ಬದುಕಿದ್ರೆ ಸಾಕಪ್ಪಾ ಅಂತಿದ್ದವರಿಗೆ, ಗಡಿಯಲ್ಲೂ ನರಕ ದರ್ಶನವಾಗ್ತಿದೆ. ಭಾರತ ಮತ್ತು ವಿವಿಧ ದೇಶಗಳ ಜನ ಆತಂಕದಲ್ಲೇ ಕಾಲ ಕಳೀತಿದ್ದಾರೆ. ರಾಯಭಾರ ಕಚೇರಿಗಳು ಗಡಿಯಲ್ಲಿ ಅತಂತ್ರರಾದವರ ನೆರವಿಗೆ ಬರಬೇಕಿದೆ.

ರಷ್ಯಾ ಸೈನಿಕರ ಅಟ್ಟಹಾಸ! ಕನ್ನಡಿಗರೂ ಸೇರಿದಂತೆ ಭಾರತೀಯರ ಮೇಲೆ ಪೋಲ್ಯಾಂಡ್ ಗಡಿಯಲ್ಲಿ ಹಲ್ಲೆ, ಆತಂಕದಲ್ಲಿ ಕನ್ನಡಿಗರು
ರಷ್ಯಾ ಸೈನಿಕರ ಅಟ್ಟಹಾಸ! ಕನ್ನಡಿಗರೂ ಸೇರಿದಂತೆ ಭಾರತೀಯರ ಮೇಲೆ ಪೋಲ್ಯಾಂಡ್ ಗಡಿಯಲ್ಲಿ ಹಲ್ಲೆ, ಆತಂಕದಲ್ಲಿ ಕನ್ನಡಿಗರು
Follow us on

ಬಲಾಢ್ಯ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಸಾರಥ್ಯದ ರಷ್ಯಾಕ್ಕೆ ಪುಟ್ಟ ಉಕ್ರೇನ್ ಸಡ್ಡು ಹೊಡೆದು ತನ್ನದೇ ನೆಲದಲ್ಲಿ ಕಾಲೂರಿ ಹೋರಾಟ ನಡೆಸುತ್ತಿದೆ (Russia Ukraine War). ಆದರೆ ಈ ಮಧ್ಯೆ ಕೆಟ್ಟ ಮನಸ್ಥಿತಿ ಬೆಳೆಸಿಕೊಂಡಿರುವ ರಷ್ಯಾ ಉಕ್ರೇನ್ ನಲ್ಲಿ ಕಾಲೂರಿದ್ದ ಜನರನ್ನು ಅಕ್ಷರಶಃ ಕಾಲಿನಿಂದ ಒದೆಯುತ್ತಿದೆ. ಕಾಲಿಗೆ ಸಿಕ್ಕವರ ಒದೆಯುತ್ತಿದ್ದಾರೆ. ಕೈಗೆ ಸಿಕ್ಕವರನ್ನ ನೂಕುತ್ತಿದ್ದಾರೆ. ಮುಂದೆ ಹೆಜ್ಜೆ ಇಡದಂತೆ ಗುಂಡಿನ ಮೊರೆತ. ಬೆಂಕಿಯುಂಡೆ ಆಗಿರೋ ಉಕ್ರೇನ್​ನಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಜೀವ ಉಳಿಸಿಕೊಂಡ್ರೆ ಸಾಕು ಗಡಿ ದಾಟಿ ಹೋಗಬೇಕು ಅಂತಾ ಆಸೆಯಿಂದ ಬಂದವರಿಗೆ ಸಂಕಷ್ಟ ಶುರುವಾಗಿದೆ. ಈ ಮಧ್ಯೆ ಉಕ್ರೇನ್ ತೊರೆದಿರುವ 15 ಸಾವಿರಕ್ಕೂ ಹೆಚ್ಚು ಜನ ನೆರೆಯ ದೇಶಗಳಾದ ಪೋಲೆಂಡ್ ಮತ್ತು ಮೊಲ್ಡೊವಾಗೆ ಪಲಾಯನವಾಗಿದ್ದಾರೆ.

ಗಡಿಯಲ್ಲಿ ಭಾರತೀಯರು ಸೇರಿದಂತೆ ವಿದೇಶಿಗರ ಮೇಲೆ ಹಲ್ಲೆ? ಉಕ್ರೇನ್​ ಗಡಿಯಲ್ಲಿ ರಷ್ಯಾ ರಕ್ಕಸ ರೂಪ!
ರಷ್ಯಾ ಕೆಂಗಣ್ಣು ಬೀರಿದ್ದೇ ತಡ. ಉಕ್ರೇನ್ ನೆಲ ಕಾದ ಕೆಂಡವಾಗಿದೆ. ನಿಲ್ಲೋಕೆ ನೆಲ ಇಲ್ಲ. ಇರೋಕೆ ಸೂರು ಇಲ್ಲ ಅಂತಾ ಜನ ದಿಕ್ಕೆಟ್ಟು ಕೂತಿದ್ದಾರೆ. ಬದುಕಿತಾ ಬಡ ಜೀವ ಅಂತಾ ಗಡಿಗೆ ಬಂದ್ರೆ ಅಲ್ಲೂ ರಷ್ಯಾ ಸೇನೆ ರಕ್ಕಸ ರೂಪ ತೋರ್ತಿದೆ. ಲಗೇಜ್ ಸಮೇತ ಸ್ಲೋವಾಕಿಯಾದ ಗಡಿಗೆ ಬರ್ತಿರೋ ಭಾರತೀಯರನ್ನ ಹಿಂದೆಮುಂದೆ ನೋಡದೇ ಹಲ್ಲೆ ಮಾಡ್ತಿದ್ದಾರೆ. ವಿದ್ಯಾರ್ಥಿಗಳನ್ನ ಮಾತ್ರ ಗಡಿಯಿಂದ ಹೊರ ಬಿಡ್ತಿರೋ ರಷ್ಯಾ ಸೈನಿಕರು, ಬೇರೆಯವರನ್ನ ಮಾತ್ರ ಹಲ್ಲೆ ಮಾಡಿ ವಾಪಸ್ ಕಳಿಸ್ತಿದ್ದಾರೆ.

ಪೋಲ್ಯಾಂಡ್ ಗಡಿಯಲ್ಲಿ ಸೈನಿಕರ ದುರ್ವರ್ತನೆ!
ಪೋಲ್ಯಾಂಡ್ ಗಡಿಯಲ್ಲಿ ಸೈನಿಕರ ದುರ್ವರ್ತನೆ ಮುಂದುವರಿದಿದ್ದು, ಉಕ್ರೇನ್ ಹಾಗೂ ಪೋಲ್ಯಾಂಡ್ ಗಡಿಯೂ ರಣಾಂಗಣವಾಗಿದೆ. ಖಾರ್ಕೀವ್​ನಿಂದ ತಾಯ್ನಾಡಿಗೆ ತೆರಳಲು ಹೋಗಿರುವ ವಿವಿಧ ದೇಶಗಳ ನಾಗರಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಇಸ್ರೇಲ್, ಟರ್ಕಿ, ಭಾರತ, ಸೇರಿದಂತೆ ಹಲವು ದೇಶಗಳ ನಾಗರೀಕರು ಗಂಟುಮೂಟೆ ಸಮೇತ ಗಡಿಗೆ ಬಂದಿದ್ದಾರೆ. ಪೋಲ್ಯಾಂಡ್ ಗಡಿ ಪ್ರವೇಶ ಮಾಡಲು ಪೋಲ್ಯಾಂಡ್ ಸೈನಿಕರು ನಿಷೇಧಿಸುತ್ತಿದ್ದಾರೆ. ಭಾರತೀಯ ಮೂಲದ ವಿದ್ಯಾರ್ಥಿಗಳನ್ನ ತಾಯ್ನಾಡಿಗೆ ಕರೆಸಿಕೊಳ್ಳಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಅಂತಾ ಬಾಗಲಕೋಟೆ, ಬೀದರ್, ಕೋಲಾರ ಮೂಲದ ವಿದ್ಯಾರ್ಥಿಗಳು ಮನವಿ ಮಾಡ್ತಿದ್ದಾರೆ.

ಉಕ್ರೇನ್-ಸ್ಲೋವಾಕಿಯಾದಲ್ಲೂ ವಿದ್ಯಾರ್ಥಿಗಳ ಗೋಳಾಟ!
ಇತ್ತ ಉಕ್ರೇನ್​ ಹಾಗೂ ಸ್ಲೋವಾಕಿಯಾದ ಬಾರ್ಡರ್​ನಲ್ಲೂ ಭಾರತೀಯ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಕ್ರೇನ್ ಇವಾನೋ ಫ್ರಾಂಕ್​ನಿಂದ ಸ್ಲೋವಾಕಿಯಾಗೆ ಹೊರಟಿದ್ದರು. ಅದೂ ಉಕ್ರೇನ್ ನಲ್ಲಿರೋ ಭಾರತೀಯಾ ರಾಯಭಾರಿ ಕಚೇರಿ ಸೂಚನೆ ಮೇರೆಗೆ ತೆರಳ್ತಿದ್ದರು. ಆದ್ರೆ ಅಷ್ಟರಲ್ಲೇ, ಸ್ಲೋವೋಕಿಯಾ ಬಾರ್ಡರ್​ನಲ್ಲಿ ಭಾರತೀಯರನ್ನ ಸ್ಲೋಕಿಯಾ ಪಡೆ ತಡೆದಿದೆ. ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳು ಸೇರಿ ಕರ್ನಾಟಕದ ಹಲವು ವಿದ್ಯಾರ್ಥಿಗಳದ್ದು ಅರಣ್ಯರೋದನವಾಗಿದೆ.

ಒಟ್ನಲ್ಲಿ ಉಕ್ರೇನ್​ನಿಂದ ಬಂದು ಬದುಕಿದ್ರೆ ಸಾಕಪ್ಪಾ ಅಂತಿದ್ದವರಿಗೆ, ಗಡಿಯಲ್ಲೂ ನರಕ ದರ್ಶನವಾಗ್ತಿದೆ. ಭಾರತ ಮತ್ತು ವಿವಿಧ ದೇಶಗಳ ಜನ ಆತಂಕದಲ್ಲೇ ಕಾಲ ಕಳೀತಿದ್ದಾರೆ. ರಾಯಭಾರ ಕಚೇರಿಗಳು ಗಡಿಯಲ್ಲಿ ಅತಂತ್ರರಾದವರ ನೆರವಿಗೆ ಬರಬೇಕಿದೆ.

Russia Attack Ukraine: 14 ಮಕ್ಕಳು ಸೇರಿದಂತೆ 352 ನಾಗರಿಕರ ಸಾವು

Also Read:
Shivratri 2022; ಶಿವರಾತ್ರಿಯಂದು ಭೇಟಿ ನೀಡಲು ಸೂಕ್ತವಾದ ಬೆಂಗಳೂರಿನ ಶಿವನ ದೇವಸ್ಥಾನಗಳು

Also Read:
Ukraine Crisis: ಉಕ್ರೇನ್ ನಿರ್ಮಿತ ವಿಶ್ವದ ಬೃಹತ್​ ಸರಕು ಸಾಗಣೆ ವಿಮಾನ ಸುಟ್ಟು ಭಸ್ಮ

Published On - 6:47 am, Mon, 28 February 22