ಯುರೋಪಿಯನ್ ಯೂನಿಯನ್ ರಷ್ಯಾದ ಮೇಲೆ ಹೇರಿರುವ ಎಲ್ಲಾ ದಿಗ್ಭಂಧನಗಳು ಮುಂದುವರಿಯುತ್ತವೆ: ಉರ್ಸುಲ ವಾನ್ ಡರ್ ಲಿಯೆನ
ಸ್ಟ್ರಾಸ್ ಬರ್ಗ್ ನಡೆದ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರ ಪತ್ನಿ ಒಲೆಂಗ ಜೆಲೆನ್ಸ್ಕಾ ಕೂಡ ಭಾಗವಹಿಸಿದ್ದರು, ಯುರೋಪಿಯನ್ ಯೂನಿಯನ್ ನಾಯಕರು ಒಲೆಂಗ ಅವರನ್ನು ದೀರ್ಘ ಕರತಾಡನದ ಮೂಲಕ ಸ್ವಾಗತಿಸಿದರು.
ಸ್ಟ್ರಾಸ್ ಬರ್ಗ್: ವಿಶ್ವದ ಹಲವಾರು ಪ್ರಮುಖ ರಾಷ್ಟ್ರಗಳಿಂದ ತೀವ್ರ ಕಡೆಗಣನೆಗೆ ಒಳಗಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ (Vladimir Putin) ಒಳ್ಳೆಯ ದಿನಗಳು ಬರುವ ಸೂಚನೆಗಳು ಸದ್ಯಕ್ಕಂತೂ ಇಲ್ಲ ಅನಿಸುತ್ತೆ. ಯುರೋಪಿಯನ್ ಯೂನಿಯನ್ ಕಮೀಶನ್ ಮುಖ್ಯಸ್ಥೆ ಉರ್ಸುಲ ವಾನ್ ಡರ್ ಲಿಯೆನ (Ursula van der Leyen) ಅವರು ಹೇಳಿಕೆಯೊಂದನ್ನು ನೀಡಿ ಉಕ್ರೇನ್ ಮೇಲೆ ದಂಡೆತ್ತಿ ಹೋಗಿದ್ದಕ್ಕೆ ರಷ್ಯಾ ಮೇಲೆ ನಿರಂತರವಾಗಿ ಹೇರಲಾಗಿರುವ ದಿಗ್ಬಂಧನಗಳು (sanctions) ಮುಂದುವರಿಯುತ್ತವೆ ಅವುಗಳನ್ನು ಹಿಂಪಡೆಯುವ ಪ್ರಶ್ನೆ ಉದ್ಭವಿಸುವುದೇ ಇಲ್ಲ, ಯುರೋಪಿಯನ್ನರು ಮಾಸ್ಕೋ ವಿರುದ್ಧ ತಳೆದಿರುವ ಕಠಿಣ ನಿಲುವನ್ನು ಯಾವ ಕಾರಣಕ್ಕೂ ಸಡಲಿಸಬಾರದು ಎಂದು ಹೇಳಿದ್ದಾರೆ.
‘ಒಂದು ವಿಷಯವನ್ನು ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ದಿಗ್ಬಂಧನಗಳನ್ನು ಹಿಂಪಡೆಯುವ ಮಾತೇ ಇಲ್ಲ. ಇದು ನಮ್ಮ ಸಂಕಲ್ಪವನ್ನು ಪ್ರದರ್ಶಿಶಿಸುವ ಸಮಯ, ಯಾರನ್ನೂ ಖುಷಿಪಡಿಸುವ ಅಗತ್ಯ ನಮಗಿಲ್ಲ,’ ಎಂದು ಉರ್ಸುಲ ಅವರು ಯುರೋಪಿಯನ್ ಪಾರ್ಲಿಮೆಂಟ್ ನಲ್ಲಿ ತಮ್ಮ ವಾರ್ಷಿಕ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಹೇಳಿದರು.
ಸ್ಟ್ರಾಸ್ ಬರ್ಗ್ ನಡೆದ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರ ಪತ್ನಿ ಒಲೆಂಗ ಜೆಲೆನ್ಸ್ಕಾ ಕೂಡ ಭಾಗವಹಿಸಿದ್ದರು, ಯುರೋಪಿಯನ್ ಯೂನಿಯನ್ ನಾಯಕರು ಒಲೆಂಗ ಅವರನ್ನು ದೀರ್ಘ ಕರತಾಡನದ ಮೂಲಕ ಸ್ವಾಗತಿಸಿದರು.
ಕೀವ್ ಗೆ ಪ್ರಯಾಣ ಬೆಳಸಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರನ್ನು ತಾವು ಭೇಟಿಯಾಗುವುದಾಗಿ ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ಸದಸ್ಯರಿಗೆ ಉರ್ಸುಲ ಹೇಳಿದರು.
‘ಯುರೋಪಿನ ನೆರವಿನ ಬಗ್ಗೆ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಸವಿಸ್ತಾರವಾಗಿ ಚರ್ಚಿಸಲು ನಾನು ಬುಧವಾರ ಕೀವ್ ಗೆ ಪ್ರಯಾಣ ಬೆಳೆಸುತ್ತಿದ್ದೇನೆ, ಎಂದು ತಮ್ಮ ಪ್ರಮುಖ ರಾಜಕೀಯ ಭಾಷಣದಲ್ಲಿ ಉರ್ಸುಲ ಹೇಳಿದರು.
ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ಪಾರ್ಲಿಮೆಂಟ್ ನಮ್ಮ ಯೂನಿಯನ್ ಸ್ಥಿತಿಯ ಬಗ್ಗೆ ಮಾತಾಡುತ್ತಿದ್ದೇವೆ ಆದರೆ ಯೂರೋಪಿಯನ್ ಮಣ್ಣಿನ ಮೇಲೆ ಯುದ್ಧ ನಡೆಯುತ್ತಿದೆ, ಎಂದು ಉಕ್ರೇನ್ ಬಣ್ಣಗಳಲ್ಲಿ ಉಡುಪು ಧರಿಸಿದ್ದ ಉರ್ಸುಲ ಹೇಳಿದರು.
ಬಳಿಕ ಒಲೆನಾ ಅವರನ್ನು ಉದ್ದೇಶಿಸಿ ಮಾತಾಡಿದ ಅವರು, ಡಿಯರ್ ಒಲೆನಾ, ಪುಟಿನ್ ಕ್ರೌರ್ಯವನ್ನು ಮೆಟ್ಟಿ ನಿಲ್ಲಲು ಅಪಾರ ಧೈರ್ಯ ಬೇಕು, ನೀವು ಆ ಧೈರ್ಯವನ್ನು ಪ್ರದರ್ಶಿಸಿದ್ದೀರಿ, ಎಂದರು.