ತನ್ನ ಕೈಯಿಂದ ಫೋನ್ ಕಸಿದುಕೊಂಡಿದ್ದಕ್ಕಾಗಿ ಪೋಷಕರು ಹಾಗೂ ಅಕ್ಕನನ್ನು ಗುಂಡಿಕ್ಕಿ ಹತ್ಯೆ ಮಾಡಿ ವಾರಗಳ ಕಾಲ ಮೃತದೇಹಗಳ ಜತೆ ಬಾಲಕನೊಬ್ಬ ಕಾಲ ಕಳೆದಿರುವ ಘಟನೆ ಸಾವೊ ಪಾಲೊದಲ್ಲಿ ನಡೆದಿದೆ. ಸೋಮವಾರ ಬಾಲಕನೇ ಪೊಲೀಸರಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ. ಮಕ್ಕಳಿಬ್ಬರು ಮೊಬೈಲ್ಗಾಗಿ ಜಗಳವಾಡುತ್ತಿದ್ದರು ಆಗ ಪೋಷಕರು ಮೊಬೈಲ್ನ್ನು ಕಿತ್ತುಕೊಂಡಿದ್ದಕ್ಕೆ ಕೋಪಗೊಂಡ ಬಾಲಕ ಪೋಷಕರು ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದ.
ಮುನ್ಸಿಪಲ್ ಪೊಲೀಸ್ ಆಗಿದ್ದ ತಂದೆಯ ಸರ್ವೀಸ್ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸಿದ್ದಾಗಿ ಆತನೇ ತಿಳಿಸಿದ್ದಾನೆ.
ಸಹೋದರಿಯ ಮುಖಕ್ಕೂ ಗುಂಡು ಹಾರಿಸಿದ್ದಾನೆ, ಹಲವು ಗಂಟೆಗಳ ಬಳಿಕ ತಾಯಿ ಮನೆಗೆ ಬಂದಾಗ ಅದೇ ರಿವಾಲ್ವರ್ನಿಂದ ಆಕೆಯನ್ನೂ ಕೊಂದಿದ್ದಾನೆ.
ಆತನಿಗೆ ಮಾನಸಿಕ ಸಮಸ್ಯೆ ಏನಾದರೂ ಇತ್ತೇ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಯಾರೊಂದಿಗಾದರೂ ಮಾತನಾಡಿದ್ದಾನೆಯೇ ಯಾರಾದರೂ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಕಂಡುಹಿಡಿಯಬೇಕಿದೆ.
ಮತ್ತಷ್ಟು ಓದಿ: ಕಾರು ಅಪಘಾತ; ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ ಯುವತಿಯರು
ಆತ ಒಂದು ವಾರದವರೆಗೆ ರಕ್ತಸಿಕ್ತ ದೇಹಗಳ ಜತೆಗೆ ಮನೆಯಲ್ಲೇ ಇದ್ದ. ತಾಯಿಯ ಶವವನ್ನು ಚಾಕುವಿನಿಂದ ಇರಿದಿದ್ದಾನೆ. ಆತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ